26.3 C
Bengaluru
Friday, October 4, 2024

ಪೊಲೀಸರಿಗೆ ರಜೆ ನೀಡದ ದಿನ ರಜಾಭತ್ಯೆಯನ್ನು ನೀಡುವಂತೆ ಕೋರಿ ಪತ್ರ ಬರೆದ ಸ್ನೇಹಮಯಿ ಕೃಷ್ಣ

ಬೆಂಗಳೂರು, ಫೆ. 03 : ಪೊಲೀಸರ ಕೆಲಸ ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ರಜೆ ಇಲ್ಲದೇ, ಶಿಫ್ಟ್‌ ಎನ್ನದೇ ಕೆಲಸ ಮಾಡಬೇಕು. ಹೀಗೆ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಈಗ ರಜಾಭತ್ಯೆಯನ್ನು ನೀಡುವಂತೆ ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಸ್ನೇಹಮಯಿ ಕೃಷ್ಣ ಎಂಬುವರು ಮನವಿ ಮಾಡಿದ್ದಾರೆ. ಕರ್ನಾಟಕ ಸರ್ಕಾರ ವಿಧಾನಸೌಧ, ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಮನವಿ ಮಾಡಿ ಪತ್ರವನ್ನು ಬರೆದಿದ್ದಾರೆ.

ಪೊಲೀಸ್ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ವಾರದ ರಜೆಯನ್ನು ನೀಡಲು, ರಜೆ ನೀಡದ ಸಂದರ್ಭದಲ್ಲಿ ರಜಾಭತ್ಯೆಯನ್ನಾಗಿ ಒಂದು ದಿನ ಭತ್ಯೆಯನ್ನು ನೀಡಲು ಮತ್ತು ವಾರದ ರಜೆ ನೀಡದ ಅಧಿಕಾರಿಯಿಂದ ವಾರದ ಭತ್ಯೆಯನ್ನು ವಸೂಲಿ ಮಾಡಲು ಮನವಿ ಮಾಡಿಕೊಳ್ಳುತ್ತೇನೆ. ಪೊಲೀಸ್ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ವಾರದ ರಜೆಯನ್ನು ನೀಡದೆ ಅಥವಾ ರಜೆ ನೀಡದ ಸಂದರ್ಭದಲ್ಲಿ ರಜಾಭತ್ಯೆಯನ್ನಾಗಿ ಒಂದು ದಿನ ಭತ್ಯೆಯನ್ನು ನೀಡದೆ ಪೊಲೀಸ್ ಸಿಬ್ಬಂದಿಗಳು ಅಸಮಾನತೆಯಿಂದ, ಅಸಮಾಧಾನದಿಂದ, ಮಾನಸಿಕ ಒತ್ತಡದಿಂದ ಕೆಲಸ ಮಾಡಲು ಕಾರಣವಾಗಿದೆ.

ಆದರಿಂದ ಈ ಕೂಡಲೇ ಪೊಲೀಸ್ ಸಿಬ್ಬಂದಿಗಳಿಗೆ ವಾರದ ರಜೆಯನ್ನು ಕಡ್ಡಾಯವಾಗಿ ನೀಡುವಂತೆ ಆದೇಶವಿದ್ದರೂ ಸಹ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ವಾರದ ರಜೆಯನ್ನು ನೀಡದೆ, ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಆದ್ದರಿಂದ ಕಡ್ಡಾಯವಾಗಿ ವಾರದ ರಜೆ ನೀಡಬೇಕು. ರಜೆ ನೀಡದ ಸಂದರ್ಭದಲ್ಲಿ ರಜಾಭತ್ಯೆಯನ್ನಾಗಿ ಒಂದು ದಿನಕ್ಕೆ ಕೇವಲ 200/- ರೂಪಾಯಿ ಗಳನ್ನು ನೀಡುತ್ತಿರುವುದು ಅವೈಜ್ಞಾನಿಕ ಮತ್ತು ಅಸಂವಿಧಾನಿಕ ನಡೆಯಾಗಿರುತ್ತದೆ. ಆದ್ದರಿಂದ ರಜೆ ನೀಡದ ಸಂದರ್ಭದಲ್ಲಿ ಕಡ್ಡಾಯವಾಗಿ ಒಂದು ದಿನದ ಸಂಬಳವನ್ನು ರಜಾಭತ್ಯೆಯನ್ನಾಗಿ ನೀಡಬೇಕು.

ಕೆಲವು ಪೊಲೀಸ್ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ವಾರದ ರಜೆಯನ್ನು ನೀಡದೆ, ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ನೀಡುವ ರಜಾಭತ್ಯೆಯನ್ನು ಸದರಿ ಅಧಿಕಾರಿಯ ಸಂಬಳದಲ್ಲಿ ವಸೂಲಿ ಮಾಡಬೇಕು. ಈ ಬಗ್ಗೆ ಸೂಕ್ತ ಆದೇಶದ ಸುತ್ತೋಲೆಯನ್ನು ಕೂಡಲೇ ಹೊರಡಿಸುವ ಮೂಲಕ, ಪೊಲೀಸ್ ಸಿಬ್ಬಂದಿಗಳು ಸಮಾನತೆಯಿಂದ, ಸಮಾಧಾನದಿಂದ ಕೆಲಸ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

Related News

spot_img

Revenue Alerts

spot_img

News

spot_img