27.6 C
Bengaluru
Friday, October 11, 2024

Bank Holidays in June 2023;ಜೂನ್‌ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ

ನವದೆಹಲಿ (ಮೇ 29):ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆರ್ ಬಿಐ ಬ್ಯಾಂಕ್ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಜೂನ್ ತಿಂಗಳ ರಜಾಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 12 ದಿನಗಳ ಕಾಲ ಬ್ಯಾಂಕ್ ಗೆ ರಜೆಯಿದೆ.ಭೌತಿಕ ಕಾರ್ಯಾಚರಣೆಗಳಿಗಾಗಿ ಶಾಖೆಗಳನ್ನು ಮುಚ್ಚಲಾಗಿದ್ದರೂ, ಆನ್ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ತೊಂದರೆಯಾಗೋದಿಲ್ಲ.ಕೆಲವು ಬ್ಯಾಂಕ್ ರಜಾದಿನಗಳನ್ನು ರಾಷ್ಟ್ರವ್ಯಾಪಿ ಆಚರಿಸಿದರೆ, ಇನ್ನು ಕೆಲವು ಸ್ಥಳೀಯ ರಜಾದಿನಗಳಾಗಿರುತ್ತವೆ. ಈ ಹಬ್ಬಗಳಿಂದಾಗಿ ವಿವಿಧ ರಾಜ್ಯಗಳಲ್ಲಿ ಹಲವಾರು ಬ್ಯಾಂಕ್ ಶಾಖೆಗಳು ಮುಚ್ಚಲ್ಪಡುತ್ತವೆ. ಜೂನ್ ತಿಂಗಳಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೊದಲು, ಬ್ಯಾಂಕುಗಳು ಮುಚ್ಚಲ್ಪಡುವ ಪ್ರಮುಖ ದಿನಗಳ ಪಟ್ಟಿಯನ್ನು ಗಮನಿಸಿ

ಜೂನ್ ತಿಂಗಳ ಬ್ಯಾಂಕ್ ರಜಾಪಟ್ಟಿ ಹೀಗಿದೆ:

ಜೂ.4: ಭಾನುವಾರ

ಜೂ.10: ಎರಡನೇ ಶನಿವಾರ

ಜೂ.11: ಭಾನುವಾರ

ಜೂ.15: ಗುರುವಾರ (ಮಿಜೋರಾಂ ಮತ್ತು ಒಡಿಶಾ)

ಜೂ.18:ಭಾನುವಾರ

ಜೂ.20: ಕಾಂಗ್ (ರಥಜಾತ್ರೆ ಅಥವಾ ರಥಯಾತ್ರ. ಒಡಿಶಾ ಮತ್ತು ಮಣಿಪುರ)

ಜೂ.24: ನಾಲ್ಕನೇ ಶನಿವಾರ

ಜೂ.25: ಭಾನುವಾರ

ಜೂ.26: ಖರ್ಚಿ ಪೂಜಾ (ತ್ರಿಪುರಾ)

ಜೂ.28: ಈದ್ -ಉಲ್-ಅಧಾ (ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳ)

ಜೂ.29 :ಈದ್ -ಉಲ್-ಅಧಾ (ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ)

ಜೂ.30: ರೆಮ್ನ ನಿ/ಈದ್ -ಉಲ್ ಅಧಾ (ಮಿಜೋರಾಂ ಹಾಗೂ ಒಡಿಶಾ)

Related News

spot_img

Revenue Alerts

spot_img

News

spot_img