ಬೆಂಗಳೂರು ಜೂನ್ 17: ನಾಗಲೋಟದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ಬದುಕ ಬಂಡಿ ಸಾಗಿಸಲು, ಪ್ರತಿಯೋಬ್ಬರು ದಿನವಿಡಿ ಒಂದಲ್ಲ ಒಂದು ಕಾಯಕ ಮಾಡಲೇಬೇಕು.. ಹಾಗೇ ದುಡಿದು ಸಂಜೆ ಮನೆಗೆ ಬಂದು ಕೊಂಚ ಧಣಿವಾರಿಸಿಕೊಳ್ಳು ನಾವು ಅಣಿಯಾಗುತ್ತೇವೆ. ಆಗ ನಮ್ಮ ಸಹಕಾರಕ್ಕೆ ಬರುವ ವಸ್ತುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಅಂದರೆ, ಅದುಬೇ ಚೇರ್ ಅಥವಾ ಕುರ್ಚಿ. ಇನ್ನು ನಾವು ಬೆಳಗ್ಗೆ ಮನೆಯಿಂದ, ಬೈಕ್, ಕಾರ್ ಅಥವಾ ಸಾರಿಗೆಯ ವಾಹನನ್ನು ಹಿಡಿದು ಕಚೇರಿ ತಲುಪುತ್ತೇವೆ.
ಗ್ರಾಮೀಣ ಭಾಗದಲ್ಲಿ ಪ್ರಯಾಣ ಕೊಂಚ ಆರಾಮಾದಾಯಕ ಅನ್ನಿಸಬುದು ಆದ್ರೆ ಬೆಂಗಳೂರುನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಒಂದುಕಡೆ,ಸಂಚಾರಿ ದಟ್ಟಣೆಯ ಕಿರಿಕಿರಿ, ಮತ್ತೊಂದೆಡೆ ಓಡುತ್ತಿರುವ ಸಮಯದ ಹಿಂದೆ ಓಡುವ ದಾವಂತ, ಮತ್ತೊಂದೆಡೆ ಕೆಲಸದ ಒತ್ತಡ ಇಷ್ಟೇಲ್ಲ ಹ್ಯಾಗೋ ನಿಭಾಯಿಸಿಕೊಂಡು ದಿನದ ಕೆಲಸ ಮುಗಿಸಿ ಮನೆಗೆ ಮತ್ತದೆ ಕಿರಿಕಿರಿಯ ನಡುವೆ ಬಂದು ಮನೆ ಸೇರಿಕೊಂಡಾಗ ಅಬ್ಬ ಒಂದು ದಿನದ ಕೆಲಸ ಮುಗೀತು ಅಂತ ಭಾವಿಸಿ, ಮನೆಗ ಬಂದ ಕೋಡಲೇ ಕೈಕಾಲು ಮುಖ ತೊಳೆದುಕೊಂಡು ಕೊಂಚ ವಿಶ್ರಾಂತಿಗೆ ಜಾರಲು ಮುಂದಾಗೋದು ಸಾಮಾನ್ಯ..
ಒಂದು ವೇಳೆ ನೀವೇನಾದ್ರೂ ನಗರ ಸಾರಿಗೆ ಬಸ್ ಗಳಲ್ಲಿ ಪ್ರಯಾಣ ಮಾಡಿ ಬಂದಿದ್ದರೆ. ಅದೃಷ್ಟವಶಾತ್ ನಿಮಗೆ ಕೂರಲು ಬಸ್ ನಲ್ಲಿ ಆಸನ ಸಿಕ್ಕಿದ್ದರೆ ಬಚಾವ್, ಇಲ್ಲವಾದ್ರೆ ಯಾವಗ ನಾನು ಇಳಿಯುವ ನಿಲ್ದಾಣ ಬರುತ್ತದೆ ಅಂತ ಬಕ ಪಕ್ಷಗಳಂತೆ ಬಸ್ ನಲ್ಲಿ ಒಂದು ಕಂಬಿಹಿಡಿದು ನೇತಾಡಿಕೊಂಡು ಬರೋದಂತು ಪಕ್ಕ ಅದ್ರಲ್ಲಿ ಎರಡು ಮಾತಿಲ್ಲ. ಅಂತೂ ಹೇಗೋ ಮನೆ ಬಂದು ಸೇದ ಮೇಲೆ ಕೊಂಚ ನಿಟ್ಟುಸಿರು ಬಿಟ್ಟು ರಿಲ್ಯಾಕ್ಸ್ ಮೂಡ್ಗೆ ಜಾರಲು ಮುಂದಾದಾಗ ನಮ್ಮ ಕಣ್ಣಿಗೆ ಕಾಣೋದು ನಮ್ಮ ಮನೆಯಲ್ಲಿರುವ ಸೋಫ, ಚೇರ್ ಅಥವಾ ಚಾಪೆ ಇನ್ನಿತರೆ ಅಗತ್ಯ ವಸ್ತುಗಳು.
ಇನ್ನು ಕೆಲವರ ಮನೆಯಲ್ಲಿ ಚೇರ್, ಸೋಫಾಗಳು ಇರುತ್ತವೆ ಅವುಗಳ ಮೇಲೆ ಕುಳಿತಗ ಸ್ವಲ್ಪ ವಿಶ್ರಾಂತ ಸಿಕ್ಕಂತಾದ್ರೂ ಇನ್ನೂ ಕೊಂಚ ಹೆಚ್ವಿನ ವಿಶ್ರಾಂತ ಬೇಕೆಂದುನಸ್ಸು ದೇಹ ಎರಡು ಕೇಳುತ್ತವೆ ಅಗಲೇ ಬೇಕಿರುದು ಈ ವಸ್ತು ಇದರ ಹೆಸರು ರಿಲ್ಯಾಕ್ಸ್ ಚೇರ್ ಅಂತಲೂ ಗ್ರ್ಯಾಂಡ್ ಫಾದರ್ ಚೇರ್ ಅಂತಲೂ ಕರೆಯುತ್ತಾರೆ.
ಏನಪ್ಪಾ ಈ ಗ್ರ್ಯಾಂಡ್ ಫಾದರ್ ಚೇರಿನ ವಿಶೇಷ ಅಂತಿರಾ
ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಬದಕಲು ಪ್ರತಿಯೊಂದು ವಿಚಾರದಲ್ಲೂ ಕೋಡ ಪೈಪೋಟಿ ಮಾಡಲೇಬೇಕಾಗಿದೆ ಕಾಲಮಾನದಲ್ಲಿ ನಾವಿದ್ದೇವೆ. ಒಂದೇ ಬಗೆಯ ವಸ್ತು ಹಲವು ಬಗೆ ಬ್ರಾಂಡ್ ಗಳಲ್ಲಿ ದೊರೆಯುವುದು ನಾವು ಕಾಣುತ್ತಿದ್ದೆ, ಹಾಗೇ ನಾವು ನಿತ್ಯ ಬಳಸುವ ಮನೆಯಲ್ಲಿ ಪೀಠೋಪಕರಣಗಳು ಅದರಿಂದ ಹೊರತಾಗಿಲ್ಲ. ಅವುಗಳಲ್ಲೂ ಸಹ ಹತ್ತು ಹಲವು ತರಹೇವಾರಿಗಳನ್ನು ನಾವು ಕಾಣಬಹುದು.
ಅಂತಿಂತ ಚೇರ್ ಇದಲ್ಲ, ಇದರ ಮೇಲೆ ನೀವು ಕೂರೋದು ಮಾತ್ರವಲ್ಲ, ಆರಾಮವಾಗಿ ಮಲಗಲು ಬಹುದು. ಕುರ್ಚಿ ಒಂದೇ, ಆದ್ರೆ ಅದರ ಉಪಯೋಗ ಒಂದಕ್ಕಿಂತ ಹೆಚ್ಚು, ಅದಕ್ಕೆ ಇದನ್ನು ವಿಶ್ರಾಂತಿ ಕುರ್ಚಿ ಅಥವಾ ಗ್ರ್ಯಾಂಡ್ ಫಾದರ್ ಚೇರ್ ಅಂತ ಕೂಡ ಕರೆಯುತ್ತಾರೆ.
ಇನ್ನು ಈ ಕುರ್ಚಿ ಸಂಪೂರ್ಣವಾದ ಮರದ ತುಂಡುಗಳಿಂದ ತಯಾರು ಮಾಡಿರೋದಾಗಿದೆ. ಟೀಕ್ ವುಡ್ ನ ಪಟ್ಟಿಗಳನ್ನು ಬಳಸಿಕಟ್ಟಲಾಗಿದೆ, ಅಲ್ದೆ ಇದಕ್ಕೆ ಪಾಲೀಷ್ ಹಾಗೂ ಏಷ್ಯನ್ ಗೋಲ್ಡ್ ಮೆಲಮೈನ್ ಪೈಂಟ್ ಮಾಡಿರುವುದರಿಂದ ಯಾವುದೇ ರೀತಿ ಚರ್ಮಕ್ಕೆ ಸಂಬಂಧಪಟ್ಟ ರೋಗಗಳು ಇದರಿಂದ ಬರುವುದಿಲ್ಲ ಅಂತಾರೇ ಅಂಗಡಿ ಮಾಲೀಕರು.
ವಿಶ್ರಾಂತಿ ಕುರ್ಚಿ ಅಂತಾರೆ ಓಕೆ ಗ್ರ್ಯಾಂಡ್ ಫಾದರ್ ಚೇರ್ ಏಕೆ.?
ಇನ್ನು ಈ ವಿಶ್ರಾಂತಿ ಚೇರ್ ಈ ಹಿಂದೆ ಸಹ ಗ್ರಾಮೀ ಭಾಗದಲ್ಲಿ ಬಳಸುತ್ತಿದ್ದರು, ಸದ್ಯ ನಾವು ಅಪ್ಡೇಟ್ ಆಗುತ್ತಿದ್ದೇವೆ ಅನ್ನೋ ಬರಹದಲ್ಲಿ ನಮ್ಮ ಹಿಂದಿನ ಕೆಲವು ವಸ್ತುಗಳಿಂದ ದೂರ ಉಳಿಯುತ್ತಿದ್ದೇವೆ ಅಷ್ಟೇ, ಆದ್ರೆ ಈ ತರಹದ ಕುರ್ಚಿಯನ್ನು ನಮ್ಮ ಹಿರಿಕರು ಬಳಸುತ್ತಿದ್ದರು ಅದ್ರಲ್ಲೂ ಮನೆಯ ಹಿರಿಯರು ಹೆಚ್ಚಾಗಿ ಇದನ್ನು ಬಳಸುತ್ತಿದ್ದರು, ನಮ್ಮ ಅಜ್ಜ, ಅಜ್ಜಿ, ಬಿಟ್ಟರ ಸಾಮಾನ್ಯವಾಗಿ ಮಕ್ಕಳು ಅದರಲ್ಲಿ ಕುಳಿತು ಆಟವಾಡುವುದು, ಇದು ಅಜ್ಜನ ಕುರ್ಚಿ ಅಜ್ಜಿಯ ಕುರ್ಚಿ ಅಂತೆಲ್ಲ ಹೆಳುತ್ತಿದ್ದರೆ ಅದಕ್ಕೆ ಸದ್ಯ ಟ್ರೆಂಡ್ ಬದಲಾಗಿದ್ದರು ಉಪಕರಣದ ಗುಣಮಟ್ಟ, ಅದರ ಗೌರವ ಮತ್ತು ಉಪಯೋಗ ಆಗೇ ಇರುವುದಕ್ಕೆ ಇದನ್ನು ಗ್ರ್ಯಾಂಡ್ ಫಾದರ್ ಚೇರ್, ತಾತನ ಕುರ್ಚಿ, ವಿಶ್ರಾಂತಿ ಕುರ್ಚಿ ಅಂತ ಕರೆಯುತ್ತಾರೆ.
ಗ್ರ್ಯಾಂಡ್ ಫಾದರ್ ಚೇರ್, ತಾತನ ಕುರ್ಚಿಯ ಬೆಲೆ ಎಷ್ಟು, ಎಲ್ಲಿ ತಯಾರು ಮಾಡಿಕೊಡ್ತಾರೆ
ಅಂದರೆ ಬೆಂಗಳೂರಿನ ಹರೆ ಕೃಷ್ಣ ರಸ್ತೆಯಲ್ಲಿರುವ ಆಹಾ ಕಸ್ಟಮೈಜ್ಡ್ ಫರ್ನಿಚರ್ ಶಾಪ್ ನಲ್ಲಿ ಸಿಗುತ್ತೆ.
ಕಾಸಿಗೆ ತಕ್ಕೆ ಕಜ್ಜಾಯ ಅನ್ನೋ ಹಾಗೆ ನಾವು ಯಾವ ಮರದಿಂದ ಅದನ್ನು ತಯಾರು ಮಾಡುತ್ತೇವೆ ಅನ್ನೊದರ ಮೇಲೆ ಅವುಗಳ ಬೆಲೆ ಇರುತ್ತದೆ. ಆದ್ರೆ ಮಾವು ಈ ಒಂದು ಅಂಗಡಿಯಲ್ಲಿ ವಿಚಾರಿಸಿದಾಗ ಗ್ರ್ಯಾಂಡ್ ಫಾದರ್ ಒಂದು ಚೇರ್ ಬೆಲೆ 30ಸಾವಿರ ರೂಪಾಯಿ ಹೇಳಿದ್ರು. ಒಟ್ಟಾರೆ ಅದರ ಬೆಲೆ ವಿಚಾರ ಬಿಟ್ಟು ನಾವು ನೋಡೊದಾದ್ರೆ, ಇದನ್ನಹ ಉಪಯೋಗಿಸಿದರೆ, ದಣಿದು ಬಂದು ನಾವು ಉಂಡು ಮಲಗುವ ಮುನ್ಮ ಮನಸ್ಸು ದೇಹಕ್ಕೆ ಉಲ್ಲಾಸ ವಿಶ್ರಾಂತಿಗೇನು ಮೋಸ ಆಗೊಲ್ಲ ಅನಿಸುತ್ತದೆ.
ಲಕ್ಷ್ಮೀಪತಿ, ಹಿರಿಯ ವರದಿಗಾರರು