26.4 C
Bengaluru
Wednesday, December 4, 2024

ಬ್ರಹ್ಮಾಂಡಕ್ಕೂ, ಮನುಷ್ಯನಿಗೂ, ವಾಸ್ತುವಿಗೂ ನಂಟಿದೆಯಾ.?

ಬೆಂಗಳೂರು, ಜ. 02 : ಬ್ರಹ್ಮಾಂಡಕ್ಕೂ ಜೀವಿಗಳಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಕಾಡುತ್ತದೆ. ಅದರೊಂದಿಗೆ ಈ ಶಾಸ್ತ್ರಗಳ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಹಲವರನ್ನು ಕಾಡುತ್ತಿರುತ್ತವೆ. ಅಂತಹ ಸಾಕಷ್ಟು ಪ್ರಶ್ನೆಗಳಿಗೆ ಪ್ರಶ್ನೆಗಳಿಗೆ ಡಾ. ರೇವತಿ ವೀ ಕುಮಾರ್ ಅವರು ಸರಳವಾಗಿ ಉತ್ತರ ನೀಡಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನವನ್ನು ಡಾ.ರೇವತಿ ವೀ ಕುಮಾರ್‌ ಅವರು ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡುತ್ತಿದ್ದಾರೆ. ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿರುವ ಡಾ. ರೇವತಿ ವೀ ಕುಮಾರ್ ವಾಸ್ತು ಬಗ್ಗೆ ಜನರಲ್ಲಿ ಇರುವ ಸಾಕಷ್ಟು ಪ್ರಶ್ನೆಗಳಿಗೆ, ಗೊಂದಲ ಹಾಗೂ ಅನುಮಾನಗಳಿಗೆ ಸರಳವಾಗಿ ಉತ್ತರ ಕೊಡುತ್ತಾರೆ.

ಈಗ ಬ್ರಹ್ಮಾಂಡಕ್ಕೂ ವಾಸ್ತುವಿಗೂ ಸಂಬಂಧವಿದೆಯಾ.? ಇದ್ದರೆ ಅದು ಹೇಗೆ.? ಮತ್ತು ಮನುಷ್ಯನಿಗೂ, ವಾಸ್ತುಗೂ ಹಾಗೂ ಬ್ರಹ್ಮಾಂಡಕ್ಕೂ ನಂಟಿದೆಯಾ.? ಬ್ರಹ್ಮಾಂಡ ಅಂದರೆ ಏನು.? ಬ್ರಹ್ಮಾಂಡ ಮತ್ತು ವಾಸ್ತು ಶಾಸ್ತ್ರದ ಬಗ್ಗೆ ನಂಟಿದೆ. ಮನುಷ್ಯನಿಗೂ, ಬ್ರಹ್ಮಾಂಡ ಮತ್ತು ವಾಸ್ತು ನಂಟಿನ ಬಗ್ಗೆ ಈ ಬಾರಿ ಡಾ.ರೇವತಿ ವೀ ಕುಮಾರ್‌ ಅವರು ಮಾತನಾಡಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಭಾರತೀಯ ಶಾಸ್ತ್ರದಲ್ಲಿ ನಮ್ಮ ಪೂರ್ವಜರು ಕೊಟ್ಟಿರುವ ಗ್ರಂಥಗಳಾಗಲಿ, ಇತಿಹಾಸ, ಧರ್ಮ ಶಾಸ್ತ್ರದಂತಹ ಗ್ರಂಥಗಳಲ್ಲಿ ಕೊಟ್ಟಿರುವ ವಿಚಾರಗಳ ಬಗ್ಗೆ ಈಗಿನ ವಿಜ್ಞಾನಿಗಳು ಸತ್ಯ ಎಂದು ಹೇಳುತ್ತಿದ್ದಾರೆ.

ಸನಾತನ ಧರ್ಮದಲ್ಲಿ ನಮ್ಮ ಪೂರ್ವಜರು ಬ್ರಹ್ಮಾಂಡದ ಬಗ್ಗೆ ಈಗಾಗಲೇ ತಿಳಿಸಿದ್ದಾರೆ. ಪುರಾಣದ ಗ್ರಂಥಗಳಲ್ಲಿ, ಅಂದರೆ, ಉಪನಿಷತ್ತುಗಳನ್ನು ಭಗವದ್ಗೀತೆ, 18 ಪುರಾಣಗಳನ್ನು ರಾಮಾಯಣ ಮತ್ತು ಮಹಾಭಾರತದಂತಹ ಸಾಕಷ್ಟು ಗ್ರಂಥಗಳಲ್ಲಿ ಈ ಬ್ರಹ್ಮಾಂಡದ ಬಗ್ಗೆ ಹೇಳಲಾಗಿದೆ. ಪ್ರಾಚೀನ ಋಷಿಗಳು, ಯೋಗಿಗಳು, ಅನುಭಾವಿಗಳು ಕಂಡುಕೊಂಡ ಬ್ರಹ್ಮಾಂಡದ ದರ್ಶನದ ಬಗ್ಗೆ ಸಾಕಷ್ಟು ಗ್ರಂಥಗಳಲ್ಲಿ ತಿಳಿಸಿದ್ದಾರೆ. ನೆಲದ ಮೇಲೆ ಕುಳಿತು ಆಹಾರ ಸೇವನೆಯನ್ನು ಮಾಡುವುದು, ಇದಲ್ಲದೆ ಸೂರ್ಯ ನಮಸ್ಕಾರ, ಉಪವಾಸ ಏಕೆ, ಚರಣ ಸ್ಪರ್ಶದ ವೈಜ್ಞಾನಿಕ ವಿವರಣೆ, ತುಳಸಿಯನ್ನು ಏಕೆ ಪೂಜೆ ಮಾಡಬೇಕು ಎಂಬುದು ಮತ್ತು ದೇವಸ್ಥಾನಕ್ಕೆ ಏಕೆ ಹೋಗಬೇಕು ಇಂತಹ ಹಲವು ವಿಷಯಗಳನ್ನು ನಾವು ವೈಜ್ಞಾನಿಕ ವಾಗಿ ನಾವು ಇಲ್ಲಿ ಕಾಣಬಹುದು ಆಗಿದೆ. ಹಿಂದೂ ಧರ್ಮವು ಬರೆದಿರುವ ಹಲವು ವಿಷಯಗಳನ್ನು ಹೀಗಿನ ಪ್ರಸ್ತುತ ಹಲವು ವಿಜ್ಞಾನ ಮತ್ತು ವಿಜ್ಞಾನಿಗಳು ಇವುಗಳನ್ನು ಅನುಸರಿತುತ್ತಾರೆ.

ಪ್ರಕೃತಿಯ ಸೀಕ್ರೆಟ್ಸ್‌ ಅನ್ನ ನಮ್ಮ ಋಷಿ ಮುನಿಗಳು ಆಗಲೇ ಕಂಡುಕೊಂಡು ಶಾಸ್ತ್ರಗಳಲ್ಲಿ ಬಳಕೆ ಮಾಡುತ್ತಿದ್ದರು. ಇದರ ಸರಿಯಾದ ಅರ್ಥವನ್ನು ನಾವು ತಿಳಿದುಕೊಂಡಾಗಲೇ ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡುವುದು ಸತ್ಯ. ನಮ್ಮ ಶಾಸ್ತ್ರಗಳು ಅಷ್ಟು ಮಹತ್ವದ್ದಾಗಿವೆ. ಬ್ರಹ್ಮಾಂಡ ಅಂತ ಹೇಳಿದಾಗ ನಮ್ಮ ಕಣ್ಣ ಮುಂದೆ ಬರುವುದು ಆಕಾಶ, ಚಂದ್ರ, ಸೂರ್ಯ, ನಕ್ಷತ್ರಗಳು ಇವನ್ನೇ ಈಗ ವಿಜ್ಞಾನಿಗಳು ಮಿಲ್ಕೀ ವೇ, ಸೋಲಾರ್‌ ಸಿಸ್ಟಮ್ ಎಂದು ಹೇಳುತ್ತಾರೆ. ಈಗಾಗಲೇ ಪೂರ್ವಿಕರು ಸೌರಮಂಡಲದ ಬಗ್ಗೆ ಹೇಳಿದ್ದಾರೆ. ನಾವು ಈಗಾಗಲೇ ಲೋಕಗಳು, ಭೂಮಿಯ ಮೇಲೆ ಏಳು ಲೋಕಗಳು, ಕೆಳಗೆ ಏಳು ಪಾತಾಳಗಳು. ಇದನ್ನೆಲ್ಲಾ ನಾವು ಮೊದಲೇ ತಿಳಿದಿದ್ದೇವೆ. ಪ್ರಪಂಚದ ಸೃಷ್ಟಿಯೇ ಪಂಚಭೂತಗಳ ಮೇಲಿದೆ. ಹಾಗೆಂದ ಮೇಲೆ ಬ್ರಹ್ಮಾಂಡ, ವಾಸ್ತು ಮತ್ತು ಮನುಷ್ಯರಿಗೆ ನಂಟಿರುವುದು ಸತ್ಯ ಎಂದು ಹೇಳಿದ್ದಾರೆ.

Related News

spot_img

Revenue Alerts

spot_img

News

spot_img