ಬೆಂಗಳೂರು, ಡಿ. 30 : ವಾಸ್ತು ದೋಷಗಳ ಬಗ್ಗೆ ಎಲ್ಲರಿಗೂ ಸಾಕಷ್ಟು ಅನುಮಾನಗಳು ಇರುತ್ತವೆ. ಪ್ರತಿಯೊಬ್ಬರು ಕೂಡ ಸಂಕಷ್ಟ ಎದುರಾದಾಗಲೇ ವೆಂಕಟ ರಮಣನನ್ನು ನೋಡುವುದು. ಜ್ಯೋತಿಷ್ಯ, ವಾಸ್ತು ಶಾಸ್ತ್ರಗಳನ್ನು ಹಲವು ಮಂದಿ ನಂಬುವುದಿಲ್ಲ. ಅದೆಲ್ಲಾ ಒಂದು ನೆಪ, ಸುಳ್ಳು ಎಂದೆಲ್ಲಾ ವಾದ ಮಾಡುತ್ತಾರೆ. ಆದರೆ ಅವರಿಗೆ ಸ್ವತಃ ಯಾವುದಾದರೂ ತೊಂದರೆಗಳು ಎದುರಾದರೆ ಆಗ ತಾವು ನಂಬದ ಶಾಸ್ತ್ರಗಳ ಮೇಲೆ ಒಲವು ತೋರುತ್ತಾರೆ. ವಾಸ್ತು ಬಗ್ಗೆ ಮನೆ ಕಟ್ಟುವಾಗ, ಮನೆಯಲ್ಲಿ ಯಾವುದಾದರೂ ಸಮಸ್ಯೆಗಳಾಗುತ್ತಿದ್ದರೆ, ಸಾಮಾನ್ಯವಾಗಿ ವಾಸ್ತು ದೋಷ ಏನಾದರೂ ಇದೆಯಾ ಎಂದು ತಿಳಿಯಲು ಮುಂದಾಗುತ್ತಾರೆ.
ಕೆಲವರು ಅದೆಷ್ಟೋ ವಾಸ್ತು ತಜ್ಞರನ್ನು ಸಂಪರ್ಕಿಸುತ್ತಾರೆ. ಮನೆಯಲ್ಲಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನೂ ಹುಡುಕಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದರೆ, ಅದು ಸಾಧ್ಯವಾಗುವುದೇ ಕಷ್ಟ. ಕೆಲವರಿಗೆ ಬಹುಬೇಗನೇ ಪರಿಹಾರ ಸಿಕ್ಕರೆ, ಮತ್ತೂ ಕೆಲವರಿಗೆ ಎಷ್ಟು ದಿನಗಳಾದರೂ, ವರ್ಷಗಳೇ ಉರುಳಿದರೂ ಪರಿಹಾರ ಸಿಕ್ಕಿರುವುದಿಲ್ಲ. ಜ್ಯೋತಿಷ್ಯ, ವಾಸ್ತು ಅಂತ ಎಲ್ಲಾ ಕಡೆಗಳಲ್ಲೂ ತಿರುಗಾಡಿದರೂ, ಎಷ್ಟೇ ಹಣ ವ್ಯಯಿಸಿದರೂ ಪರಿಹಾರ ಸಿಕ್ಕಿರುವುದಿಲ್ಲ. ಇಂತಹವರು ಹೆಚ್ಚಾಗಿ ದೂರುವುದು ವಾಸ್ತು ಶಾಸ್ತ್ರಜ್ಷರನ್ನು. ಯಾರನ್ನು ನಂಬುವುದು? ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ ಎಂದು ಹೇಳಿಸರುವುದನ್ನು ನಾವು ಕೇಳಿರುತ್ತೇವೆ.
ಹಾಗಾದರೆ ಇದಕ್ಕೆ ಪರಿಹಾರವೇನು..? ಈ ಬೋಗಸ್ ವಾಸ್ತು ಹುಟ್ಟಿಕೊಳ್ಳಲು ಕಾರಣವೇನು.? ವಾಸ್ತು ಪಂಡಿತರು ಹೇಳುವುದೆಲ್ಲವೂ ಸರಿಯಾಗಿದೆಯಾ.? ನಾವು ಯಾವುದನ್ನು ಫಾಲಿಸಬೇಖು.? ಯಾಕಿಷ್ಟು ಗೊಂದಲಗಳಾಗುತ್ತಿವೆ ಎಂಬುದು ಹಲವರಲ್ಲಿ ಮೂಡುವ ಪ್ರಶ್ನೆ. ಈ ಪ್ರಶ್ನೆಗಳಿಗೆ ಡಾ. ರೇವತಿ ವೀ ಕುಮಾರ್ ಅವರು ಸರಳವಾಗಿ ಉತ್ತರ ನೀಡಿದ್ದಾರೆ. ವಾಸ್ತು ಶಾಸ್ತ್ರದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವಂತಹ ಹಾಗೂ ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡಿರುವಂತಹ ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಆಗಿರುವ ಡಾ. ರೇವತಿ ವೀ ಕುಮಾರ್ ವಾಸ್ತು ಬಗ್ಗೆ ಜನರಲ್ಲಿ ಇರುವ ಸಾಕಷ್ಟು ಪ್ರಶ್ನೆಗಳಿಗೆ, ಗೊಂದಲ ಹಾಗೂ ಅನುಮಾನಗಳಿಗೆ ಸರಳವಾಗಿ ಉತ್ತರ ಕೊಟ್ಟಿದ್ದಾರೆ.
ವಾಸ್ತು ಪಂಡಿತರು ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಾರೆ. ವಾಸ್ತುವಿನಲ್ಲಿ ಈ ಸಮಸ್ಯೆ ಎಲ್ಲಾ ಕಡೆ ಎದ್ದು ಕಾಣುತ್ತದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ನಾವು ಯಾರ ಮಾತನ್ನು ಕೇಳುವುದು ಎಂದು ಕೇಳುವ ಜನರ ಮಾತಿಗೆ ವಾಸ್ತು ಶಾಸ್ತ್ರದ ಬಗ್ಗೆ ಹೇಳಿರುವ ಗ್ರಂಥಗಳಲ್ಲೇ ಸಮಸ್ಯೆ ಇದೆಯಾ, ವಾಸ್ತು ಹೇಳುವ ಪಂಡಿತರಲ್ಲಿ ಸಮಸ್ಯೆಯಾ , ಇಲ್ಲವೇ ಜನರಲ್ಲಿ ಸಮಸ್ಯೆ ಇದೆಯಾ ಎಂಬ ಬಗ್ಗೆ ಡಾ.ರೇವತಿ ವೀ ಕುಮಾರ್ ಅವರು ಮಾತನಾಡಿದ್ದಾರೆ. ಮೊದಲಿಗೆ ವಾಸ್ತು ಗ್ರಂಥಗಳಲ್ಲಿ ಎಲ್ಲವೂ ಶೇ.90-95 ರಷ್ಟು ಸರಿಯಾಗೇ ಇರುವುದರಿಂದ ವಾಸ್ತುವಿನ ಯಾವ ಗ್ರಂಥದಲ್ಲೂ ಸಮಸ್ಯೆ ಇಲ್ಲ. ಎಲ್ಲಾ ಶಾಸ್ತ್ರೀಯ ಗ್ರಂಥಗಳಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಹೇಳಿದ್ದಾರೆ.
ಇನ್ನು ವಾಸ್ತುಗಳಲ್ಲಿ ಕೆಲ ಪದ್ಧತಿಗಳಿವೆ. ಅವುಗಳೆಂದರೆ, ಕಾಸ್ಮಿಕ್ ವಾಸ್ತು, ಸರಳ ವಾಸ್ತು, ಪಂಚಭೂತ ವಾಸ್ತು, ಕ್ಲಾಸಿಕಲ್ ವಾಸ್ತು ಸೇರಿದಂತೆ ಸಾಕಷ್ಟು ಪದ್ಧತಿಗಳಿವೆ. ಬೇರೆ ಬೇರೆ ಪದ್ಧತಿಗಳು ವಾಸ್ತು ಹೇಳುವ ರೀತಿ ಬೇರೆ ಬೇರೆ ಇರುತ್ತದೆ. ಕೆಲವರು ಐಯಸ್ಕಾಂತವನ್ನು ಆಧಾರವನ್ನಾಗಿಟ್ಟುಕೊಂಡು ಹೇಳುತ್ತಾರೆ. ಇನ್ನು ಕೆಲವರು ಪಂಚ ಭೂತಗಳನ್ನು ಆಧಾರವಾಗಿಟ್ಟುಕೊಂಡು ವಾಸ್ತು ಶಾಸ್ತರವನ್ನು ಹೇಳುತ್ತಾರೆ. ಈ ರೀತಿಯಲ್ಲಿ ಬೇರೆ ಬೇರೆ ಪದ್ಧತಿಯಿಂದ ಹೇಳುವುದು ಮತ್ತು ಈ ಬಗ್ಗೆ ಅರಿವಿಲ್ಲದ ಕಾರಣ ಜನರಲ್ಲಿ ಗೊಂದಲ ಮೂಡುತ್ತದೆ. ವಾಸ್ತು ಹೇಳುವವರು ಎಲ್ಲಾ ರೀತಿಯಿಂದಲೂ ಅಂದರೆ ಎಲ್ಲಾ ಪದ್ಧತಿಯನ್ನೂ ಒಟ್ಟು ಗೂಡಿಸಿ ದೋಷ ಪರಿಹಾರವನ್ನು ನೀಡಬೇಕು. ಆದರೆ ಈ ಬಗ್ಗೆ ವಾಸ್ತು ಶಾಸ್ತ್ರಜ್ಞರು ಕೂಡ ತಮ್ಮ ಗ್ರಾಹಕರಿಗೆ ಮಾಹಿತಿ ನೀಡಿರುವುದಿಲ್ಲ. ಜನರಿಗೂ ಇದರ ಬಗ್ಗೆ ಅರಿವಿರದ ಕಾರಣ ಸಮಸ್ಯೆಗಳು ಕಾಣುತ್ತದೆ ಅಷ್ಟೇ. ಒಬ್ಬೊಬ್ಬರು ಒಂದೊಂದು ಆಯಾಮದಲ್ಲಿ ವಾಸ್ತು ಶಾಸ್ತ್ರ ಹೇಳುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಎಂದು ಹೇಳಿದ್ದಾರೆ.