ಬೆಂಗಳೂರು, ಜ. 04 : ಪುರಾತನ ಕಾಲದಿಂದಲೂ ಭಾರತೀಯರು ವಾಸ್ತು ಶಾಸ್ತ್ರವನ್ನು ಅನುಸರಿಸುತ್ತಾ ಬಂದಿದ್ದಾರೆ. ವಾಸ್ತು ಶಾಸ್ತ್ರವನ್ನು ಪಾಲಿಸುವ ಮೂಲಕ ಹಲವರು ಲಾಭವನ್ನು ಪಡೆದಿದ್ದು, ಅವರ ಬದುಕಲ್ಲಿ ಸಕರಾತ್ಮಕತೆ ಘಟನೆಗಳು ನಡೆದಿವೆ. ಹಾಗಾಗಿ ಸಾಕಷ್ಟು ಬಂದಿ ಪರಂಪರಾಗತವಾಗಿ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಂತೆಯೇ ವಾಸ್ತು ಶಾಸ್ತ್ರವನ್ನು ಕೂಡ ಪಾಲಿಸುತ್ತಾರೆ. ವಾಸ್ತು ಶಾಸ್ತ್ರವನ್ನು ಅನುಸರಿಸುವುದರಿಂದ ಜೀವನವೂ ಯಶಸ್ಸಿನ ಹಾದಿಯತ್ತ ಕೊಂಡೊಯ್ಯುತ್ತದೆ. ವಾಸ್ತು ಶಾಸ್ತ್ರವನ್ನು ಪಾಲಿಸುವುದು ಸುಲಭ ಮತ್ತು ಸರಳವಾಗಿಯೂ ಇದೆ. ಇದಕ್ಕಾಗಿ ಯಾವ ಶ್ರಮವನ್ನು ಪಡಬೇಕಾಗಿ ಬರುವುದಿಲ್ಲ.
ವಾಸ್ತು ಪ್ರಕಾರ ನಿರ್ಮಿಸದ ಮನೆಗಳಿಗೆ ಸರಳವಾಗಿ ಪರಿಹಾರಗಳನ್ನು ಪಡೆಯಬಹುದು. ವಾಸ್ತು ದೋಷಗಳಿರುವ ಮನೆಯಲ್ಲಿ ಸಮಸ್ಯೆಗಳು ತಲೆ ದೂರುತ್ತವೆ. ವಾಸ್ತು ಶಾಸ್ತ್ದಲ್ಲಿ ಹೇಳೀರುವಂತಹ ಪರಿಹಾರಗಳನ್ನು ಮಾಡಿಕೊಂಡರೆ, ಮನೆಯಲ್ಲಿ ನೆಮ್ಮದಿಯೂ ನೆಲೆಸುತ್ತದೆ. ಇನ್ನು ವಾಸ್ತು ದೋಷವಿರುವ ಮನೆಗಳಿಗೆ ಸಾಮಾನ್ಯ ಪರಿಹಾರಗಳನ್ನು ಕೆಳಗೆ ನೀಡಲಾಗುದೆ. ನಿಮ್ಮ ಮನೆಯಲ್ಲಿ ಅಂತಹ ದೋಷಗಳು ಕಾಣಿಸಿಕೊಂಡಿದ್ದರೆ, ಈ ಪರಿಹಾರಗಳನ್ನು ಪ್ರಯತ್ನಿಸಿ ನಿಮಗೆ ಒಳ್ಳೆಯದಾಗುತ್ತದೆ.
ಅಶೋಕ ಮರ:
ಅಶೋಕ ಮರದಿಂದ ಮನೆಗೆ ಒಳ್ಳೆಯದಾಗುತ್ತದೆ. ನಿಮ್ಮ ಮನೆಯಲ್ಲಿ ವಾಸ್ತು ದೋಷ ಕಂಡು ಬಂದರೆ, ಮನೆಯ ಮುಖ್ಯದ್ವಾರದಲ್ಲಿ ಅಶೋಕ ಮರಗಳನ್ನು ಬೆಳೆಸಿ. ಮುಖ್ಯದ್ವಾರದ ಎರಡೂ ಬದಿಯಲ್ಲಿ ಅಶೋಕ ಮರಗಳನ್ನು ನೆಡಿ. ಆಗ ನಿಮ್ಮ ಮನೆಗೆ ಸಮಸ್ಯೆಗಳು ಬರುವುದಿಲ್ಲ. ವಾಸ್ತು ದೋಷಗಳು ಸುಲಭವಾಗಿ ಪರಿಹಾರವಾಗುತ್ತವೆ.
ಅಗ್ನಿ ಮೂಲೆಯಲ್ಲಿ ಬಲ್ಬ್:
ಸಾಮಾನ್ಯವಾಗಿ ಅಡುಗೆ ಮನೆಯನ್ನು ಆಗ್ನೇಯ ಮೂಲೆಯಲ್ಲಿ ನಿರ್ಮಿಸಬೇಖು. ಹಾಗೊಂದು ವೇಳೆ, ನಿಮ್ಮ ಮನೆಯ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರದಿದ್ದರೆ, ನಿಮ್ಮ ಅಡುಗೆ ಮನೆಯ ಅಗ್ನಿ ಮೂಲೆಯಲ್ಲಿ ಬಲ್ಬ್ ಅನ್ನು ಇರಿಸಿ. ಈ ಬಲ್ಬ್ ಅನ್ನು ದಿನಕ್ಕೆ ಒಂದು ಬಾರಿ ಆದರೂ ಆನ್ ಮಾಡಿ ಇಡಿ. ಇದರಿಂದ ಅಡುಗೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ.
ಈಶಾನ್ಯದಲ್ಲಿ ಕಲಶ :
ಮನೆಯಲ್ಲಿ ವಾಸ್ತು ದೋಷದಿಂದ ಸಮಸ್ಯೆಗಳಾಗುತ್ತಿದ್ದರೆ, ಈ ಸುಲಭ ಉಪಾಯವನ್ನು ಂಆಡಬಹುದು. ಈಶಾನ್ಯಾ ದಿಕ್ಕು ಮಂಗಳಕರವಾದದ್ದು. ಹಾಗಾಗಿ ಈಶಾನ್ಯ ದಿಕ್ಕಿನಲ್ಲಿ ಒಂದು ಕಲಶವನ್ನು ಇರಿಸಿ. ಇದು ಮನೆಯ ಎಲ್ಲಾ ವಾಸ್ತು ದೋಷಗಳನ್ನು ಪರಿಹಾರ ಮಾಡುತ್ತದೆ. ಕಲಶ ಒಡೆಯದಂತೆ ನೋಡಿಕೊಳ್ಳಿ.
ಕಸ ಇಡುವ ಸ್ಥಳ:
ಮನೆಯಲ್ಲಿ ಕಸವನ್ನು ಯಾವುದೇ ಕಾರಣಕ್ಕೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಡಿ. ಇದು ಮನೆಯಲ್ಲಿ ವಾಸ್ತು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಉತ್ತರ ಮತ್ತು ಪೂರ್ವ ದಿಕ್ಕು ಸದಾ ಮಂಗಳಕರವಾದ್ದರಿಂದ ಈ ದಿಕ್ಕಿನಲ್ಲಿ ಮನೆಯ ಬಾಗಿಲು ಹಾಗೂ ಕಿಟಕಿಗಳು ಇದ್ದರೆ ಉತ್ತಮ.
ಕುದುರೆ ಲಾಳ:
ನಿಮ್ಮ ಮನೆಯು ಸುರಕ್ಷಿತವಾಗಿರಲಿ ಎಂದು ಬಯಸಿದರೆ, ಕುದುರೆಯ ಲಾಳವನ್ನು ತನ್ನಿ. ಹಾರ್ಸ್ ಶ್ಯೂಗಳನ್ನು ನಿಮ್ಮ ಮನೆಯ ಗೇಟ್ ಮೇಲೆ ನೇತು ಹಾಕಿ. ಇದು ನಿಮ್ಮ ಮನೆಗೆ ಭದ್ರತೆಯನ್ನು ಒದಗಿಸುತ್ತದೆ. ದುಷ್ಟ ಕಣ್ಣು ನಿಮ್ಮ ಮನೆಯ ಮೇಲೆ ಬೀಲುವುದಿಲ್ಲ. ಅಲ್ಲದೇ, ನಕರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸದಂತೆ ಕಾಪಾಡುತ್ತದೆ.



