21 C
Bengaluru
Tuesday, July 16, 2024

ದೇಶದಲ್ಲಿ ಮೂರು ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಗೊಳಿಸಿದ ಕೇಂದ್ರ ಚುನಾವಣಾ ಆಯೋಗ!

Central# Election#recognition#political#mamata banerjee

ನವದೆಹಲಿ (ಏ.11): ದೇಶದ ಮೂರು ರಾಜಕೀಯ ಪಕ್ಷಗಳಾದ ಮಮತಾ ಬ್ಯಾನರ್ಜಿ ಸಾರಥ್ಯದ ತೃಣಮೂಲ ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ತನ್ನ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದೆ. ಮಂಗಳವಾರ ಈ ಮೂರು ಪಕ್ಷಗಳ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ವಾಪಾಸ್ ಪಡೆದುಕೊಂಡಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಇನ್ನೊಂದೆಡೆ ಎನ್ಸಿಪಿಯಿಂದ ಕಿತ್ತುಕೊಂಡಿರುವ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಆಮ್ ಆದ್ಮಿ ಪಾರ್ಟಿಗೆ ನೀಡಲಾಗಿದೆ. ಕರ್ನಾಟಕ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ನೀಡಿರುವುದು ಸಂಭ್ರಮಕ್ಕೆ ಕಾರಣವಾಗಿದೆ.

ಇನ್ನು ಪ್ರಾದೇಶಿಕ ಪಕ್ಷಗಳ ವಿಭಾಗದಲ್ಲಿ ಕೇಂದ್ರ ಚುನಾವಣಾ ಆಯೋಗ, ಕೆ.ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಹಾಗೂ ರಾಷ್ಟ್ರೀಯ ಲೋಕ ದಳಕ್ಕೆ ನೀಡಿದ್ದ ಪ್ರಾದೇಶಿಕ ಪಕ್ಷಗಳ ಸ್ಥಾನಮಾನವನ್ನು ತೆಗೆದುಹಾಕಿದೆ. ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ ನಾಗಾಲ್ಯಾಂಡ್ನಲ್ಲಿ ಪ್ರಾದೇಶಿಕ ಪಕ್ಷವಾಗಿ ಮಾನ್ಯತೆ ಪಡೆದಿದ್ದರೆ, ತ್ರಿಇಪುರದಲ್ಲಿ ತಿಪ್ರಾ ಮೋಥಾ ಪಾರ್ಟಿ ಪ್ರಾದೇಶಿಕ ಪಕ್ಷದ ಸ್ಥಾನಮಾನ ಪಡೆದಿದೆ.
ಚುನಾವಣಾ ಆಯೋಗವು ಸ್ವತಃ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಸ್ಥಿತಿಯನ್ನು ಪರಿಶೀಲಿಸುತ್ತದೆ, ಇದು ಸಿಂಬಲ್ ಆರ್ಡರ್ 1968 ರ ಅಡಿಯಲ್ಲಿ ನಿರಂತರ ಪ್ರಕ್ರಿಯೆಯಾಗಿದೆ. 2019 ರಿಂದ, ಚುನಾವಣಾ ಆಯೋಗವು 16 ರಾಜಕೀಯ ಪಕ್ಷಗಳ ಸ್ಥಿತಿಯನ್ನು ಮೇಲ್ದರ್ಜೆಗೇರಿಸಿದೆ ಮತ್ತು 9 ರಾಷ್ಟ್ರೀಯ ರಾಜ್ಯ ರಾಜಕೀಯ ಪಕ್ಷಗಳ ಪ್ರಸ್ತುತ ಸ್ಥಿತಿಯನ್ನು ಹಿಂಪಡೆದಿದೆ.

ಉಳಿದಂತೆ ಕೇಂದ್ರ ಚುನಾವಣಾ ಆಯೋಗ, ಉತ್ತರ ಪ್ರದೇಶದಲ್ಲಿ ಆರ್ಎಲ್ಡಿ ಪಕ್ಷದ ಪ್ರಾದೇಶಿಕ ಪಕ್ಷ ಸ್ಥಾನಮಾನವನ್ನು ತೆಗೆದುಹಾಕಿದ್ದರೆ, ರೆವೆಲ್ಯೂಷನರಿ ಸೋಶಿಯಲಿಸ್ಟ್ ಪಾರ್ಟಿ, ಪಶ್ಚಿಮ ಬಂಗಾಳದಲ್ಲಿ ತನ್ನ ಪ್ರಾದೇಶಿಕ ಪಕ್ಷದ ಮಾನ್ಯತೆ ಕಳೆದುಕೊಂಡಿದೆ. ವಾಯ್ಸ್ ಆಫ್ ದ ಪೀಪಲ್ ಪಾರ್ಟಿ ಮೇಘಾಲಯದಲ್ಲಿ ಪ್ರಾದೇಶಿಕ ಪಕ್ಷದ ಸ್ಥಾನಮಾನ ಗಳಿಸಿಕೊಂಡಿದೆ.

ರಾಷ್ಟ್ರೀಯ ಪಕ್ಷಕ್ಕೆ ಸಿಗುವ ಲಾಭಗಳು
1. ರಾಷ್ಟ್ರೀಯ ಪಕ್ಷಕ್ಕೆ ನಿರ್ದಿಷ್ಟ ಚುನಾವಣಾ ಚಿಹ್ನೆಯನ್ನು ನಿಗದಿಪಡಿಸಲಾಗುತ್ತದೆ. ರಾಷ್ಟ್ರೀಯ ಪಕ್ಷದ ಚುನಾವಣಾ ಚಿಹ್ನೆಯನ್ನು ಇಡೀ ದೇಶದಲ್ಲಿ ಬೇರೆ ಯಾವುದೇ ಪಕ್ಷಗಳು ಬಳಸುವಂತಿಲ್ಲ.
2. ಮಾನ್ಯತೆ ಪಡೆದ ‘ರಾಜ್ಯ ಮತ್ತು ರಾಷ್ಟ್ರೀಯ’ ಪಕ್ಷಗಳಿಗೆ ನಾಮನಿರ್ದೇಶನವನ್ನು ಸಲ್ಲಿಸಲು ಒಬ್ಬನೇ ಒಬ್ಬ ಪ್ರಸ್ತಾವಕರು ಸಾಕಾಗುತ್ತದೆ.
3. ಮಾನ್ಯತೆ ಪಡೆದ ‘ರಾಜ್ಯ’ ಮತ್ತು ‘ರಾಷ್ಟ್ರೀಯ’ ಪಕ್ಷಗಳಿಗೆ ಚುನಾವಣಾ ಆಯೋಗವು (ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ) ಎರಡು ಸೆಟ್ ಮತದಾರರ ಪಟ್ಟಿಯನ್ನು ಉಚಿತವಾಗಿ ನೀಡುತ್ತದೆ. ಅಲ್ಲದೆ, ಈ ಪಕ್ಷಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯ ಪ್ರತಿಯನ್ನು ಉಚಿತವಾಗಿ ಪಡೆಯುತ್ತಾರೆ.
4. ಈ ಪಕ್ಷಗಳು ತಮ್ಮ ಪಕ್ಷದ ಕಚೇರಿಗಳನ್ನು ಸ್ಥಾಪಿಸಲು ಸರ್ಕಾರದಿಂದ ಭೂಮಿ ಅಥವಾ ಕಟ್ಟಡಗಳನ್ನು ಪಡೆಯುತ್ತವೆ.
5. ರಾಜ್ಯ ಮತ್ತು ರಾಷ್ಟ್ರೀಯ ಪಕ್ಷಗಳು 40 ಸ್ಟಾರ್ ಪ್ರಚಾರಕರನ್ನು ನೇಮಿಸಿಕೊಳ್ಳಬಹುದು ಮತ್ತು ಇತರ ಪಕ್ಷಗಳು ಚುನಾವಣಾ ಪ್ರಚಾರದ ಸಮಯದಲ್ಲಿ ’20 ಸ್ಟಾರ್ ಪ್ರಚಾರಕರನ್ನು’ ನೇಮಿಸಿಕೊಳ್ಳಬಹುದು. ಸ್ಟಾರ್ ಪ್ರಚಾರಕರ ಪ್ರಯಾಣ ವೆಚ್ಚವನ್ನು ಅವರ ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚದಲ್ಲಿ ಸೇರಿಸಲಾಗುವುದಿಲ್ಲ.
6. ಚುನಾವಣೆಗಳಿಗೆ ಸ್ವಲ್ಪ ಮೊದಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ದೂರದರ್ಶನ ಮತ್ತು ರೇಡಿಯೊವನ್ನು ಪ್ರಸಾರ ಮಾಡಲು ಈ ಪಕ್ಷಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದ ಅವರು ಗರಿಷ್ಠ ಸಂಖ್ಯೆಯ ಜನರಿಗೆ ತಲುಪಲು ಸಾಧ್ಯವಾಗಲಿದೆ.

Related News

spot_img

Revenue Alerts

spot_img

News

spot_img