26.3 C
Bengaluru
Friday, October 4, 2024

ಟ್ರಾವೆಲ್ ವಿಮಾದಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ..?

ಬೆಂಗಳೂರು, ಜು. 21 : ಟ್ರಾವೆಲ್ ಇನ್ಶುರೆನ್ಸ್ ನಲ್ಲಿ ಎರಡು ಬಗೆ ಇದೆ. ಇವು ದೇಶ ಅಥವಾ ಹೊರದೇಶಗಳಿಗೆ ಪ್ರಯಾಣ ಬೆಳೆಸಿದಾಗಲೂ ಇವು ಬೆಳಕೆಗೆ ಬರುತ್ತವೆ. ಮೊದಲನೇಯ ಟ್ರಾವೆಲ್ ಇನ್ಶುರೆನ್ಸ್ ನಲ್ಲಿ ಪ್ರವಾಸ ಕೈಗೊಂಡಾಗ ವೈದ್ಯಕೀಯ ಸಂಬಂಧಿತ ಅಕಸ್ಮಿಕ ಘಟನೆಗಳು ಸಂಭವಿಸಬಹುದು. ಆಗ ಈ ಟ್ರಾವೆಲ್ ಇನ್ಶುರೆನ್ಸ್ ಕವರ್ ಆಗುತ್ತದೆ. ಪ್ರಾಕೃತಿಕ ಅವಘಡಗಳು ಸೇರಿದಂತೆ ಕೆಲ ದುರ್ಘಟನೆಗಳು ಎದುರಾದರೆ, ಆಗಲೂ ಈ ಸ್ಕೀಮ್ಗಳಿಂದ ರಿಲೀಫ್ ಸಿಗುತ್ತದೆ.

ಇನ್ನು ಎರಡನೇಯ ಪ್ರಯಾಣ ವಿಮೆಯಲ್ಲಿ ಹೆಚ್ಚಿನ ಕವರೇಜ್ ಗಳು ಸಿಗುತ್ತವೆ. ನೀವು ಟ್ರಾವೆಲ್ ಮಾಡುವಾಗ ಅಕಸ್ಮಾತ್ ಆಗಿ ಬ್ಯಾಗ್ ಅನ್ನು ಕಳೆದುಕೊಂಡರೆ, ಅದಲ್ಲಿ, ಪಾಸ್ಪೋರ್ಟ್ ಅಥವಾ ಟಿಕೆಟ್ ಗಳು ಇದ್ದರೆ, ಆಗ ನಿಮಗೆ ಇನ್ಶುರೆನ್ಸ್ ಉಪಯೋಗಕ್ಕೆ ಬರುತ್ತದೆ. ಇನ್ನು ನಿಮ್ಮ ಪ್ರಯಾಣದ ಟಿಕೆಟ್ ದಿಢೀರ್ ಎಂದು ರದ್ದಾದರೆ ಅನಗತ್ಯ ವೆಚ್ಚವನ್ನು ಇನ್ಶುರೆನ್ಸ್ ಮೂಲಕ ಕ್ಲೈಮ್ ಮಾಡಿಕೊಳ್ಳಬಹುದು. ಅನಾರೋಗ್ಯದ ವೆಚ್ಚವನ್ನೂ ಭರಿಸುತ್ತದೆ.

ಇನ್ನು ಇತ್ತೀಚೆಗೆ ವ್ಯಾಸಂಗಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಜಗಳ ಸೇರಿದಂತೆ ಇತರೆ ವಿವಾದಗಳಲ್ಲಿ ಸಿಕಿದಾಗ ಇನ್ಶುರೆನ್ಸ್ ಕಂಪನಿಗಳು ಸಹಾಯಕ್ಕೆ ಬರುತ್ತವೆ. ವಿದೇಶದಲ್ಲಿದ್ದಾಗ ಎದುರಾಗುವ ಕೆಲ ಕಾನೂನು ವ್ಯಾಜ್ಯಗಳ ವೆಚ್ಚವನ್ನು ಭರಿಸುತ್ತವೆ. ಈ ಸಂದರ್ಭದಲ್ಲಿ ಅನಾರೋಗ್ಯ, ಹಾಗೂ ಅನಗತ್ಯ ಖರ್ಚಿನ ಬಿಲ್ ಗಳನ್ನು ಇಟ್ಟುಕೋಮಡಿದ್ದರೆ, ಇನ್ಶುರೆನ್ಸ್ ಅನ್ನು ಕ್ಲೈಮ್ ಮಾಡುವುದು ಸುಲಭವಾಗುತ್ತದೆ.

Related News

spot_img

Revenue Alerts

spot_img

News

spot_img