ಬೆಂಗಳೂರು : ಪ್ರಸ್ತುತ ವರ್ಷದಲ್ಲಿ ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ಶೇ10% ರಷ್ಟು ಶುಲ್ಕ(Fees) ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ(Department of Higher Education) ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿದೆ.ಸರ್ಕಾರದ ಈ ನಿರ್ಧಾರದಿಂದ ಉನ್ನತ ಪದವಿ(Higher degree) ಓದಲು ಬರುವ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಬಹಳ ತೊಂದರೆಯಾಗಲಿದೆ.ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು(College) ಹಾಗೂ ಯೂನಿವರ್ಸಿಟಿಗಳಲ್ಲಿ ಕನಿಷ್ಠ ಶೇ10% ರಷ್ಟು ಶುಲ್ಕ ಏರಿಕೆಗೆ ಅವಕಾಶ ನೀಡಿದ್ದು ,ಇದರಿಂದ ವಿದ್ಯಾರ್ಥಿಗಳಿಗೆ ಕಷ್ಟ ಆಗಲಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಶೇ 10ರಷ್ಟು ಶುಲ್ಕ ಏರಿಸಿ ,ಈಗಾಗಲೇ ಸರ್ಕಾರ ಯೂನಿವರ್ಸಿಟಿಗಳಿಗೆ ಪರಿಷ್ಕೃತ ಶುಲ್ಕ ಪಟ್ಟಿಯನ್ನ ನೀಡಲಾಗಿದೆ.ಏಕರೂಪ ಶುಲ್ಕ ಸಮಿತಿ 2022/23 ರ ಅನ್ವಯ ಶುಲ್ಕ ಏರಿಕೆ ಮಾಡಲಾಗಿದೆ. BA – 11700 rs, BA specilization – 16200, BSW – 16400, B.Com – 19700, B.Com Specilization – 24700, BBA – 28700, BBA – Specilization – 31700, B.Sc – 21790, B.Sc Specilization – 25700, BCA -30700, B.Ed – 12750, BO.Ed – 42750, BA LLB – 27750, MA – 15250, MVA – 17250, MSW – 21250, MA ( MCJ ) – 21750, MA ( Foreign Lang ) – 23250, M.Com -19750, M.Com Specilization -64750, MTTM – 67750, MBA ( D )59750, MBA ( E )79750.