25.8 C
Bengaluru
Friday, November 22, 2024

ಅಕ್ರಮವಾಗಿ ವರ್ಗಾವಣೆಯಾದ ಎ ಖಾತಾ ನಿವೇಶನಗಳು ರದ್ದು

ಬೆಂಗಳೂರು, ಜು. 24 : ಬಿಬಿಎಂಪಿಯಲ್ಲಿ ಅಕ್ರಮವಾಗಿ ಬಿ ಖಾತಾ ನಿವೇಶನಗಳನ್ನು ಎ ಖಾತಾಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದ ಹಿನ್ನೆಲೆ 40 ಸಾವಿರಕ್ಕೂ ಹೆಚ್ಚು ಎ ಖಾತಾಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ಈ ಹಿಂದೆ ಬಿ ಖಾತಾ ಜಾಗಗಳನ್ನು ಎ ಖಾತಾಗೆ ಅಕ್ರಮವಾಗಿ ಬದಲಾಯಿಸಿಕೊಂಡಿರುವುದು ಪತ್ತೆಯಾಗಿತ್ತು. ಆಗ ಬಿಬಿಎಂಪಿ ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿತ್ತು. ಈ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗಿದೆ.

ಬೆಂಗಳೂರಿನ ಬಿಬಿಎಂಪಿಯ 243 ವಾರ್ಡ್ ಗಳಲ್ಲಿ ಅಂದಾಜು ಒಂದು ಲಕ್ಷ ಎ ಖಾತಾಗಳು ಅಕ್ರಮವಾಗಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಪರಿಶೀಲನಾ ಸಮಿತಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಆರ್ ಆರ್ ನಗರ, ದಾಸರಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ವಲಯಗಳಲ್ಲಿ ಅಕ್ರಮ ಎ ಖಾತೆಗಳನ್ನು ಮಾಡಲಾಗಿದೆ.

ಬೊಮ್ಮನಹಳ್ಳಿ ವಲಯದಲ್ಲೇ ಅತಿಹೆಚ್ಚು ಅಕ್ರಮ ನಡೆದಿದ್ದು, 4,008 ‘ಎ’- ಖಾತಾ ರಿಜಿಸ್ಟರ್ ಆಗಿವೆ. ರಾಜರಾಜೇಶ್ವರಿ ನಗರದಲ್ಲಿ ಬರೋಬ್ಬರಿ 3,666, ಮಹದೇವಪುರದಲ್ಲಿ 925, ಯಲಹಂಕದಲ್ಲಿ 540, ಬೆಂಗಳೂರು ಪೂರ್ವದಲ್ಲಿ 453, ಪಶ್ಚಿಮ ವಲಯದಲ್ಲಿ 139, ದಾಸರಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ 4 ಮತ್ತು 1 ಬೋಗಸ್ ಎ ಖಾತಾಗಳಿವೆ ಎಂದು ಪರಿಶೀಲನಾ ಸಮಿತಿಗೆ ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

40 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಅಕ್ರಮವಾಗಿ ಖಾತಾ ನೀಡಿರುವುದು ಗೊತ್ತಾಗಿದೆ. ಇನ್ನು 9 ಸಾವಿರ ಪ್ರಕರಣಗಳ ಬಗ್ಗೆ ಎಆರ್ಒಗಳೇ ಮಾಹಿತಿ ನೀಡಿದ್ದಾರೆ. ಇದಲ್ಲದೆ, ಪುಸ್ತಕದಲ್ಲಿ ‘ಎ’ ಖಾತೆ ಎಂದು ಅಕ್ರಮವಾಗಿ ಬದಲಾಯಿಸಿ, ಹಣ ಪಡೆದಿರುವ ಪ್ರಕರಣಗಳೂ ಹೆಚ್ಚಿವೆ. ಇಂತಹ ಪ್ರಕರಣಗಳು ಸುಮಾರು 50 ಸಾವಿರ ಮೀರಬಹುದು. ಇವುಗಳೆಲ್ಲವನ್ನೂ ತನಿಖೆ ನಡೆಸಲಾಗುತ್ತಿದೆ.

Related News

spot_img

Revenue Alerts

spot_img

News

spot_img