25.1 C
Bengaluru
Thursday, July 11, 2024

ಪಿ.ಎಸ್.ಐ ಕೆ.ಹರೀಶ್ ರವರ ಜಾಮೀನು ಅರ್ಜಿ ವಜಾಮಾಡಿದ ಹೈಕೊರ್ಟ್

ಬೆಂಗಳೂರು20; 2022 ರಲ್ಲಿ ನಡೆದಿದ್ದ 545 ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಇಬ್ಬರು ಪಿ.ಎಸ್.ಐ ಆಕಾಂಕ್ಷಿಗಳಿಂದ ತಲಾ 30 ಲಕ್ಷದಂತೆ ಒಟ್ಟು 60 ಲಕ್ಷ ರೂ ಹಣವನ್ನು ಪಡೆದುಕೊಂಡು ಮಧ್ಯವರ್ತಿಯಾಗಿ ಅಕ್ರಮ ಎಸಗಿದ ಆರೋಪದಲ್ಲಿ ಈ ಹಿಂದೆ ಪಶ್ಚಿಮ ವಿಭಾಗದ ಬ್ಯಾಡರಹಳ್ಳಿಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಹರೀಶ್ ರವರು ಹಾಲಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಈತನು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ನ್ಯಾಯಾಮೂರ್ತಿ ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿ ಜಾಮೀನು ವಜಾಗೊಳಿಸಿ ಆದೇಶ ನೀಡಿದೆ.

ನ್ಯಾಯಾಲಯದ ವಿಚಾರಣೆ ವೇಳೆಯಲ್ಲಿ ಸಿಐಡಿ ಪರವಾಗಿ ವಾದ ಮಂಡಿಸಿದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ‘ ಈ ಪ್ರಕರಣವು ಈ ಹಿಂದೆ ಮಧ್ಯಪ್ರದೇಶ ವ್ಯಾಪಂ ಹಾಗೂ ಬಿಹಾರದ ಎಸ್ಸೆಸಲ್ಸಿ ಟಾಪರ್ ಗಳ ಹಗರಣದ ಮಾದರಿಯಲ್ಲಿದ್ದು ಇದರಲ್ಲಿ ಪ್ರಭಾವಿ ರಾಜಕರಣಿಗಳು, ದೊಡ್ಡ ದೊಡ್ಡ ಐಪಿಎಸ್ ಅಧಿಕಾರಿಗಳು, ಸಾರ್ವಜನಿಕರು ಶಾಮೀಲಾಗಿದ್ದು ತನಿಖೆಯನ್ನು ಇನ್ನು ಮುಂದುವರೆಸಲಾಗಿದೆ ಜೊತೆಗೆ ಎಫ್.ಎಸ್.ಎಲ್ ವರದಿಗಳು ಬರಬೇಕಾಗಿದ್ದು ಕಾಲ್ ರೆಕಾರ್ಡ್ ಗಳನ್ನು ಪರಿಶೀಲಿಸಬೇಕಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಇದೆ ಆದ್ದರಿಂದ ಆರೋಪಿತನಿಗೆ ಜಾಮೀನು ನೀಡದೆ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕೆಂದು ವಾದಮಂಡಿಸಿ ಕೋರಿದ್ದರಿಂದ ಇದನ್ನು ಮಾನ್ಯ ಮಾಡಿದ ಘನ ಉಚ್ಚ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.

Related News

spot_img

Revenue Alerts

spot_img

News

spot_img