ಬೆಂಗಳೂರು, ಜ. 19 : ಸಾಮಾನ್ಯವಾಗಿ ಮನೆಯ ಎದುರುಗಡೆ ಬಾಳೆ ಗಿಡ, ಮಾವಿನ ಮರ ಸೇರದಂತೆ ಕೆಲ ಹೂ ಬಿಡುವಂತಹ ಗಿಡಗಳನ್ನು ನೆಡಲು ಎಲ್ಲರೂ ಇಷ್ಟ ಪಡುತ್ತಾರೆ. ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಗಿಡ, ಕೆಲ ಸಣ್ಣ-ಪುಟ್ಟ ಹೂವಿನ ಗಿಡಗಳನ್ನು ನೆಡುತ್ತಾರೆ. ಇನ್ನು ಈಗಂತೂ ನಗರಗಳಲ್ಲಿ ಅಲಂಕಾರಿಕ ಗಿಡಗಳೇ ಎಲ್ಲರ ಮನೆಯಲ್ಲೂ ರಾರಾಜಿಸುತ್ತಿರುತ್ತವೆ. ಆಕ್ಷಿನ್ ಪ್ಯೂರಿಫೈಯಿಂಗ್ ಗಿಡ, ಪಾಮ್ ಮರ ಅದು ಇದು ಅಂತ ಹೇಳಿ ಸಾಕಷ್ಟು ಗಿಡಗಳನ್ನು ನೆಡುತ್ತಾರೆ. ಇದರಿಂದ ನಿಜಕ್ಕೂ ಉಪಯೋಗವಾಗುತ್ತೋ ಇಲ್ಲವೋ. ಆದರೆ, ಹಸಿರು ಮನೆಯ ಅಂದವನ್ನು ಮಾತ್ರ ಹೆಚ್ಚಿಸುತ್ತವೆ.
ಇನ್ನು ಹಳೆಯ ಮನೆಗಳ ಮುಂಭಾಗ ಜಾಗ ಬಿಟ್ಟು ಕೆಲವರು ಗುಲಾಬಿ, ಮಲ್ಲಿಗೆ, ಕಣಗಲೆಯಂತಹ ಹೂವಿನ ಗಿಡಗಳನ್ನು ಬೆಳೆಸಿರುತ್ತಾರೆ. ಜಾಗ ಇಲ್ಲದವರು ಪಾಟ್ ಗಳಲ್ಲಿ ಬೆಳೆಸಲು ಬಯಸುತ್ತಾರೆ. ಆದರೆ, ಹೀಗೆ ಮನೆಯ ಮೂಮದೆ ಗಿಡ ಮತ್ತು ಮರಗಳನ್ನು ಬೆಳೆಸುವುದು ಒಳ್ಳೆಯದಾ? ನಾವು ಮನೆ ಕಟ್ಟುತ್ತಿರುವ ಜಾಗದ ಎದುರು ಈಗಾಗಲೇ ಮರಗಳಿದ್ದರೆ ಅದು ಮನೆಗೆ ಶೋಭೆ ತರುತ್ತದೆಯೇ? ಮನೆಯ ಅಕ್ಕ-ಪಕ್ಕದಲ್ಲಿ ಯಾವ ರೀತಿಯ ಮರ, ಗಿಡಗಳು ಇದ್ದರೆ ಅದು ಮನೆಗೆ ಶುಭವೋ ಇಲ್ಲ ಅಶುಭವೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ಇದಕ್ಕೆ ಏನು ಹೇಳುತ್ತದೆ ಎಂಬುದನ್ನು ನೋಡೋಣ ಬನ್ನಿ..
ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಆದಷ್ಟು ಗಿಡ, ಮರ ಹಾಗೂ ಬಳ್ಳಿಗಳು ಇರುವುದು ಅಷ್ಟು ಸೂಕ್ತವಲ್ಲ ಎಂಬುದು ವಾಸ್ತು ಹೇಳುತ್ತದೆ. ಇದಕ್ಕೆ ಕಾರಣ ಪ್ರಮುಖವೂ ಇದೆ. ಸಾಮಾನ್ಯವಾಗಿ ಎಲ್ಲರ ಮನೆಯ ಮುಖ್ಯದ್ವಾರ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಇರುತ್ತದೆ. ಕೆಲವರು ಅಲಂಕಾರಕ್ಕಾಗಿ ಕೆಲ ಬಳ್ಳಿಗಳನ್ನು ಮನೆಯ ಎದುರು ಆರ್ಚ್ ರೀತಿ ಬಿಟ್ಟು ಅಲ್ಲಿ ಬಳ್ಳಿಗಳನ್ನು ಹಬ್ಬಿಸುತ್ತಾರೆ. ಇನ್ನು ಗೋಡೆಗಳ ಮೇಲೂ ಕ್ರೀಪರ್ಸ್ ಅಥವಾ ಕ್ಲೈಂಬರ್ಸ್ ಗಳನ್ನು ಬಿಡುವ ವಾಡಿಕೆ ಇದೆ. ಆದರೆ ಇದು ಮನೆಗೆ ಒಳ್ಳೆಯದಲ್ಲ. ಅಶುಭ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದಕ್ಕೆ ಪ್ರಮುಖ ಕಾರಣವನ್ನು ನೀಡಲಾಗಿದೆ.
ಹೀಗೆ ಬಳ್ಳಿಗಳನ್ನು ಬಿಡುವುದರಿಂದ ಮನೆಯ ಒಳಗೆ ಬರು ಗಾಳಿ ಮತ್ತು ಬೆಳಕನ್ನು ತಡೆದಂತಾಗುತ್ತದೆ. ಜೊತೆಗೆ ಬಳ್ಳಿಗಳ ನಡುವೆ ಜೇಡಗಳು ಬಂದು ನೆಲೆಸುತ್ತವೆ. ಮನೆಯ ಒಳಗೆ ಗಿಡದಲ್ಲಿರುವ ಕ್ರಿಮಿ ಕೀಟಗಳು ಪ್ರವೇಶಿಸುತ್ತವೆ. ಇನ್ನು ಗಿಡಗಳ ಒಣ ಎಲೆ ಮನೆಯೊಳಗೆ ಬರಬಹುದು ಇದೆಲ್ಲವೂ ಅಶೂಭದ ಸಂಕೇತವಾಗಿದೆ. ಇನ್ನು ಮನೆಯ ಎದುರು ಆದಷ್ಟು ಹಾಲು ಬರುವಂತಹ ಗಿಡಗಳನ್ನು ನೆಡ ಬಾರದು. ಯಾಕೆಂದರೆ ಆ ಹಾಲು ವಿಷಕಾರಿ ಎಂಬುದನ್ನು ನೆನಪಿಡಬೇಖು. ಇನ್ನು ಪೂರ್ವ ಹಾಗೂ ಉತ್ತರ ಬಿಟ್ಟು ದಕ್ಷಿಣ ಮತ್ತು ಪಶ್ಚಿಮದಲ್ಲಿ ಇದ್ದರೆ ಪರವಾಗಿಲ್ಲ. ಆದರೆ, ಅಲ್ಲೂ ಕೂಡ ಅವಾಯ್ಡ್ ಮಾಡುವುದು ಒಳ್ಳೆಯದು.
ಹಾಲಿರುವಂತಹ ಮರವನ್ನು ಹಾಗೂ ಮುಳ್ಳಿರುವಂತಹ ಗಿಡಗಳು. ಮುಳ್ಳಿರುವ ಗಿಡಗಳು ಆಗ್ನೇಯದಲ್ಲಿದ್ದರೆ ಒಳ್ಳೆಯದು. ಆದಷ್ಟು ಮನೆಯ ಬಳಿ ಇರುವುದು ಒಳ್ಳೆಯದಲ್ಲ. ಕೊನೆಯದಾಗಿ ಮನೆಯ ಮುಂದೆ ಬರುಡಾದ ಮರ ಅಥವಾ ಎಲೆಗಳು ಒಣಗಿರುವಂತಹ ಮರಗಳಿದ್ದರೆ ಅದು ಅಶುಭ ಎಂದು ಹೇಳಲಾಗಿದೆ. ಬಾಳೆ ಗಿಡ, ಮಾವಿನ ಮರ ಮನೆಯ ಆವರಣದಲ್ಲಿ ಇರಬಹುದು. ಸ್ವಲ್ಪ ದೂರದಲ್ಲಿದ್ದರೆ ಸುರಕ್ಷಿತ ಎಂದು ಆದರೆ, ಕಿತ್ತಳೆ ಮರ ಇದ್ದರೆ ತುಂಬಾ ಒಳ್ಳೆಯದು ಎಂದು ಹೇಳಲಾಗಿದೆ.