ಬೆಂಗಳೂರು, ಏ. 21 : ಮಹಡಿ ಮನೆಗಳನ್ನು ಕಟ್ಟಿದಾಗ ನಮಗೆ ಇಷ್ಟ ಬಂದ ಹಾಗೆ ಯುಟಿಲಿಟಿ ಕಟ್ಟಿರುತ್ತೀವಿ. ಎರಡು ಮೂರು ಅಂತಸ್ತಿನ ಮನೆಗಳಲ್ಲಿ ಹೆಚ್ಚಾಗಿ ಎಕ್ಸ್ಟೆಂಷನ್ ಅಥವಾ ರಿಡಕ್ಷನ್ ಗಳು ಇರುತ್ತವೆ. ಇದು ಬಹಳ ಸಮಸ್ಯೆಗಳಿಗೆ ಕಾರಣವಾಗುತ್ತವೆ. ದಕ್ಷಿಣದಲ್ಲೋ, ಪೂರ್ವದಲ್ಲೋ ಇಂಟರ್ನಲ್ ಸ್ಟೇರ್ ಕೇಸ್ ಗಳನ್ನು ಹಾಕಿಕೊಳ್ಳುತ್ತಾರೆ. ಆಗ್ನೇಯದಲ್ಲಿ ಜಾಗವಿದೆ ಎಂದು ರೂಮ್ ಅನ್ನು ಕಟ್ಟಿಕೊಳ್ಳುತ್ತಾರೆ. ಹೀಗಿರುವಾಗ ಸ್ಟೇರ್ ಕೇಸ್ ಮನೆಯಲ್ಲಿ ಅಳವಡಿಸಬೇಕಾಗುತ್ತದೆ.
ಹೀಗೆ ಮಹಡಿ ಅನ್ನು ಹಾಕಲು ಸ್ಥಳಾವಕಾಶ ಹೆಚ್ಚಾಗಿ ಇರಬೇಕಿರುತ್ತದೆ. ಇನ್ನು ಸ್ಟೇರ್ ಕೇಸ್ ಅನ್ನು ವಾಯುವ್ಯ ಅಥವಾ ನೈರುತ್ಯದ ಡೈಯಗ್ನಲ್ ದಕ್ಷಿಣ ಇಲ್ಲ ಪಶ್ಚಿಮದ ಕಡೆಗೆ ಸ್ಟೇರ್ ಕೇಸ್ ಅನ್ನು ಅಳವಡಿಸಬೇಕಾಗುತ್ತದೆ. ಇನ್ನು ಕೆಲವರು ಸ್ಟೇರ್ ಕೇಸ್ ಅನ್ನು ದಕ್ಷಿಣದಲ್ಲಿ ಹಾಕಿಕೊಲ್ಳುತ್ತಾರೆ. ಆದರೆ ಹೆಡ್ ರೂಮ್ ಬಂದಿರುತ್ತದೆ. ಎತ್ತರ ಜಾಸ್ತಿ ಮಾಡಿರುತ್ತಾರೆ. ಇನ್ನು ನೈರುತ್ದಲ್ಲಿ ಸಣ್ಣ ರೂಫ್ ಮಾಡಿ ಅದರ ಮೇಲೆ ವಾಟರ್ ಟ್ಯಾಂಕ್ ಅನ್ನು ಹಾಕಲಾಗುತ್ತದೆ. ಸಾಧಾರಣವಾಗಿ ಡುಪ್ಲೆಕ್ಸ್ ಮನೆಗಳಲ್ಲಿ ಇಂತಹ ಸಮಸ್ಯೆಗಳು ಕಾಣಿಸುತ್ತವೆ.
ಇಂತಹ ಸಮಸ್ಯೆಗಳು ಆಗಬ ಆರದು ಎಂದರೆ, ವಾಸ್ತು ಶಾಸ್ತ್ರಜ್ಞರನ್ನು ಸಂಪರ್ಕಿಸಿ ಮನೆಯನ್ನು ಪ್ಲಾನ್ ಮಾಡಿ ಕಟ್ಟುವುದು ಬಹಳ ಮುಖ್ಯವಾಗುತ್ತದೆ. ಮನೆಯೊಳಗೆ ಮೆಟ್ಟಿಲುಗಳು ಬಂದಾಗ ಸಾಮಾನ್ಯವಾಗಿ ರೂಮ್ ಗಳ ಎತ್ತರದಲ್ಲಿ ವ್ಯತ್ಯಾಸಬರುತ್ತದೆ. ಒಂದು ರೂಮ್ ಎತ್ತರವಿದ್ದು, ಮತ್ತೊಂದು ರೂಮ್ ಅನ್ನು ತಗ್ಗಿಸಿ ನಿರ್ಮಾಣ ಮಾಡಲಾಗುತ್ತದೆ. ಇದನ್ನು ಅವಾಯ್ಡ್ ಮಾಡಬೇಕಾಗುತ್ತದೆ. ಹಾಗಾಗಿ ಮಹಡಿಯ ಮನೆಗಳನ್ನು ಕೂಡ ಸರಿಯಾಗಿ ಕಟ್ಟಬೇಕು. ಎಕ್ಸ್ಟೆಂಷನ್ ಹಾಗೂ ಕಡಿತಗಳು ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮಹಡಿ ಮನೆಗಳಿಗೂ ಅದೇ ವಾಸ್ತು ಶಾಸ್ತ್ರಗಳು ಅನ್ವಯವಾಗುತ್ತವೆ.