ಬೆಂಗಳೂರು, ಮೇ. 03 : ಹಳೆ ಮನೆಯನ್ನು ಖರೀದಿಸುವಾಗ ಕೆಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಎಲ್ಲರೂ ನಿವೇಶನವನ್ನು ಖರೀದಿಸಿ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಇನ್ನು ಶನಿ ಪ್ರಭಾವ ಇದ್ದಾಗ ಅವರು ಹಳೆಯ ಮನೆಯನ್ನು ತೆಗೆದುಕೊಳ್ಳುವ ಯೋಗ ಇರುತ್ತದೆ. ಮನೆಯನ್ನು ಖರೀದಿಸಿ ಸುಳವಾಗಿ ಇರುತ್ತಾರೆ. ಹಳೆಯ ಮನೆಯನ್ನು ಖರೀದಿಸುವಾಗ ವಾಸ್ತುವಿನಲ್ಲಿ ಮೂಲತತ್ವ ಇದೆ. ಅದರ ಪ್ರಕಾರ ಹಳೆಯ ಮನೆಯನ್ನು ಒಬ್ಬ ಒಡೆಯನಿಂದ ಮತ್ತೊಬ್ಬನಿಗೆ ಹಸ್ತಾಂತರವಾಗಲು ಮೂಲ ಕಾರಣ ಇರುತ್ತದೆ.
ಲೋಪ-ದೋಷಗಳು, ಪೂರ್ವ ಕರ್ಮಗಳು ಹೀಗೆ ಏನಾದರೂ ಒಂದು ಇರುತ್ತದೆ. ಹೀಗಾಗಿ ಹಳೆಯ ಮನೆಯನ್ನು ಖರೀದಿಸುವಾಗ ಅಲ್ಲಿದ್ದವರಿಗೆ ಏನಾದರೂ ಸಮಸ್ಯೆ ಇದೆಯಾ.? ಆ ಮನೆಗೆ ಬಂದ ಮೇಲೆ ತೊಂದರೆ ಎದುರಿಸಿದ್ದಾರಾ..? ಆ ಮನೆಯನ್ನು ಮಾರಾಟ ಮಾಡಲು ಕಾರಣವೇನು..? ಮನೆಯನ್ನು ನಿರ್ಮಿಸಿದ್ದು ಒಡೆಯನಾ ಅಥವಾ ಅವರೂ ಕೂಡ ಖರೀದಿ ಮಾಡಿದ್ದಾ ಇಲ್ಲವೇ ಅವರ ಹಿರಿಯರು ನಿರ್ಮಿಸಿದ ಮನೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ.
ಸಾಮಾನ್ಯವಾಗಿ ಮನೆಯನ್ನು ಮಾರಾಟ ಮಾಡುವವರು ಆ ಮನೆಯಲ್ಲಿ ತಮಗೇನಾದರೂ ಸಮಸ್ಯೆ ಇದ್ದರೂ ಹೇಳಿಕೊಳ್ಳುವುದಿಲ್ಲ. ಆದರೆ ಆ ಮನೆಯಲ್ಲಿ ಗಂಭೀರವಾದ ಸಮಸ್ಯೆಗಳು ಇದ್ದಲ್ಲಿ, ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ತಿಳಿದುಕೊಳ್ಳಬೇಕು. ಇನ್ನೊಂದು ವಿಚಾರ ಎಂದರೆ, ನೀವು ಖರೀದಿಸಬೇಕು ಎಂಬುದರ ಮನೆಯೂ ಹೇಗಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಮೂರನೇಯದಾಗಿ ಮನೆಯ ಒಳಗಿನ ವಿನ್ಯಾಸದ ಬಗ್ಗೆಯೂ ನೋಡಿ ತೀರ್ಮಾನಿಸಬೇಕು.
ಮನೆಯನ್ನು ವಾಸ್ತು ಪ್ರಕಾರವಾಗಿ ನಿರ್ಮಿಸಲಾಗಿದೆಯಾ ಎಂಬ ಬಗ್ಗೆ ಚೆಕ್ ಮಾಡಿಕೊಳ್ಳಬೇಕು. ಇನ್ನು ಮನೆಯ ಸುತ್ತ ಮುತ್ತಲೂ ಏನೆಲ್ಲಾ ಇದೆ ಎಂಬುದನ್ನು ತಿಳಿದುಕೊಳ್ಳಬೇಕು. ಸ್ಮಶಾನ, ದೇವಸ್ಥಾನ, ಮರಗಳು ಯಾವುದಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನೆಗೆಟಿವ್ ಎನರ್ಜಿಗಳಿಂದ ದೂರವಿದ್ದಾಗ ಮಾತ್ರವೇ ಮನೆಯನ್ನು ಖರೀದಿಸುವ ಆಲೋಚನೆಯನ್ನು ಮಾಡಬೇಕು. ಇಲ್ಲವೇ ಸುಮ್ಮನೆ ಮನೆಯನ್ನು ಖರೀದಿಸಬೇಕು ಎಂದು ಯಾವುದೋ ಒಂದು ಮನೆಯನ್ನು ಖರೀದಿ ಮಾಡಿದರೆ, ಸಮಸ್ಯೆ ಆಗುತ್ತದೆ.