ಬೆಂಗಳೂರು: ಬಿಬಿಎಂಪಿ(BBMP) ಬಜೆಟ್‌ಗೆ ದಿನಾಂಕ ನಿಗದಿಯಾಗಿದ್ದು, ಗುರುವಾರ (ಫೆ. 29) ಬಜೆಟ್ ಮಂಡನೆಯಾಗಲಿದೆ. ಸತತ ನಾಲ್ಕನೇ ವರ್ಷ ಅಧಿಕಾರಿಗಳೇ ಮಂಡಿಸುತ್ತಿದ್ದಾರೆ. ಆಯವ್ಯಯವನ್ನು ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲ್ಕೆರೆ ಗುರವಾರ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ಬಜೆಟ್ ಗಾತ್ರ 13 ಸಾವಿರ ಕೋಟಿ ರು. ತಲುಪುವ ನಿರೀಕ್ಷೆಯಿದೆ. ಲೋಕಸಭೆ ಚುನಾವಣಾ(Lok Sabha Elections) ವೇಳಾ ಪಟ್ಟಿ ಮಾರ್ಚ್ ಮೊದಲ ವಾರ ಪ್ರಕಟವಾಗುವ ಸಾಧ್ಯತೆ ಇರುವುದರಿಂದ ಗುರುವಾರ ಬಜೆಟ್ ಮಂಡಿಸಲು ತೀರ್ಮಾನಿಸಲಾಗಿದೆ ಎಂದು BBMP ಮೂಲಗಳು ತಿಳಿಸಿವೆ.2023-24ನೇ ಸಾಲಿನಲ್ಲಿ ₹11,158 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡು ₹11,157 ಕೋಟಿ ವೆಚ್ಚದ ಯೋಜನೆಗಳನ್ನು ಘೋಷಣೆ ಮಾಡಿತ್ತು,ಲೋಕಸಭೆ ಚುನಾವಣೆ ವೇಳಾ ಪಟ್ಟಿ ಮಾರ್ಚ್ ಮೊದಲ ವಾರ ಘೋಷಣೆಯೊಂದಿಗೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಫೆ.29ರ ಗುರುವಾರ ಬಜೆಟ್ ಮಂಡನೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.2024-25ರಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವ ಮೂಲಕ 6 ಸಾವಿರ ಕೋಟಿ ತೆರಿಗೆ ಆದಾಯ ಸಂಗ್ರಹದ ನಿರೀಕ್ಷೆ ಇಟ್ಟುಕೊಂಡಿದೆ. ಒಂದು ಬಾರಿ ತೀರುವಳಿ ವ್ಯವಸ್ಥೆ ಜಾರಿಗೆ ತಂದಿದ್ದು, ಇದರಿಂದ ಹೆಚ್ಚುವರಿ ವರಮಾನ ಬರಬಹುದೆಂದು ಅಂದಾಜಿಸಲಾಗಿದೆ.