22.1 C
Bengaluru
Thursday, November 14, 2024

Aero India 2023: ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ- 2023 ರ ಪ್ರದರ್ಶನದ ವಿಶೇಷ ಸಂಗತಿಗಳು

ಬೆಂಗಳೂರು, ಫೆಬ್ರವರಿ 13;ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ- 2023’ ಫೆಬ್ರವರಿ 13 ರಿಂದ 17 ರವರೆಗೆ ಬೆಂಗಳೂರಿನ ಯಲಹಂಕ 14ನೇ ಆವೃತ್ತಿಯ 2023ರ ವೈಮಾನಿಕ ಪ್ರದರ್ಶನ ನಡೆಯಲಿದೆ.ಫೆ.13 ರಿಂದ 17 ರವರೆಗೆ ಏರ್‌ ಶೋ ನಡೆಯಲಿದ್ದು, ಪ್ರದರ್ಶನದಲ್ಲಿ ಭಾಗಿಯಾಗುವ ವಿಮಾನಗಳು ಫೆ.8 ರಿಂದ ಪೂರ್ವಾಭ್ಯಾಸ ನಡೆಸಲಿವೆ. ಫೆ.11ಕ್ಕೆ ಅಂತಿಮ ಹಂತದ ಪೂರ್ವಾಭ್ಯಾಸ ನಡೆಯಲಿದೆ.ಫೆಬ್ರವರಿ 13ರಂದು ಬೆಳಗ್ಗೆ 9.30 ರಿಂದ 11.30ರವರೆಗೆ ಬೆಂಗಳೂರುಏರೋ ಇಂಡಿಯಾದ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಏರ್‌ ಶೋ ಅಂತ್ಯಗೊಂಡ ಬಳಿಕ ಫೆ.19ರಂದು ಎಲ್ಲಾ ವಿಮಾನಗಳು ಯಲಹಂಕ ವಾಯುನೆಲೆಯಿಂದ ನಿರ್ಗಮಿಸಲಿವೆ.ಗಮನ ಸೆಳೆಯುತ್ತಿರುವ ಐದು ದಿನಗಳ ಈ ಏರ್ ಶೋ ಫೆಬ್ರವರಿ 17 ರಂದು ಕೊನೆಗೊಳ್ಳಲಿದೆ.ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾ ಎಂಬ ‘ವಿಮಾನಗಳ ಸಂತೆ’ಯಲ್ಲಿ ಒಂದೇ ಕಡೆ 70ಕ್ಕೂ ಅಧಿಕ ಭಾರತೀಯ ಮತ್ತು ವಿದೇಶಿ ಯುದ್ಧ ವಿಮಾನ, ನಾಗರಿಕ ವಿಮಾನಗಳನ್ನು ಕಣ್ತುಂಬಿಕೊಳ್ಳಬಹುದು.

ಏರೋ ಇಂಡಿಯಾ 2023ರಲ್ಲಿ ಯಾವೆಲ್ಲಾ ಶೋ ಇರಲಿದೆ ?
ಭಾರತೀಯ ರಕ್ಷಣಾ ಪಡೆಯ ತೇಜಸ್‌, ಸೂರ್ಯಕಿರಣ್, ಸಾರಂಗ್, ರಫೇಲ್, ಡಕೋಟ, ಎಲ್‌ಸಿಎ, ಸೂಕೋಯ್-30 , ಎಂಕೆ-1 ಸೇರಿದಂತೆ 40 ಕ್ಕೂಅಧಿಕ ಯುದ್ಧವಿಮಾನಗಳು, 20 ನಾಗರಿಕ ಹಾಗೂ 10ಕ್ಕೂ ಹೆಚ್ಚು ವಿದೇಶಿ ವಿಮಾನಗಳು ಹಾರಾಟ ನಡೆಸಲಿವೆ. ಜತೆಗೆ ತಮ್ಮ ಸಾಮರ್ಥ್ಯವನ್ನು ಪರಸ್ಪರ ಒರೆಗೆ ಹಚ್ಚಲಿವೆ. ಅದರಲ್ಲೂ ಸೂರ್ಯಕಿರಣ್ ಯುದ್ಧ ವಿಮಾನ ಮತ್ತು ಸಾರಂಗ್ ಯುದ್ಧ ಹೆಲೆಕಾಪ್ಟರ್ ಜುಗಲ್‌ಬಂಧಿ, ಕ್ರಾಸ್ ಲೆವೆಲ್ ಮೈ ಜುಮ್‌ ಎನಿಸಿದರೇ, ಹೊಗೆ ಹೊರಸೂಸುತ್ತಾ ಬಾನಂಗಳದಲ್ಲಿ ಮೂಡಿಸುವ ಹೃದಯಾಕಾರದ ಚಿತ್ರಗಳು ಮನಸೋರೆಗೊಳಿಸುತ್ತವೆ.

ಏರ್ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಎಚ್ಸಿ ರೊಬೊಟಿಕ್ಸ್, ಎಸ್ಎಬಿ, ಸಫ್ರಾನ್, ರೋಲ್ಸ್ ರಾಯ್ಸ್, ಲಾರ್ಸನ್ & ಟೂಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಮತ್ತು ಬಿಇಎಂಎಲ್ ಲಿಮಿಟೆಡ್ ಪ್ರಮುಖ ಪ್ರದರ್ಶಕರಲ್ಲಿ ಸೇರಿವೆ. ಸುಮಾರು ಐದು ಲಕ್ಷ ಸಂದರ್ಶಕರು ಈ ಕಾರ್ಯಕ್ರಮಕ್ಕೆ ಭೌತಿಕವಾಗಿ ಹಾಜರಾಗುವ ನಿರೀಕ್ಷೆಯಿದೆ. ಇನ್ನೂ ಅನೇಕ ಮಿಲಿಯನ್ ಜನರು ದೂರದರ್ಶನ ಮತ್ತು ಇಂಟರ್ನೆಟ್ ಮೂಲಕ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.

ಏರೋ ಇಂಡಿಯಾ ಶೋ 2023 ವಿಶೇಷತೆಗಳು,
* ‘ಡಿಫೆನ್ಸ್‌ ಎಕ್ಸಿಬಿಷನ್‌ ಆರ್ಗನೈಸೇಷನ್‌’ ವತಿಯಿಂದ ಈ ವೈಮಾನಿಕ ಪ್ರದರ್ಶನ ನಡೆಯಲಿದೆ.

*ಐಎಎಫ್‌ನ ತೇಜಸ್ ವಿಮಾನವು ಹಗುರವಾದ, ಹೆಚ್ಚು ಸೂಪರ್‌ಸಾನಿಕ್ ಫೈಟರ್ ಆಗಿದ್ದು, ಏರೋ ಇಂಡಿಯಾ ಪ್ರದರ್ಶನದಲ್ಲಿ ಹೈಲೈಟ್ ಆಗುವ ನಿರೀಕ್ಷೆಯಿದೆ

*809 ಪ್ರದರ್ಶಕರಲ್ಲಿ 699 ಭಾರತೀಯ ಪ್ರದರ್ಶಕರು, 110 ವಿದೇಶಿ ಪ್ರದರ್ಶಕರಿದ್ದಾರೆ. 2021 ರಲ್ಲಿ, 55 ದೇಶಗಳ ಪ್ರತಿನಿಧಿಗಳು ಮತ್ತು 540 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು. ಈ ಬಾರಿ 251 ಎಂಒಯು, 98 ವಿದೇಶಿ ಕಂಪನಿಗಳು ಏರ್​ಶೋನಲ್ಲಿ ಭಾಗಿಯಾಗಲಿದ್ದಾರೆ.

*35 ಸಾವಿರ ಚದರ ಅಡಿ ಪ್ರದೇಶದಲ್ಲಿ ಎಕ್ಸಿಬಿಷನ್​ ಆಯೋಜನೆ ಮಾಡಲಾಗಿದೆ. 67 ಫ್ಲೈಯಿಂಗ್ ಡಿಸ್ಪ್ಲೇ, 36 ಸ್ಟ್ಯಾಂಡಿಂಗ್ ಡಿಸ್ಪ್ಲೇ, 809 ಪ್ರದರ್ಶಕರು ಇಲ್ಲಿಯವರೆಗೆ ನೋಂದಾಯಿಸಿಕೊಂಡಿದ್ದಾರೆ.

*ದೇಶ ವಿದೇಶದಿಂದ ವೈಮಾನಿಕ ಕ್ಷೇತ್ರದ ಉತ್ಪನ್ನಗಳ ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಸಾರ್ವಜನಿಕರು, ಪ್ರದರ್ಶನಕರು, ಉದ್ಯಮಿಗಳು ಅವರಿಗೆಂದೆ ಮೀಸಲಿಟ್ಟ ಪಾಸ್‌ಗಳನ್ನು ಖರೀದಿಸಿ ಭಾಗವಹಿಸಹುದು

*ಫೆ.13 ರಿಂದ 17ವರೆಗೂ ಏರೋ ಇಂಡಿಯಾ ನಡೆಯಲಿದ್ದು, ಕೊನೆಯ ಎರಡು ದಿನವಾದ ಫೆ.16 ಮತ್ತು 17ರಂದು ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

*ಕೊರೊನಾದಿಂದ ಕಳೆದ ಬಾರಿ ಸಾರ್ವಜನಿಕರಿಗೆ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಿದ್ದು, ಪ್ರದರ್ಶನ ನೇರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

*ಏರೋ ಇಂಡಿಯಾ 2023 ವೆಬ್‌ಸೈಟ್‌ www.aeroindia.gov.in ನಲ್ಲಿ ಟಿಕಟ್ ಲಭ್ಯವಿದೆ.

*ಸಾರ್ವಜನಿಕರಿಗೆ 2,500 ರೂಪಾಯಿ. ಉದ್ಯಮಿಗಳಿಗೆ 5,000 ರೂಪಾಯಿ.

*27 ಭಾರತೀಯ ಕಂಪನಿಗಳು ಸೇರಿದಂತೆ 73 ಕಂಪನಿಗಳು ಭಾಗಿಯಾಗುತ್ತವೆ. ಫೆ.14ರಂದು ಏರ್​ಶೋನಲ್ಲಿ 32 ದೇಶಗಳ ರಕ್ಷಣಾ ಸಚಿವರು ಭಾಗಿಯಾಗುತ್ತಾರೆ.

*ಏರ್​ಶೋ ಉದ್ಘಾಟನೆ ಕಾರ್ಯಕ್ರಮದಲ್ಲಿ 4000 ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

*ಯಲಹಂಕ ವಾಯುನೆಲೆಯ‌ ಸುತ್ತಮುತ್ತಲಿನ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನವರಿ 30ರಿಂದ ಫೆಬ್ರವರಿ 20ರ ತನಕ ಮಾಂಸಾಹಾರಿ ಆಹಾರಗಳ ಮಾರಾಟ ನಡೆಸದಂತೆ ನಿರ್ಬಂಧಿಸಿದೆ.

*ಈ ವರ್ಷದ ಏರೋ ಇಂಡಿಯಾ ಪ್ರದರ್ಶನ ‘ದ ರನ್‌ವೇ ಟು ಬಿಲಿಯನ್ ಅಪರ್ಚುನಿಟೀಸ್’ ಎಂಬ ಥೀಮ್‌ನಲ್ಲಿ ನಡೆಯುತ್ತಿದೆ.

Related News

spot_img

Revenue Alerts

spot_img

News

spot_img