27.6 C
Bengaluru
Friday, October 11, 2024

ಹೊಸ ಸಂಸತ್‌ ಭವನದಲ್ಲಿ ಏನಿದೆ..? ಹೇಗಿದೆ..?

ಬೆಂಗಳೂರು, ಮೇ. 27 : ದೆಹಲಿಯಲ್ಲಿ ನೂತನ ಸಂಸತ್‌ ಭವನ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದ್ದು, ನಾಳೆ ಇದರ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಲಿದ್ದಾರೆ. ಸುಮಾರು 971 ಕೋಟಿ ರೂ. ವೆಚ್ಚದಲ್ಲಿ ಈ ನೂತನ ಸಂಸತ್‌ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ತ್ರಿಕೋನ ಆಕೃತಿಯಲ್ಲಿ ರಚಿಸಲಾಗಿದೆ. ಇದುಹೊಸ ಸಂಸತ್ ಭವನವು ದೊಡ್ಡ ಶಾಸಕಾಂಗ ಕೊಠಡಿಗಳನ್ನು ಹೊಂದಿದೆ. ಹಳೆಯದ್ದಕ್ಕಿಂತಲೂ ಮೂರು ಪಟ್ಟು ಅಧಿಕ ಆಸನಗಳನ್ನು ಹೊಂದಿದ್ದು, ತಾವರೆ ಹೂವಿನ ಥೀಮ್ ಆಧರಿಸಿದೆ.

ಲೋಕಸಭೆಯಲ್ಲಿ 888 ಆಸನಗಳನ್ನು ಹೊಂದಿದ್ದು, ರಾಜ್ಯಸಭೆಗೆ 348 ಆಸನಗಳು ಇದ್ದು, ಒಟ್ಟಾರೆಯಾಗಿ 1,272 ಆಸನಗಳು ಇವೆ. ಸಂಸತ್‌ ಕಟ್ಟಡದ ಲೋಕಾರ್ಪಣೆಯ ಸ್ಮರಣಾರ್ಥವಾಗಿ 75 ರೂಪಾಯಿಯ ವಿಶೇಷ ನಾಣ್ಯವನ್ನು ಕೂಡ ಇದೇ ಸರ್ಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಹಳೆಯ ಸಂಸತ್ ಭವನವು ವೃತ್ತಾಕಾರದಲ್ಲಿ ಇತ್ತು. ಈಗಿನದ್ದು, ತ್ರಿಕೋನಾಕಾರದಲ್ಲಿ ಇದೆ. ಹಳೆಯ ಸಂಸತ್ ಭವನದ ಪಕ್ಕದಲ್ಲೇ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡ 150 ವರ್ಷ ಬಾಳಿಕೆ ಬರಲಿದೆ ಎಂದು ಹೇಳಲಾಗಿದೆ,

ಈ ಸಂಸತ್ ಭವನ ಭೂಕಂಪ ಆದರೂ ಯಾವುದೇ ರೀತಿ ಹಾನಿ ಆಗದ ರೀತಿಯಲ್ಲಿ ನಿರ್ಮಿಸಲಾಗಿದೆ. 4 ಅಂತಸ್ತಿನ ಈ ಕಟ್ಟಡದಲ್ಲಿ ಸಚಿವರು, ಹಲವು ಕಮಿಟಿಗಳಿಗೂ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡದ ಒಳಗಡೆ ವಿಶಾಲ ಜಾಗವನ್ನು ಬಿಟ್ಟಿದ್ದು, ಆಲದ ಮರವನ್ನು ನೆಡುವ ಉದ್ದೇಶವಿದೆ. ಹಳೆಯ ಭವನವನ್ನು ಕಟ್ಟಡ ಮ್ಯೂಸಿಯಂ ಆಗಿ ಪರಿವರ್ತಿಸಲಾಗುತ್ತದೆ. 64,500 ಚದರ ಮೀಟರ್ ಪ್ರದೇಶದಲ್ಲಿ ಹೊಸ ಸಂಸತ್ ಭವನವನ್ನು ನಿರ್ಮಾಣ ಮಾಡಲಾಗಿದೆ.

Related News

spot_img

Revenue Alerts

spot_img

News

spot_img