ಬೆಂಗಳೂರು, ಜೂ. 02 : ಕಂಪನಿಯಿಂದ ತೆರೆಯುವ ಸ್ಯಾಲರಿ ಖಾತೆ ಸಾಮಾನ್ಯ ಉಳಿತಾಯ ಖಾತೆಗಿಂತಲೂ ಕೊಂಚ ವಿಭಿನ್ನವಾದದ್ದು. ಇದು ಸಾಮಾನ್ಯ ಉಳಿತಾಯ ಖಾತೆಯಂತೂ ಬಳಸಬಹುದು. ಸ್ಯಾಲರಿ ಖಾತೆಯನ್ನು ಝೀರೋ ಅಕೌಂಟ್ ಆಗಿ ತೆರೆಯಬಹುದು. ಇದನ್ನು ತೆರೆಯಲು ಮಿನಿಮಮ್ ಬ್ಯಾಲೆನ್ಸ್ ನ ಅವಶ್ಯಕತೆ ಇರುವುದಿಲ್ಲ. ಮೂರು ತಿಂಗಳ ಕಾಲ ಈ ಅಕೌಂಟ್ ನಲ್ಲಿ ಯಾವುದೇ ಹಣವಿಲ್ಲದಿದ್ದರೂ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ.
ಅದೇ ವಯಕ್ತಿಕ ಖಾತೆಯಲ್ಲಿ ಹಣ ಖಾಲಿಯಾದರೆ ಶುಲ್ಕ ಕಟ್ಟಬೇಕಾಗುತ್ತದೆ. ಹಾಗಾಗಿ ಸ್ಯಾಲರಿ ಖಾತೆಯನ್ನು ಹಾಗೆ ಉಳಿಸಿಕೊಳ್ಳುವುದು ನಿಮಗೆ ಒಳ್ಳೆಯದು. ಇನ್ನು ಸ್ಯಾಲರಿ ಖಾತೆಯ ಎಟಿಎಂ ಬಳಕೆಯೂ ಕೂಡ ಗ್ರಹಾಕ ಸ್ನೇಹಿಯಾಗಿದೆ. ಸ್ಯಾಲರಿ ಖಾತೆಯ ಎಟಿಎಂ ವಹಿವಾಟಿಗೆ ಯಾವುದೇ ಶುಲ್ಕವಿರುವುದಿಲ್ಲ. ಎಟಿಎಂ ಉಚಿತ ಹಾಗೂ ಅನಿಯಮಿತ ವಹಿವಾಟನ್ನು ಮಾಡಬಹುದಾಗಿದೆ. ವಯಕ್ತಿಕ ಉಳಿತಾಯ ಖಾತೆಗಳ ಎಟಿಎಂ ವಹಿವಾಟಿಗೆ ಮಿತಿ ಹೇರಲಾಗಿರುತ್ತದೆ.
ಮಿತಿಗಿಂತಲೂ ಹೆಚ್ಚು ವಹಿವಾಟು ನಡೆಸಿದರೆ, ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ಮಿತಿಯನ್ನು ಕೆಲವೊಮ್ಮೆ ಸ್ಯಾಲರಿ ಖಾತೆಗೂ ಇರುತ್ತದೆ. ಈ ಬಗ್ಗೆ ಮಾಹಿತಿಯನ್ನು ತಿಳಿದು ವಹಿವಾಟು ನಡೆಸುವುದು ಸೂಕ್ತ. ಇದರೊಂದಿಗೆ ಸ್ಯಾಲರಿ ಖಾತೆಯನ್ನು ಹೊಂದಿದ್ದರೆ, ಅದು ನಿಮಗೆ ಚೆಕ್ ಬುಕ್ ನೀಡುತ್ತದೆ. ಈ ಚೆಕ್ ಪುಸ್ತಿಕದ ಮೂಲಕ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ನೀವು ಸ್ಯಾಲರಿ ಖಾತೆಯನ್ನು ಹೊಂದಿದ್ದರೆ, ಆದಷ್ಟು ಬೇಗ ಚೆಕ್ ಬುಕ್ ಅನ್ನು ಪಡೆದುಕೊಳ್ಳಿ. ಇದರಿಂದ ನೀವು ಸಾಕಷ್ಟು ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ.
ಹಾಗಾಗಿ ಮರೆಯದೇ ಚೆಕ್ ಬುಕ್ ಅನ್ನು ಪಡೆಯಿರಿ. ಇನ್ನು ಸ್ಯಾಲರಿ ಅಕೌಂಟ್ ಇರುವವರಿಗೆ ಉಚಿತ ಸ್ಟೇಟ್ ಮೆಂಟ್ ಇ—ಮೇಲ್ ಮೂಲಕ ಉಚಿತವಾಗಿ ಬರುತ್ತದೆ. ಇವುಗಳ ಜೊತೆಗೆ ಸ್ಯಾಲರಿ ಖಾತೆಯನ್ನು ಹೊಂದಿರುವವರಿಗೆ ಬ್ಯಾಂಕಿಂಗ್ ಸೇವೆ, ಕ್ರೆಡಿಟ್ ಕಾರ್ಡ್ ಸೇವೆಗಳು ಲಭ್ಯವಿರುತ್ತದೆ. ಇವುಗಳನ್ನು ಮಿಸ್ ಮಾಡದೇ ಪಡೆದುಕೊಳ್ಳಿ. ಇದರೊಂದಿಗೆ, ಬ್ಯಾಂಕ್ ಲಾಕರ್ ಸೇವೆಯನ್ನೂ ಒದಗಿಸುತ್ತವೆ. ಸ್ಯಾಲರಿ ಅಕೌಮಟ್ ಇರುವವರಿಗೆ ಕೆಲ ಬ್ಯಾಂಕ್ ಗಳು ಲಾಕರ್ ಶುಲ್ಕವನ್ನು ಮನ್ನಾ ಮಾಡುತ್ತದೆ.
ಇನ್ನು ಎಸ್ ಬಿಐ ಬ್ಯಾಂಕ್ ನಲ್ಲಿ ನಿಮ್ಮ ಸ್ಯಾಲರಿ ಅಕೌಂಟ್ ಇದ್ದರೆ, ಇದು ಬ್ಯಾಂಕ್ ಲಾಕರ್ ಸೇವೆ ಮೇಲೆ ಶೇ.25ರಷ್ಟು ಶುಲ್ಕವನ್ನು ಕಡಿಗೊಳಿಸುತ್ತದೆ. ಆದರೆ ಒಂದನ್ನು ನೆನಪಿಡಿ. ನಿಮ್ಮ ಖಾತೆಗೆ ಸ್ಯಾಲರಿ ಬರುವುದು ನಿಂತ ತಿಂಗಳೀನಿಂದಲೇ ಎಲ್ಲಾ ಸೇವೆಗಳನ್ನು ಬ್ಯಾಂಕ್ ಗಳು ಹಿಂಪಡೆಯುತ್ತವೆ. ಸ್ಯಾಲರಿ ಅಕೌಂಟ್ ಮೂಲಕ ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿದುಕೋಮಡು ಉಪಯೋಗಗಳನ್ನು ಪಡೆದುಕೊಳ್ಳಿ.