26.4 C
Bengaluru
Wednesday, December 4, 2024

ಮನೆಯಲ್ಲಿ ಪಾರಿವಾಳಗಳನ್ನು ಸಾಕಬಹುದೇ..?

ಬೆಂಗಳೂರು, ಮೇ. 02 : ಪಾರಿವಾಳಗಳನ್ನು ಮನೆಯಲ್ಲಿ ಸಾಕಬಹುದೇ ಎಂಬ ಪ್ರಶ್ನೆಗಳನ್ನು ಹಲವರು ಕೇಳುತ್ತಾರೆ. ಸಾಮಾನ್ಯವಾಗಿ ಮನೆಯಲ್ಲಿ ಸಾಕು ಪ್ರಾಣಿಗಳನ್ನು ಸಾಕುವುದಕ್ಕೂ ಪಾರಿವಾಳವನ್ನು ಬಹಳಷ್ಟು ವ್ಯತ್ಯಾಸವಿದೆ. ಶಕುನ ಶಾಸ್ತ್ರ ಎಂದು ವಾಸ್ತುವಿನಲ್ಲಿದೆ. ಇದರ ಪ್ರಕಾರ, ಶಕುನ ಶಾಸ್ತ್ರದಲ್ಲಿ ಪಾರಿವಾಳದ ಕೂಗು ಯಾವ ದಿಕ್ಕಿನಲ್ಲಿ ಯಾವ ಸಮಯದಲ್ಲಿ ಕೂಗುತ್ತೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಶುಭ ಹಾಗೂ ಅಶುಭ ಫಲಗಳನ್ನು ಹೇಳಲಾಗುತ್ತದೆ.

ಹಾಗಾಗಿ ಪಾರಿವಾಳಗಳನ್ನು ಸಾಕು ಪ್ರಾಣಿಗಳನ್ನು ಇಂತಹ ದಿಕ್ಕಿನಲ್ಲೇ ಇಟ್ಟುಕೊಳ್ಳಬೇಕು ಎಂದು ಹೇಳಲಾಗುವುದಿಲ್ಲ. ಮನೆಯಲ್ಲಿ ಸಾಕುತ್ತಿರುವ ಪಾರಿವಾಳಗಳು ಮನೆಯಲ್ಲೆಲ್ಲಾ ಓಡಾಡುವುದರಿಂದ ಅದು ಯಾವ ದಿಕ್ಕಿನಲ್ಲಿದ್ದಾಲೇ ಆಗಲೀ ಅಥವಾ ಯಾವ ಸಂದರ್ಭದಲ್ಲೇ ಆಗಲೀ ಕೂಗುವುದನ್ನು ಪರಿಗಣಿಸಲಾಗುವುದದಿಲ್ಲ. ಇನ್ನು ಹೊರಗಿನಿಂದ ಬರುವ ಪಾರಿವಾಳಗಳು ಕೂಗುವುದನ್ನು ಕೇಳಿ ಶುಭ ಶಕುನಗಳನ್ನು ನೋಡಿ ಹೇಳಬಹುದು.

ಇನ್ನು ಇದನ್ನು ಹೊರತುಪಡಿಸಿ ಪಾರಿವಾಳಗಳು ಮನೆಯಲ್ಲಿದ್ದರೆ ಧನವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಸಾಲಗಳು ಹೆಚ್ಚುತ್ತವೆ ಎಂದು ಹೇಳಲಾಗಿದೆ. ಕೆಲವರು ಪಾರಿವಾಳಗಳನ್ನು ಇಟ್ಟುಕೊಂಡು ಅದು ಎಷ್ಟು ದೂರ ಹಾರುತ್ತದೆ ಎಂದು ಹಣ ಕಟ್ಟಿ ಆಡುತ್ತಾರೆ. ಇನ್ನು ಪಾರಿವಾಳಗಳನ್ನು ಕೈ ಮೇಲೆ, ಭುಜದ ಮೇಲೆ ಕೂರಿಸಿಕೊಂಡು ಖುಷಿ ಪಡುವವರೂ ಇದ್ದಾರೆ. ಹಾಗಾಗಿ ಪಾರಿವಾಳಗಳನ್ನು ಸಾಕುವುದರಿಂದ ತಪ್ಪೇನು ಆಗುವುದಿಲ್ಲ.

ಆದರೆ, ಪಾರಿವಾಳಗಳು ಸದಾ ಮನೆಯಲ್ಲಿ ಸೌಂಡ್ ಮಾಡುತ್ತಲೇ ಇರುತ್ತದೆ. ಇದರಿಂದ ಮನೆಯಲ್ಲಿ ಕೆಲವರಿಗೆ ನೆಮ್ಮದಿ ಸಿಗದೇ ಇರಬಹುದು. ಕೆಲವರಿಗೆ ಸದಾ ಕೂಗುವ ಪಾರಿವಾಳಗಳಿಂದ ಬೇಸರವಾಗಬಹುದು. ಇನ್ನು ಪಾರಿವಾಳದ ಹಿಕ್ಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಅದರ ವಾಸನೆಯಿಂದ ಶ್ವಾಸಕೋಷಕ್ಕೆ ಸಮಸ್ಯೆ ಆಗುತ್ತದೆ ಎಂಬುದನ್ನು ಹೇಳಲಾಗಿದೆ. ಇದೆಲ್ಲಾ ಹೊರತು ಪಡಿಸಿದರೆ, ಮನೆಯ ಹೊರಗೆ ಗೂಡು ಕಟ್ಟಿ ಪಾರಿವಾಳವನ್ನು ಸಾಕುವುದರಿಂದ ಶುಭ ಫಲಗಳು ಇರುತ್ತವೆ.

Related News

spot_img

Revenue Alerts

spot_img

News

spot_img