23.1 C
Bengaluru
Monday, October 7, 2024

ದೇವಾಲಯದ ಧ್ವಜಸ್ಥಂಬದ ನೆರಳುಗಳು ಮನೆಯ ಮೇಲೆ ಬಿದ್ದರೆ ಪ್ರಾಬ್ಲಮ್ಸ್‌ ಗ್ಯಾರೆಂಟಿ !!

ಬೆಂಗಳೂರು, ಜ. 30 : ಸಾಮಾನ್ಯವಾಗಿ ದೇವಾಲಯದ ಅಕ್ಕ-ಪಕ್ಕದಲ್ಲಿ ಮನೆಗಳು ಇರಬಾರದು ಎಂದು ಹಲವರು ಹೇಳುತ್ತಾರೆ. ಇದಕ್ಕೆ ಕಾರಣ ದೇವಾಲಯದ ಗೋಪುರಗಳು ಹಾಗೂ ಧ್ವಜಸ್ಥಂಬದ ನೆರಳು ಮನೆಗೆ ಬಿದ್ದರೆ, ಅದು ಒಳ್ಳೆಯದಲ್ಲ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಾರೆ. ದೇವಾಲಯದ ಧ್ವಜಸ್ಥಂಬದ ನೆರಳುಗಳು ಮನೆಯ ಮೇಲೆ ಬಿದ್ದರೆ ಕಾಡುವ ಸಮಸ್ಯೆಗಳು ಯಾವುವು. ಇದರ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಏನು ಹೇಳಲಾಗಿದೆ. ಈಗಾಗಲೇ ಹಿಂದಿನ ಲೇಖನದಲ್ಲಿ ದೇವಾಲಯ ಮನೆಯ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು ಎಂಬುದನ್ನು ತಿಳಿಸಿ ಆಗಿದೆ. ಈಗ ಧ್ವಜಸ್ಥಂಬದ ನೆರಳು ಮನೆಯ ಮೇಲೆ ಬೀಳ ಬಹುದೇ. ಅದರಿಂದ ಸಮಸ್ಯೆ ಉಂಟಾಗುತ್ತದೆಯೇ ಎಂದು ತಿಳಿಯೋಣ ಬನ್ನಿ.

ದೇವಾಲಯಗಳು ನಮ್ಮ ಪರಿಸರದಲ್ಲಿ ಇರಲೇಬೇಕು. ಮನುಷ್ಯನ ಏಳಿಗೆಗಳಿಗಾಗಿ ದೇವಾಲಯವು ನಮ್ಮ ಸುತ್ತ-ಮುತ್ತ ಇರುವುದು ಅತ್ಯಗತ್ಯ. ಅದರಲ್ಲೂ ಈ ಹೊಂದೆ ತಿಳಿಸಿದ ಲೇಖನದಲ್ಲಿ ಸೌಮ್ಯ ಸ್ವಾಭಾವದ ದೇವತೆಗಳು ಹಾಗೂ ಊಗ್ರ ದೇವತೆಗಳ ಬಗ್ಗೆ ತಿಳಿಸಲಾಗಿತ್ತು. ದೇಗುಲದ ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ಎಂಬುದನ್ನು ತಿಳಿಸಿಕೊಡಲಾಗಿತ್ತು. ಇದೀಗ ದೇವಾಲಯದ ಧ್ವಜಸ್ಥಂಬದ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ವಾಸ್ತುವಿನಲ್ಲಿ ನಕರಾತ್ಮಕ ಶಕ್ತಿಗಳಿಗೆ ವೇದ ಎಂದು ಹೇಳಲಾಗಿದೆ. ಮನೆಗೆ ಪ್ರವೇಶಿಸುವ ನಕರಾತ್ಮಕತೆಯನ್ನು ವೇದ ಎಂದು ಕರೆಯಲಾಗುತ್ತದೆ. ದೇವಾಲಯವನ್ನು ಕೂಡ ವಾಸ್ತುವಿನಲ್ಲಿ ವೇದ ಎಂದು ಕರೆಯಲಾಗಿದೆ.

ಗ್ರಂಥಗಳಲ್ಲಿ ದೇವಾಲಯ ಮನೆಯಿಂದ ಎಷ್ಟು ದೂರ ಇರಬೇಕು ಎಂದು ಹೇಳಲಾಗುದೆ. ಅದರ ಪ್ರಕಾರ ದೇವಾಲಯದಿಂದ 300 ಮೀಟರ್‌ ದೂರ ಅಥವಾ 1500 ಚದರ ಅಡಿ ದೂರದಲ್ಲಿ ಮನೆಯಿದ್ದರೆ, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ. ಆದರೆ, ಕೆಲವು ಗ್ರಂಥಗಳಲ್ಲಿ 100 ಅಡಿಗೂ ದೂರದಲ್ಲಿದ್ದರೂ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ. ಅದಕ್ಕೂ ಹತ್ತಿರದಲ್ಲಿ ಇದ್ದರೆ ಒಳ್ಳೆಯದಲ್ಲ ಎಂದು ತಿಳಿಸಲಾಗಿದೆ. ದೇವಸ್ಥಾನದ ಗೋಪುರ ಹಾಗೂ ಧ್ವಜಸ್ಥಂಬದ ನೆರಳು ಮನೆಯ ಮೇಲೆ ಅಥವಾ ಒಳಗೆ ಬೀಳಬಾರದು. ಅದು ಮನೆಯಲ್ಲಿ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ವಾಸ್ತು ಗ್ರಂಥಗಳಲ್ಲಿ ಹೇಳಲಾಗಿದೆ.

ಇನ್ನು ದೇವಸ್ಥಾನದ ಗರ್ಭಗುಡಿಯ ಹೊಸ್ತಿಲಿನ ಎತ್ತರಕ್ಕೆ ಸಮನಾಗಿ ಇರಕೂಡದು. ಗರ್ಭಗುಡಿಯ ಹೊಸ್ತಿಲಿನ ಎತ್ತರಕ್ಕೂ ಮೀರಿ ಮನೆಯ ಹೊಸ್ತಿಲು ಇರಬಾರದು. ದೇವಸ್ಥಾನದ ಹೊಸ್ತಿಲಿಗಿಂತಲೂ ಮನೆಯ ಹೊಸ್ತಿಲು ಆದಷ್ಟೂ ಕೆಳಗಿರಬೇಕು. ಇಲ್ಲದಿದ್ದರೆ ಅದು ಅಂತಹ ಮನೆಗೆ ಏಳಿಗೆಯನ್ನು ತಂದುಕೊಡುವುದಿಲ್ಲ ಎಂದು ವಾಸ್ತು ಗ್ರಂಥದಲ್ಲಿ ತಿಳಿಸಲಾಗಿದೆ. ಇನ್ನು ಸೌಮ್ಯ ದೇವರುಗಳ ಅಕ್ಕ-ಪಕ್ಕದಲ್ಲೇ ಮನೆ ಇದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

Related News

spot_img

Revenue Alerts

spot_img

News

spot_img