26.4 C
Bengaluru
Wednesday, December 4, 2024

ನಿವೇಶನವನ್ನು ಖರೀದಿಸುವಾಗ ವಿ ಆಕಾರದ ಮನೆಯನ್ನು ಖರೀದಿಸಬಹುದೇ..?

ಬೆಂಗಳೂರು, ಮಾ. 08 : ಸುಮಾರು ಕಡೆ ವಿಧಿಶಾ ಫ್ಲಾಟ್ ಗಳನ್ನು ಕಟ್ಟಿದಾಗ ದೊಡ್ಡ ತಪ್ಪನ್ನು ಮಾಡುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರು ಮನೆಯನ್ನು ಇಂತಹದ್ದೇ ದಿಕ್ಕಿಗೆ ಬೇಕು ಎಂದು ಮನೆಯ ಆಕಾರವನ್ನೇ ಬದಲಿಸುತ್ತಾರೆ. ಮನೆಯ ಬಾಗಿಲು ಪೂರ್ವ ದಿಕ್ಕಿಗೆ ಬೇಕು ಎನ್ನುತ್ತಾರೆ. ದಿಕ್ಕನ್ನು ಸರಿಯಾಗಿ ತೆಗೆದುಕೊಳ್ಳದೇ, ಸಮಸ್ಯೆ ಮಾಡಿಕೊಳ್ಳುತ್ತಾರೆ. ವಿಧಿಶಾ ಫ್ಲಾಟ್ ಗಳಲ್ಲಿ ಪೂರ್ವ, ಉತ್ತರ, ದಕ್ಷಿಣ, ಪಶ್ಚಿಮ ಪ್ರದೇಶಗಳು ಮೂಲೆಗಳಲ್ಲಿ ಬರುತ್ತವೆ.

ಆ ರೀತಿ ವಿಧಿಶಾ ಫ್ಲಾಟ್ ಗಳು ಮೂಲೆಗಳಲ್ಲಿ ಬಂದಾಗ, ಈಶಾನ್ಯ, ನೈರುತ್ಯ, ಆಗ್ನೇಯ ಹಾಗೂ ವಾಯುವ್ಯಗಳು ಫ್ಲಾಟ್ ನ ಮಧ್ಯ ಭಾಗದಲ್ಲಿ ಬರುತ್ತವೆ. ಆಗ ಕೆಲವರು ಏನು ಮಾಡುತ್ತಾರೆ ಎಂದರೆ, ನನ್ನ ಮನೆ ಪೂರ್ವ ಅಥವಾ ಉತ್ತರಕ್ಕೆ ಬೇಕು ಎಂದು ಹೇಳುತ್ತಾರೆ. ಅದಕ್ಕಗಿ ಉತ್ತರ ಮೂಲೆ ಅಥವಾ ಪೂರ್ವದ ಮೂಲೆಯನ್ನು ಕಟ್ ಮಾಡಿ ಮನೆಯನ್ನು ಕಟ್ಟುತ್ತಾರೆ. ಮನೆಯ ಶೇಪ್ ಅನ್ನು ಟಿಲ್ಟ್ ಮಾಡುತ್ತಾರೆ. ದಕ್ಷಿಣ, ಉತ್ತರದಲ್ಲಿ ಜಾಗ ಬಿಟ್ಟು, ಪೂರ್ವದಲ್ಲಿ ಮನೆಯನ್ನು ಕಟ್ಟುತ್ತಾರೆ. ಇಲ್ಲ ಹಾರ್ಟ್ ಶೇಪ್ ನಲ್ಲಿ ಮನೆಯನ್ನು ನಿರ್ಮಿಸುತ್ತಾರೆ. ಉತ್ತರದ ಕಡೆಗೆ ಮನೆಯನ್ನು ಟಿಲ್ಟ್ ಮಾಡಿ ಬೇರೆ ದಿಕ್ಕಿನಲ್ಲಿ ಮನೆಯನ್ನು ಕಟ್ಟುತ್ತಾರೆ.

ವಿಧಿಶಾ ಫ್ಲಾಟ್ ಗಳಲ್ಲಿ ಫ್ಲಾಟ್ ಹೇಗಿರುತ್ತದೆಯೋ ಅದೇ ಆಕಾರದಲ್ಲಿ ಮನೆಯನ್ನು ಕಟ್ಟಬೇಕು. ಅದರ ಬದಲು ದಿಕ್ಕನ್ನು ಬದಲಿಸಿ ಮನೆಯನ್ನು ಕಟ್ಟುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಇನ್ನು ಎರಡನೇಯದಾಗಿ ಕೆಲ ಲೇಔಟ್ ಗಳಲ್ಲಿ ಮನೆಯ ಮಧ್ಯ ಭಾಗದಲ್ಲಿ ಟಾಯ್ಲೆಟ್ ಗಳು ಬಂದಿರುತ್ತವೆ. ಆಗ್ನೇಐ ಮಧ್ಯದಲ್ಲಿ ಬಂದರೆ ಕಿಚನ್ ಅನ್ನು ಮಧ್ಯದಲ್ಲಿ ಇಟ್ಟುಕೊಳ್ಳುವುದಕ್ಕೆ ಆಗುವುದಿಲ್ಲ. ಮಾಸ್ಟರ್ ಬೆಡ್ ರೂಮನ್ ಸೌತ್ ವೆಸ್ಟ್ ನಲ್ಲಿ ಬರಬೇಕು ಆದರೆ, ಆ ದಿಕ್ಕು ಮನೆಯ ಮಧ್ಯದಲ್ಲಿ ಮಂದಿರುತ್ತದೆ ಏನು ಮಾಡುವುದು ಎಂದು ಪ್ರಶ್ನೆ ಮಾಡುತ್ತಾರೆ.

ಆಗ ಮನೆಯ ಬೆಡ್ ರೂಮ್ ಅನ್ನು ಸೌತ್ ಇಲ್ಲವೇ ವೆಸ್ಟ್ ಎರಡರಲ್ಲಿ ಒಂದು ದಿಕ್ಕಿಗೆ ಇರಿಸಬಹುದು. ಇನ್ನು ಕಿಚನ್ ಮಾತ್ರ ಬದಲಾಯಿಸದೇ ಅದೇ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ಮನೆಯನ್ನು ಕಟ್ಟುವಾಗ ವಾಸ್ತು ಶಾಸ್ತ್ರದ ಪ್ರಕಾರ ಸರಿಯಾಗಿ ಪ್ಲಾನ್ ಮಾಡಿ ನಿರ್ಮಾಣ ಮಾಡಬೇಕು. ಯಾV ದಿಕ್ಕಿನಲ್ಲಿ ಯಾವ ಯುಟಿಲಿಟಿ ಬರಬೇಕೋ ಅಲ್ಲೇ ಕಟ್ಟಬೇಕು. ವಾಸ್ತು ನಿಯಮಗಳನ್ನು ಪಾಲಿಸಲೇಬೇಕು. ಇನ್ನು ಮನೆಯ ಕಾರ್ನರ್ ಅನ್ನು ತಿರುಗಿಸಿ ನಿರ್ಮಾಣ ಮಾಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ.

Related News

spot_img

Revenue Alerts

spot_img

News

spot_img