ಸರ್ಕಾರಿ ಕಟ್ಟಡಗಳು ವಾಸ್ತು ಪ್ರಕಾರ ನಿರ್ಮಾಣವಾಗುತ್ತಾ..?

0
120

ಬೆಂಗಳೂರು, ಡಿ. 26 : ಪ್ರತಿಯೊಬ್ಬರೂ ತಮ್ಮ ಮನೆಯನ್ನು ನಿರ್ಮಾಣ ಮಾಡಲು ವಾಸ್ತು ತಜ್ಞರನ್ನು ಭೇಟಿ ಮಾಡಿರುತ್ತಾರೆ. ವಾಸ್ತು ಪ್ರಕಾರ ಮನೆ ಇದ್ದರೆ, ಎಲ್ಲರಲ್ಲೂ ನೆಮ್ಮದಿ, ಶಾಂತಿ ನೆಲೆಸುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಹಾಗಾಗಿ ಮನೆ ನಿರ್ಮಾಣ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ವಾಸ್ತು ನೋಡಲಾಗುತ್ತದೆ. ಯಾವ ದಿಕ್ಕಿಗೆ ಯಾವ ಕೋಣೆ ಇರಬೇಖೆಂದು ನಿರ್ಧರಿಸಲಾಗುತ್ತದೆ. ಮನೆ ನಿರ್ಮಾಣವಾದ ಮೇಲೂ ವಸ್ತುಗಳನ್ನು ಜೋಡಿಸುವಾಗಲೂ ವಾಸ್ತು ನೋಡಲಾಗುತ್ತದೆ. ಆದರೆ ಈ ಸರ್ಕಾರಿ ಕಟ್ಟಡಗಳಾದ ಶಾಲಾ, ಕಾಲೇಜು, ಕಚೇರಿಗಳನ್ನು ಕೂಡ ವಾಸ್ತು ಪ್ರಕಾರವೇ ಕಟ್ಟಲಾಗುತ್ತದೆಯೇ..?

ಸರ್ಕಾರಿ ಕಟ್ಟಡಗಳು ವಾಸ್ತು ಪ್ರಕಾರ ಇರುತ್ತಾ..? ವಾಸ್ತು ದೋಷದಿಂದ ಸಮಸ್ಯೆ ಎದುರಾಗುತ್ತಾ..? ಶಾಲಾ-ಕಾಲೇಜು, ಕಚೇರಿಗಳು ವಾಸ್ತು ಪ್ರಕಾರ ಇರದಿದ್ದರೆ ಅದಕ್ಕೆ ಪರಿಹಾರವಿದೆಯಾ..? ಎಂಬ ಎಲ್ಲಾ ಪ್ರಶ್ನೆಗಳು ಅನುಮಾನಗಳಿಗೂ ಈ ಲೇಖನದಲ್ಲಿ ವಾಸ್ತು ಶಾಸ್ತ್ರಜ್ಞರಾದ ಡಾ. ರೇವತಿ ವೀ ಕುಮಾರ್ ಅವರು ಹೇಳಿದ್ದಾರೆ.

ಬಹುತೇಕ ಸರ್ಕಾರಿ ಕಟ್ಟಡಗಳು ವಾಸ್ತು ಪ್ರಕಾರ ನಿರ್ಮಾಣವಾಗುವುದಿಲ್ಲ. ಸರ್ಕಾರಿ ಕಟ್ಟಡಗಳು ಸಿವಿಲ್ ಇಂಜಿನಿಯರ್, ಆರ್ಕಿಟೇಕ್ಚರ್ ಡಿಸೈನ್ ನಂತೆ ಕಟ್ಟಡಗಳನ್ನು ಕಟ್ಟಿರಲಾಗಿರುತ್ತದೆ. ಇಲ್ಲಿ ಯಾರೂ ವಾಸ್ತು ನೋಡಿರುವುದಿಲ್ಲ. ಈ ಕಟ್ಟಡಗಳಲ್ಲಿ ವಾಸ್ತು ಪ್ರಕಾರ ಯಾವ ಬಿಲ್ಡಿಂಗ್ ಅನ್ನೂ ಕಟ್ಟಿರುವುದಿಲ್ಲ. ಹಾಗಾಗಿಯೇ ಸರ್ಕಾರಿ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಹಾಗೂ ಕಚೇರಿಗಳಲ್ಲಿ ಆಗಾಗ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಸರ್ಕಾರದಲ್ಲಿ ಕೆಲ ವ್ಯವಸ್ಥೆಗಳು ಸರಿಯಾಗಿ ಇಲ್ಲದೇ ಇರುವುದಕ್ಕೆ, ವಾಸ್ತು ಕೂಡ ಒಂದು ಸಮಸ್ಯೆ ಎಂದು ಹೇಳಬಹುದು. ಬಜೆಟ್ ರಿಲೇಟೆಡ್ ಆಗಿ ಕಟ್ಟಡವನ್ನು ಕಟ್ಟುತ್ತಾರೆ. ಅತೀ ವಿರಳರಲ್ಲಿ ವಿರಳರು ವಾಸ್ತು ನೋಡತ್ತಾರೆ.

ಸರ್ಕಾರದ ಕೆಲ ಕೆಲಸಗಳು ಬಾಕಿ ಉಳಿಯುತ್ತವೆ. ಯಾವ ಕೆಲಸಗಳು ಬೇಗ ಮುಗಿಯುವುದಿಲ್ಲ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಇಂತಹ ಹಲವು ಸಮಸ್ಯೆಗಳು ಇದ್ದೇ ಇರುತ್ತದೆ. ಕೆಲ ಕಚೇರಿಗಳಲ್ಲಂತೂ ಯಾವ ಅಧಿಕಾರಿಯೂ ನಿಲ್ಲುವುದಿಲ್ಲ. ಪದೇ ಪದೇ ಬದಲಾಗುತ್ತಿರುತ್ತಾರೆ. ಕೆಲ ಅಧಿಕಾರಿಗಳಿಗೆ ಇಲ್ಲ ಸಲ್ಲದ ಸಮಸ್ಯೆಗಲೇ ಹೆಚ್ಚಾಗಿರುತ್ತದೆ. ಏಳಿಗೆಗಳು ಕಾಣುವುದಿಲ್ಲ. ಇನ್ನು ಕೆಲ ಶಾಲಾ-ಕಾಲೇಜುಗಳು ಸರಿಯಾಗಿ ನಡೆಯುವುದೇ ಇಲ್ಲ. ಅಲ್ಲಿಗೆ ವಿದ್ಯಾರ್ಥಿಗಳು, ಶಿಕ್ಷಕರು ಹೆಚ್ಚು ಸಮಯ ಉಳಿಯುವುದಿಲ್ಲ. ಇದರಿಂದ ಮಕ್ಕಲ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿರುತ್ತದೆ.

ಸರ್ಕಾರಿ ಕಟ್ಟಡಗಳು ಕೂಡ ವಾಸ್ತು ಪ್ರಕಾರವಿದ್ದರೆ ಎಲ್ಲವೂ ಸರಿಯಾಗಿರುತ್ತದೆ ಎಂದು ಡಾ.ರೇವತಿ ವೀ ಕುಮಾರ್ ಅವರು ಹೇಳುತ್ತಾರೆ. ಕಟ್ಟಡವನ್ನು ವಾಸ್ತು ಪ್ರಕಾರ ಕಟ್ಟದಿದ್ದರೂ, ಸಮಸ್ಯೆಗಳಿದ್ದಲ್ಲಿ ವಾಸ್ತು ದೋಷಕ್ಕೆ ಪರಿಹಾರಗಳು ಇರುತ್ತವೆ. ವಾಸ್ತು ಪ್ರಕಾರ ಯಾವ ವಸ್ತು ಎಲ್ಲಿಟ್ಟರೆ ಸೂಕ್ತವೋ ಅಲ್ಲಿ ಇದ್ದರೆ ಎಲ್ಲವೂ ಸರಿ ಹೋಗುತ್ತದೆ. ಕೆಲವು ಅಧಿಕಾರಿಗಳು ವಾಸ್ತು ಶಾಸ್ತ್ರವನ್ನು ನಂಬುತ್ತಾರೆ. ಅಂತಹವರು ವಾಸ್ತು ಪ್ರಕಾರವೇ ತಮ್ಮ ಕ್ಯಾಬಿನ್ ಅಲ್ಲಿ, ಟೇಬಲ್ ಇಡುವು ದಿಕ್ಕು, ತಾವು ಕೂತು ಕೆಲಸ ಮಾಡುವ ದಿಕ್ಕನ್ನು ವಾಸ್ತು ಪ್ರಕಾರವೇ ಫಾಲೋ ಮಾಡುತ್ತಾರೆ ಎಂದು ಡಾ.ರೇವತಿ ವೀ ಕುಮಾರ್ ಅವರು ತಿಳಿಸಿದ್ದಾರೆ.