ವೇದಿಕ್ ವಾಸ್ತು: ಈ ಮಂತ್ರ ಪಠಣೆ ಮಾಡೋದ್ರಿಂದ ಮನೆ ಕಳ್ಳತನ ತಪ್ಪಿಸಬಹುದಂತೆ!

0
105

ಕಳ್ಳತನ ಅನ್ನೋದು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಹಳ್ಳಿಗಳಲ್ಲೂ ಕಳ್ಳತನವಿದೆ. ಅನಾದಿ ಕಾಲದಿಂದಲೂ ಮನೆಯಲ್ಲಿ ಕಳ್ಳತನ ನಡೆಯುತ್ತಲೇ ಇರುತ್ತವೆ. ಅದರಲ್ಲಿ ಮನೆಯಲ್ಲಿದ್ದವರೇ ಕಳ್ಳತನ ಮಾಡುವುದು. ಹೊರಗಿನಿಂದ ಬಂದ ಕಳ್ಳರು ಕಳ್ಳತನ ಮಾಡುವುದು ಸರ್ವೆ ಸಾಮಾನ್ಯ. ಈ ಮನೆ ಕಳ್ಳತನ ತಡೆಯಲು ವೇದಿಕ್ ವಾಸ್ತು ವಾಸ್ತು ಪರಿಹಾರ ಸೂಚಿಸುತ್ತದೆ. ಜತೆಗೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದಕ್ಕೂ ಸಹ ವೇದಿಕ್ ವಾಸ್ತುವಿನಲ್ಲಿ ಪರಿಹಾರ ಕ್ರಮ ವಿವರಿಸಲಾಗಿದೆ.

ಪುರಾತನ ಕಾಲದಲ್ಲಿ ಈಗಿರುವಂತೆ ಸಿಸಿಟಿವಿ ಕ್ಯಾಮರಾಗಳು, ಡೋರ್ ಅಲಾರಮ್‌ಗಳು ಇರುತ್ತಿರಲಿಲ್ಲ. ಅನಾದಿ ಕಾಲದಲ್ಲಿ ಕಳ್ಳತನ ತಡೆಯಲು ತಂತ್ರ- ಮಂತ್ರ ಮೊರೆ ಹೋಗುತ್ತಿದ್ದರು. ಈಗ ಕಳ್ಳತನ ತಡೆಯೋಕೆ ಸೈರನ್, ಸಿಸಿಟಿವಿ ಕ್ಯಾಮರಾ, ಡೋರ್ ಅಲಾರಮ್ ಬಳಸುತ್ತಾರೆ. ಆದರೆ, ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ವೇದಿಕ್ ವಾಸ್ತುವಿನಲ್ಲಿ ಕಳ್ಳತನ ತಡೆಯಲು ಪರಿಹಾರ ಕ್ರಮವಿದೆ.

ಮನೆ ಕಳ್ಳತನ ತಡೆಯುವ ಮಂತ್ರ :
ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ಈ ಕೆಳಗಿನ ಮಂತ್ರವನ್ನು ದಿನಕ್ಕೆ 108 ಸಲ ಪಠಣ ಮಾಡಿದರೆ ಮನೆಯಲ್ಲಿ ಕಳ್ಳತನ ಮಾಡುವುದಿಲ್ಲ. ಈ ಮಂತ್ರ ಹೇಳುವಾಗ ಮನೆಯಲ್ಲಿ ಪೂರ್ವಕ್ಕೆ ಮುಖ ಮಾಡಿ ಈ ಕೆಳಗಿನ ಮಂತ್ರ ಪಠಿಸಬೇಕು. ವಾಸ್ತು ರತ್ನಾಕರ ಗ್ರಂಥದ ಪ್ರಕಾರ ಮನೆ ಗೃಹ ಪ್ರವೇಶದ ಹಿಂದಿನ ರಾತ್ರಿ ಈ ಮಂತ್ರವನ್ನು ಹೇಳಿ ಹೋಮ ಮಾಡಿದರೆ ಆ ಮನೆಯಲ್ಲಿ ಕಳ್ಳತನ ಆಗುವುದಿಲ್ಲ. ಎಲ್ಲರನ್ನೂ ರಕ್ಷಣೆ ಮಾಡಲ್ಪಡುತ್ತಾರೆ. ಕಳ್ಳರ ಕಣ್ಣು ಮನೆ ಮೇಲೆ ಬೀಳುವುದಿಲ್ಲ ಎಂದು ನಂಬಲಾಗಿದೆ.

ಓಂ ಕಾರಾಳಿನಿ ಸ್ವಾಹ
ಓಂ ಕಪಾಲಿನಿ ಸ್ವಾಹ
ಹ್ರೂಂ, ಹ್ರೀಂ, ಹ್ರೀಂ ಹ್ರೀಂ…
ಚೋರ ಬಂಧನ,
ತಹಃ ತಹಃ

ತಂತ್ರದ ಮೂಲಕ ಕಳ್ಳತನ ನಿಯಂತ್ರಣ:
ಒಂದೂವರೆ ಕೆಜಿ ಗೋದಿ ಇಟ್ಟು ತೆಗೆದುಕೊಂಡು ಅದನ್ನು ಕೈಯಲ್ಲಿ ಇಟ್ಟುಕೊಂಡು 108 ಸಲ ಈ ಕೆಳಗಿನ ಮಂತ್ರ ಹೇಳಬೇಕು. ಆ ಗೋದಿ ಇಟ್ಟನ್ನು ಮನೆ ಸುತ್ತ ಅಥವಾ ಜಮೀನು, ಅಥವಾ ನಿವೇಶನ ಸುತ್ತಾ ಚೆಲ್ಲಬೇಕು. ಹೀಗೆ ಮಾಡುವುದರಿಂದ ಮನೆ ಮತ್ತು ಮನಸ್ಸಿಗೆ ದಿಗ್ಬಂಧನವಾಗುತ್ತದೆ.

ಇನ್ನೊಂದು ಮನೆಯಲ್ಲಿ ಕಳ್ಳತನ ಮಾಡಬೇಕು ಎಂಬ ಕಳ್ಳತನ ಮಾಡುವರ ಮನಸು ಬದಲಾಗುತ್ತದೆ. ಕಳ್ಳರು ಮನೆಯೊಳಗೆ ಪ್ರವೇಶ ಮಾಡುವುದನ್ನು ನಿಯಂತ್ರಿಸುತ್ತದೆ.

ನಮ್ಮ ವಸ್ತುಗಳು ಸುರಕ್ಷಿತವಾಗಿರುತ್ತವೆ. ವಾಚ್ ಮೆನ್, ಸೆಕ್ಯುರಿಟಿ ಗಾರ್ಡ್ ತರ ಈ ಮಂತ್ರ ನಮ್ಮನ್ನು ರಕ್ಷಣೆ ಮಾಡುತ್ತದೆ.