28.6 C
Bengaluru
Monday, February 10, 2025

ಮನೆ ಗೋಡೆಯ ಬಣ್ಣಕ್ಕೂ ವಾಸ್ತುವಿಗೂ ಸಂಬಂಧವಿದೆಯಾ..?

Vastu : ಬೆಂಗಳೂರು, ಜ. 12 : ಮನೆಯ ಗೋಡೆಗಳಿಗೆ ಬಳಿಯುವ ಬಣ್ಣಗಳಿಗೂ ವಾಸ್ತು ಶಾಸ್ತ್ರದ ಪ್ರಕಾರ ಬಳಕೆ ಮಾಡಲಾಗುತ್ತೆ. ಇದಕ್ಕೆ ಕಾರಣವೂ ಇದ್ದು ಅದು ಏನೆಂದು ತಿಳಿಯಿರಿ. ಬಣ್ಣಗಳ ಪ್ರಭಾವ ಎಂದು ಬಂದಾಗ ಮೊದಲು ಬಣ್ಣಗಳು ಅಂದರೆ ಏನು ಎಂಬುದನ್ನು ತಿಳಿಯೋಣ. ಮೂಲತಃ ಬಣ್ಣ ಎಂದರೆ, ಕಿರಣಗಳನ್ನು ಕಂಡು ಹಿಡಿದಾಗ ಅಲ್ಟ್ರಾವೈಲೆಟ್ ಮತ್ತು ಇನ್ಫಾರೇಡ್ ಎರಡರ ನಡುವಲ್ಲಿ ಇರುವಂತಹ ಬ್ಯಾಂಡ್ ಸ್ಪೆಕ್ಟ್ರಂ ಅನ್ನ ವಿಸಿಬಲ್ ಲೈಟ್ ಎಂದು ಕರೆಯಲಾಗಿದೆ. ಇದು ಕಣ್ಣಿಗೆ ಕಾಣುವಂತಹ ಬೆಳಕು ಎಂದು ಹೇಳಿದ್ದಾರೆ. ಈ ಕಣ್ಣಿಗೆ ಕಾಣುವಂತಹ ಬೆಳಕುಗಳನ್ನೇ ಬಣ್ಣ ಎಂದು ಹೇಳಲಾಗಿದೆ. 7 ವಿಬ್ ಗಯಾರ್ ಬಣ್ಣಗಳ ಬಗ್ಗೆ ಓದಿರುತ್ತೀರಿ ಅಥವಾ ಕಾಮನಬಿಲ್ಲಿನ ಬಣ್ಣಗಳು ನಿಮಗೆ ಗೊತ್ತೇ ಇದೆ. ಈ ಏಳು ಬಣ್ಣಗಳು ಲೈಟ್ ನಲ್ಲಿ ಕಾಣುತ್ತೆ ಎಂದು ಹೇಳಿದ್ದಾರೆ.

ಇನ್ನು ಎರಡನೇಯದಾಗಿ, ಆ ಲೈಟ್ ಬಗ್ಗೆ ಸ್ಟಡಿ ಮಾಡುವುದಾದರೆ, ಕ್ವಾಂಟಂ ಫಿಸಿಕ್ಸ್ ಅನ್ನು ಹೇಳಲಾಗುತ್ತೆ. ಲೈಟ್ ಎನ್ನುವುದು ತನ್ನದೇ ಆದಂತಹ ಶಕ್ತಿಯನ್ನು ಹೊಂದಿರುತ್ತದೆ. ಬಣ್ಣದಿಂದ ಹೊರಡುವ ಶಕ್ತಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಬಣ್ಣವಾದರೂ ಅದರ ಪರಿಣಾಮ ಇದ್ದೇ ಇರುತ್ತದೆ. ಹಾಗಾಗಿ ನಾವು ಯಾವ ಕೋಣೆಗೆ ಎಷ್ಟು ಬಣ್ಣ, ಅದರಲ್ಲೂ ಯಾವ ಬಣ್ಣ ಇರಬೇಕು ಎಂಬುದನ್ನು ನಿರ್ಧಾರ ಮಾಡಲೇ ಬೇಕು. ಮನೆಗೆ ಬಣ್ಣಗಳನ್ನು ಅಳವಡಿಸಿಕೊಳ್ಳಬೇಕಾದರೆ ಯಾವ ಬಣ್ಣವನ್ನು ಅಳವಡಿಸಿಕೊಳ್ಳಬೇಖು ಎಂಬುದನ್ನು ನೋಡಬೇಕು.

ಬಿಳಿ ಬಣ್ಣ ಇದ್ದರೆ ಅದು ಸೂಕ್ತವಲ್ಲ. ಆದರೆ, ಪೂಜಾ ಕೋಣೆಗೆ ಮಾತ್ರವೇ ಬಿಳಿ ಬಣ್ಣ ಸೂಕ್ತವಾಗಿರುತ್ತದೆ. ಕಾರಣ ಇಲ್ಲಿ ಶಾಂತಿ ಕೆಲಸವಾಗಿ ಕಾರ್ಯ ನಿರ್ವಹಿಸುತ್ತದೆ. ಕಪ್ಪು ಬಣ್ಣ ಎಂದು ಬಂದಾಗ, ಇದು ಎಲ್ಲಾ ಬಣ್ಣಗಳನ್ನೂ ಎಳೆದುಕೊಂಡು ಬಿಡುತ್ತದೆ. ಇದರಿಂದ ಯಾವುದೇ ಎನರ್ಜಿಯಾದರೂ ಅದನ್ನು ತನ್ನಲ್ಲಿ ಸೇರಿಸಿಕೊಳ್ಳುವುದರಿಂದ ಮನೆಯಲ್ಲಿ ಕಪ್ಪು ಬಣ್ಣವನ್ನು ಬಳಸಬಾರದು. ಇನ್ನು ಗ್ರಹಗಳ ನಿರ್ಧಾರದ ಮೇಲೆ ಮನೆಗಳಿಗೆ ಬಣ್ಣಗಳನ್ನು ಆಯ್ಕೆ ಮಾಡಲಾಗುತ್ತದೆ. ಪೂರ್ವ ಎಂದು ಬಂದಾಗ ಸೂರ್ಯ ಹುಟ್ಟುವ ದಿಕ್ಕಾದ್ದರಿಂದ ಇಲ್ಲಿ ಪಿಂಕ್, ಲೈಟ್ ಪಿಂಕ್ ಬಳಸುವುದು ಸೂಕ್ತ. ದಕ್ಷಿಣದ ಕಡೆ ಕೆಂಪು ಬಣ್ಣ ಹಾಕಬಾರದು ಹಾಗಾಗಿ ಮಣ್ಣಿನ ಬಣ್ಣವನ್ನು ಬಳಸುವುದು ಸೂಕ್ತ.

ಇನ್ನು ಪಶ್ಚಿಮದಲ್ಲಿ ಶನಿಗೆ ಸಂಬಂಧಪಟ್ಟ ಕಾರಣ ಇಲ್ಲಿಗೆ ನೀಲಿ ಬಣ್ಣ ಒಳ್ಳೆಯದು. ಆ ನೀಲಿ ಆದಷ್ಟು ಲೈಟ್ ಆಗಿ ಇದ್ದರೆ ಸೂಕ್ತ. ಉತ್ತರದಲ್ಲಿ ಬುಧನ ಬಣ್ಣ ಹಸಿರನ್ನು ಬಳಸಬಹುದು. ಇದು ಎಲ್ಲರಿಗೂ ಸಾಮಾನ್ಯವಾಗಿ ಅನ್ವಯವಾಗುತ್ತೆ. ಇದನ್ನು ವಾಸ್ತು ಬಣ್ಣ ಎಂದು ಹೇಳಲಾಗಿದೆ. ಮನೆಯ ಹಾಲ್ ನಲ್ಲಿ ಮನೆಯವರೆಲ್ಲರೂ ಒಟ್ಟಿಗೆ ಇರುವುದರಿಂದ ಇಲ್ಲಿ ಹಳದಿ ಅಥವಾ ಕ್ರೀಮ್ ಬಣ್ಣಗಳನ್ನು ಬಳಸುತ್ತೇವೆ. ದಕ್ಷಿಣದಲ್ಲಿ ಗಂಡು ಮಕ್ಕಳ ಬೆಡ್ ರೂಮ್ ಇತ್ತು ಎಂದಾದರೆ, ಅಲ್ಲಿ ಲೈಟ್ ಪಿಂಕ್ ಅಥವಾ ಲೈಟ್ ಬ್ರೌನ್ ಬಳಸುವುದು ಒಳ್ಳೆಯದು, ನೈರುತ್ಯದಲ್ಲಿ ಯಜಮಾನನ ಕೋಣೆ ಇದ್ದರೆ, ಇಲ್ಲಿ ಒಂದೊಂದು ಗೋಡೆಗೆ ಒಂದೊಂದು ಬಣ್ಣ ಬಳಿಯುವುದು ಒಳ್ಳೆಯದು. ಅದರಲ್ಲೂ ಸ್ವಲ್ಪ ಡಾರ್ಕ್ ಕಲರ್ ಗಳು ಇದ್ದರೆ, ಸೂಕ್ತ.

ಪಶ್ಚಿಮದಲ್ಲಿ ಬೆಡ್ ರೂಮ್ ಗಳಲ್ಲಿ ನೀಲಿ ಬಣ್ಣಗಳನ್ನು ಬಳಸಬಹುದು. ಇನ್ನು ಬೆಡ್ ರೂಮ್ ನಲ್ಲಿ ಆದಷ್ಟು ಕೆಂಪು ಬಣ್ಣಗಳನ್ನು ಬಳಸಬಾರದು. ಅಡುಗೆ ಮನೆಯಲ್ಲಿ ಬ್ರೌನ್ ಅಥವಾ ನೀಲಿ ಬಣ್ಣ ಒಳ್ಳೆಯದು. ಇನ್ನು ಬಾತ್ ರೂಮ್ ನಲ್ಲಿ ವಾಯುವ್ಯದಲ್ಲಿ ಇರುವುದರಿಂದ ಆದಷ್ಟು ನೀಲಿ ಅಥವಾ ಹಸಿರು ಶೇಡ್ ಗಳಿದ್ದರೆ ಒಳ್ಳೆಯದು.

Related News

spot_img

Revenue Alerts

spot_img

News

spot_img