24.2 C
Bengaluru
Friday, September 20, 2024

ರಸ್ತೆ ಬದಿ ಪ್ಲೆಕ್ಸ್‌ ಅಳವಡಿಸಿದ್ದ Casa Grand ಸಂಸ್ಥೆಗೆ ದಂಡ

#Fine # Casa Grand #organization # installed #roadside #plexes

ಬೆಂಗಳೂರು: ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿಭಾಗದ ಹೆಮ್ಮಿಗೆಪುರ(Hammigepura) ವಾರ್ಡ್ ವ್ಯಾಪ್ತಿಯಲ್ಲಿನ ತಲಘಟ್ಟಪುರ(Talagattapura) ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕಾಸಾ ಗ್ರಾಂಡ್ ವಸತಿ ಸಮುಚ್ಚ್ಚಯನಿರ್ಮಾಣ ಮಾಡುವ ಸಂಸ್ಥೆ ಹಾಕಿದ್ದ ಪ್ಲೆಕ್ಸ್‌(Flex) ತೆರವುಗೊಳಿಸಿದ ಪಾಲಿಕೆ, 50,000 ರು. ದಂಡವನ್ನು ವಸೂಲಿ ಮಾಡಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪೂರ್ಣಿಮಾ, ಮೋತಿಲಾಲ್ ಚೌಹಾಣ ವಾರ್ಡ್‌ನ ಮಾರ್ಷಲ್ ಸೇರಿದಂತೆ ವಲಯದ ಅಧೀಕ್ಷಕ ಅಭಿಯಂತರ ನಂದೀಶ.ಜೆ.ಆರ್. ನಿರ್ದೇಶನದಂತೆ ಕಾರ್ಯಾಚರಣೆ ನಡೆಸಲಾ ಗಿದ್ದು, ಕಾಸಾ ಗ್ರಾಂಡ್ ಸಂಸ್ಥೆಗೆ 50,000 ರು. ದಂಡ(Fine) ವಿಧಿಸಿ ವಸೂಲಿ ಮಾಡಲಾಗಿದೆ. ರಾಜರಾಜೇಶ್ವರಿ ನಗರ ವಲಯ ಆಯುಕ್ತ ಬಿ. ರೆಡ್ಡಿಶಂಕರ ಬಾಬು ಮತ್ತು ವಲಯ ಜಂಟಿ ಆಯುಕ್ತ ಅಜಯ್.ವಿ. ಮಾರ್ಗದರ್ಶನ ನೀಡಿ ದಂಡ ವಸೂಲಿಗೆ ಆದೇಶ ನೀಡಿದ್ದರು.ಅನಧಿಕೃತ ಫ್ಲೆಕ್ಸ್,ಜಾಹೀರಾತುಗಳನ್ನು ಅಳವಡಿಸಿರುವರ ವಿರುದ್ಧ ಕಾರ್ಯಾಚರಣೆ ನಡೆಸಲು ತಂಡವನ್ನದನ್ನು ರಚಿಸಲಾಗಿದೆ ಈ ತಂಡವು ನಿತ್ಯವು ವಲಯ ವ್ಯಾಪ್ತಿಯಲ್ಲಿ ಸಂಚರಿಸಿ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿವವರ ವಿರುದ್ಧ ದಂಡ ಪ್ರಯೋಗವನ್ನು ಮಾಡುತ್ತಿದೆ

Related News

spot_img

Revenue Alerts

spot_img

News

spot_img