ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ದ್ವೀಚಕ್ರವಾಹನ ಹಾಗೂ ಆಟೋ ರಿಕ್ಷಾ ಬಂದ್:-

0
138

ಮೊನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸುರು ಸಂಸಾದ ಪ್ರತಾಪ್ ಸಿಂಹ ಮುಂದಿನ ತಿಂಗಳು ಬೆಂಗಳೂರು-ಮೈಸೂರು ದಶಪತ ಹೆದ್ದಾರಿಯನ್ನು ಒಪನ್ ಮಾಡಲಾಗುತ್ತಿದ್ದು ಹೆದ್ದಾರಿಯ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಸರ್ವಿಸ್ ರಸ್ತೆ ಸಿದ್ದವಾಗುವವರೆಗೆ ಮುಖ್ಯ ಹೆದ್ದಾರಿಯಲ್ಲಿ ದ್ವೀಚಕ್ರವಾಹನ ಹಾಗೂ ಆಟೋ ರಿಕ್ಷಾಗಳು ಓಡಾಡಲು ಅವಕಾಶವಿದ್ದು ಸರ್ವಿಸ್ ರಸ್ತೆ ಸಿದ್ದವಾದ ಮೇಲೆ ನಿರ್ಬಂಧ ಎರಲಾಗುವುದೆಂದು ತಿಳಿಸಿದ್ದಾರೆ.

ಈ ಹೆದ್ದಾರಿ ಬೆಂಗಳೂರು ಹಾಗೂ ಮೈಸೂರನ್ನು ಸಂಪರ್ಕಿಸುವ 114 ಕಿಲೋ ಮೀಟರ್ ಉದ್ದದ್ದ ರಾಷ್ಟ್ರಿಯ ಹೆದ್ದಾರಿಯಾಗಿದ್ದು ರಾಷ್ಟ್ರೀಯ ಹೆದ್ದಾರಿ 275 ಎಂದು ಗುರುತಿಸಲಾಗಿದೆ. ಈ ಹೆದ್ದಾರಿಗೆ ‘ಕಾವೇರಿ ಎಕ್ಸ್ ಪ್ರೇಸ್ ವೇ ಹಾಗೂ ಮೈಸೂರು ಒಡೆಯರ್ ರವರ ಹೆಸರನ್ನು ನಾಮಕರಣ ಮಾಡುವಂತೆ ಸಹ ಮನವಿಯನ್ನು ಸಲಿಸಲಾಗಿದೆ.ಹೆಸರೆ ಹೇಳುವಂತೆ ದಶಪತ ಎಂದರೆ ಹತ್ತು ಲೈನ್ ನ ರಸ್ತೆಯಾಗಿದ್ದು ಇದರಲ್ಲಿ ಆರು ಲೈನ್ ಎಕ್ಸ್ ಪ್ರೇಸ್ ವೇ ಹಾಗೂ ಅದರ ಎರಡು ಬದಿಗಳಲ್ಲಿ ಎರಡೆರಡು ಲೈನ್ ಸರ್ವಿಸ್ ರಸ್ತೆಯಾಗಿರಲಿದೆ. ಈ ಹೆದ್ದಾರಿಯಲ್ಲಿ ದ್ವೀಚಕ್ರವಾಹನ ಹಾಗೂ ಆಟೋಗಳಿಗೆ ಪ್ರವೇಶವಿಲ್ಲದ ಬಗ್ಗೆ ಟೀಕಿಸುತ್ತಿರುವ ಸಾರ್ವಜನಿಕರು ಸರ್ಕಾರ ಕಾರುಗಳಿರುವ ಶ್ರೀಮತರಿಗೆ ಮಾತ್ರ ರಸ್ತೆಯನ್ನು ನಿರ್ಮಿಸಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಆದರೆ ಸರ್ಕಾರ ಈ ನಿರ್ಭಂದದ ಬಗ್ಗೆ ತನ್ನದೆ ಆದ ಸುರಕ್ಷತೆಯ ಹಿತಾದೃಷ್ಟಿ ಕಾರಣಗಳನ್ನು ಹೇಳಿಕೊಂಡಿದೆ.

ಈ ರಸ್ತೆಯನ್ನು ಹೈ ಸ್ಪೀಡ್ ಉದ್ದೇಶದಿಂದ ನಿರ್ಮಿಸಿದ್ದು ಹೈ ಸ್ಫೀಡ್ ಜೋತೆಗೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಹೆದ್ದಾರಿಯಲ್ಲಿ ಸ್ಪೀಡ್ ಲಿಮಿಟ್ಸ್ 120 ಕಿ ಲೋ/ಅವರ್ ಇರಲ್ಲಿದ್ದು ವಾಹನ ಸವಾರರು ಇನ್ನೂ ಹೆಚ್ಚಿನ ವೇಗದಲ್ಲಿ ತಮ್ಮ ವಾಹನಗಳನ್ನು ಚಾಲಹಿಸಲು ಮುಂದಾಗುವ ಸಾಧ್ಯತೆಗಳಿವೆ. ಈ ಹೆದ್ದಾರಿ ಸೀಮಿತ ಪ್ರವೇಶ ಮತ್ತು ನಿರ್ಗಮನವನ್ನು ಹೊಂದಿದ್ದು ಸುಮಾರು ಹಳ್ಳಿ ಹಾಗೂ ಪಟ್ಟಣಗಳ ಮೇಲೆ ಹಾದು ಹೋಗುವುದರಿಂದ ದ್ವೀಚಕ್ರವಾಹನ ಹಾಗೂ ಆಟೋ ಗಳಿಗೆ ಪ್ರವೇಶ ನೀಡಿದರೆ ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ದ್ವೀಚಕ್ರವಾಹನಗಳ ಪಕ್ಕದಲ್ಲಿ ಬಾರಿವಾಹನಗಳು ಅತೀ ವೇಗದಲ್ಲಿ ಚಲಿಸುವುದರಿಂದ ಗಾಳಿಯ ರಭಸದಲ್ಲಿ ವ್ಯತ್ಯಯಗಳು ಉಂಟಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಇನ್ನೂ ಈ ವ್ಯವಸ್ಥೆ ನಮ್ಮಲ್ಲಿ ಮಾತ್ರವಲ್ಲ ಹೈದಾರಬಾದಿನ ನೆಹರು ಔಟರ್ ರಿಂಗ್ ರೋಡ್, ಪಿವಿ ಸರಸಿಂಹರಾವ್ ಎಕ್ಸ್ ಪ್ರೇಶ್ ವೇ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿರುವ ಎಕ್ಸ್ ಪ್ರೇಸ್ ರಸ್ತೆಗಳಲ್ಲಿ ಸಹ ಕಾಣಬಹುದಾಗಿದೆ.