ಮಹಿಳೆಯರು ಎಂಎಸ್ ಎಸ್ ಸಿ ಯೋಜನೆಯಲ್ಲಿ ಹಣವಿಟ್ಟರೆ ಸಿಗುತ್ತೆ ಅಧಿಕ ಬಡ್ಡಿ ಮೊತ್ತ..

0
124

ಬೆಂಗಳೂರು, ಜು. 07 : ಫೆಬ್ರವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೆಟ್ ಯೋಜನೆಯನ್ನು ಘೋಷಿಸಲಾಗಿತ್ತು. ಇದು ಮುಂದಿನ 2025 ಮಾರ್ಚ್ 31ರ ವರೆಗೂ ಹೂಡಿಕೆಗೆ ಲಭ್ಯವಿದೆ. ಈ ಯೋಜನೆಯನ್ನು ಮಹಿಳೆಯರಿಗೆಂದೇ ಇದ್ದು, ಉತ್ತಮ ರಿಟರ್ನ್ ನೀಡುತ್ತದೆ. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೆಟ್ ಯೋಜನೆಯ ಮೂಲಕ ಹೆಣ್ಣು ಮಕ್ಕಳು ಉಳಿತಾಯ ಮಾಡಬಹುದು.

ಇದರಲ್ಲಿ ಹಣ ಹೂಡಿಕೆ ಮಾಡಲು ಕನಿಷ್ಠ 1000 ರೂಪಾಯಿ ಯಿಂದ ಗರಿಷ್ಠ 2ಲಕ್ಷದವರೆಗೂ ತೆರೆಯಬಹುದು. ೊಂದಕ್ಕಿಂತ ಹೆಚ್ಚು ಹೂಡಿಕೆ ಮಾಡಲೂ ಹೂಡಿಕೆ ಮಾಡಲು ಅವಕಾಶವಿದೆ. ಒಮ್ಮೆ ಹೂಡಿಕೆ ಮಾಡಿದರೆ, ಮತ್ತೊಮ್ಮೆ ಹೂಡಿಕೆ ಮಾಡಲು ಮೂರು ತಿಂಗಳು ಕಾಯಬೇಕು. ಮಹಿಳಾ ಸಮ್ಮಾನ್ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಕನಿಷ್ಠ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಬಾಲಕಿಯರಿಗೆ ಅವರ ವಾರಸುದಾರರು ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಒಂದು ಬಾರಿ ಮಾತ್ರವೇ ಠೇವಣಿ ಮಾಡಲು ಅವಕಾಶವನ್ನು ನೀಡಲಾಗಿದೆ.

ಇದರ ಬಡ್ಡಿಯ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಬಡ್ಡಿಯನ್ನು ವರ್ಗಾಯಿಸಲು ಕೆಲ ನಿಬಂಧನೆಗಳು ಇವೆ. ಇಲ್ಲದೇ ಹೋದಲ್ಲಿ ಅಂಚೆ ಕಚೇರಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. 2025ರ ಮಾ. 31ರೊಳಗೆ ಅರ್ಜಿ ನಮೂನೆ – 1 ಅನ್ನು ಸಲ್ಲಿಸಬಹುದು. ಈ ಮೂಲಕ ಖಾತೆಯನ್ನು ತೆರೆಯಲು ಮಹಿಳೆಯರಿಗೆ ಅವಕಾಶವಿದೆ. 2 ವರ್ಷಗಳ ಬಳಿಕ ಈ ಯೋಜನೆ ಮೆಚ್ಯುರಿಟಿ ಹೊಂದಲಿದ್ದು, ಹಣವನ್ನು ಅರ್ಜಿ ನಮೂನೆ -2 ಅನ್ನು ಸಲ್ಲಿಸಿ ಪಡೆಯಬಹುದು.