ಚೆಕ್‌ ವಂಚನೆ ತಪ್ಪಿಸಲು ಪಾಸಿಟಿವ್‌ ಪೇ ವ್ಯವಸ್ಥೆ

0
183

ಬೆಂಗಳೂರು, ಫೆ. 13 : ಭಾರತೀಯ ರಿಸರ್ವ್ ಬ್ಯಾಂಕ್ 50,000 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚೆಕ್‌ಗಳನ್ನು ಎನ್‌ಕ್ಯಾಶ್ ಮಾಡಲು ಪಸಿಟಿವ್‌ ಪೇ ಸಿಸ್ಟಮ್‌ ವ್ಯವಸ್ಥೆಯನ್ನು ಅನುಸರಿಸಲು ಬ್ಯಾಂಕ್‌ ಗಳಿಗೆ ಹೇಳಿವೆ. ಇದನ್ನು ಅನುಸುರಿಸುತ್ತಿರುವ ಬ್ಯಾಂಕ್‌ ಗಳು ಈಗ ವಂಚನೆಗಳು ಕಡಿಮೆಯಾಗಿವೆ ಎಂದು ಹೇಳಿವೆ. ಹಾಗಾದರೆ ಈ ಪಾಸಿಟಿವ್‌ ಪೇ ಸಿಸ್ಟಮ್‌ ಎಂದರೆ ಏನು.? ಇದನ್ನು ಯಾವಾಗ, ಎಲ್ಲಿ ಹಾಗೂ ಹೇಗೆ ಅನುಸರಿಸಬೇಕು. ಇದರಿಂದ ಗ್ರಾಹಕರಿಗಾಗುವ ಪ್ರಯೋಜನಗಳು ಮತ್ತು ಬ್ಯಾಂಕ್‌ ಗೆ ಯಾವೆಲ್ಲಾ ರೀತಿಯ ಲಾಭವಿದೆ ಎಂಬುದನ್ನು ತಿಳಿಯೋಣ ಬನ್ನಿ..

ಪಸಿಟಿವ್‌ ಪೇ ಸಿಸ್ಟಮ್‌ ಅನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಜಾರಿಗೆ ತಂದಿದ್ದು, ಎಲ್ಲಾ ಬ್ಯಾಂಕ್‌ ಗಳಿಗೂ ಇದನ್ನು ಪಾಲಿಸುವಂತೆ ಸೂಚಿಸಿದೆ. ಇದರ ಪ್ರಕಾರ ಚೆಕ್‌ ಗಳನ್ನು ಮರು ಧೃಢೀಕರಣಗೊಳಿಸಲಾಗುತ್ತದೆ. ಚೆಕ್‌ ಗಳಿಂದ ವಂಚೆನೆ ಪ್ರಕರಣಗಳು ಹೆಚ್ಚಾಗುತ್ತವೆ. ಹಾಗೂ ಚೆಕ್‌ ಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ರಿಸರ್ವ್‌ ಬ್ಯಾಂಕ್‌ ಈ ವ್ಯವಸ್ಥೆಯನ್ನು ತಂದಿದೆ. ಇಲ್ಲಿ ಚೆಕ್‌ ಸುರಕ್ಷತೆಗಾಗಿ ಹೆಚ್ಚಿನ ಸಂಸ್ಕರಣೆ ನಡೆಯುತ್ತದೆ. ಆಪ್ಟಿಕಲ್‌ ಇಮೇಜ್‌ ಕ್ಯಾರೆಕ್ಟರ್‌ ಅನ್ನು ಬಳಸಿಕೊಂಡು ಚೆಕ್‌ ಮೇಲೆ ಮರುದೃಢೀಕರಣ ಮಾಡಲಾಗುತ್ತದೆ.

ಪಿಪಿಎಸ್ ಅಡಿಯಲ್ಲಿ, 50,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳು ಪಿಪಿಎಸ್‌ಗೆ ಅನುಗುಣವಾಗಿರಬೇಕು ಎಂದು ಆರ್‌ಬಿಐ ಹೇಳಿದೆ. ಆದರೆ, ಅದನ್ನು ಕಡ್ಡಾಯ ಮಾಡಿರಲಿಲ್ಲ. ಈ ನಿಯಮವು ಜನವರಿ 1, 2021 ರಿಂದ ಜಾರಿಗೆ ಬಂದಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳುವುದು ಖಾತೆದಾರರ ವಿವೇಚನೆಗೆ ಅನುಗುಣವಾಗಿರುತ್ತದೆ. ಬ್ಯಾಂಕ್‌ಗಳು 50,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳ ಸಂದರ್ಭದಲ್ಲಿ ಇದನ್ನು ಕಡ್ಡಾಯವಾಗಿ ಮಾಡಲು ಪರಿಗಣಿಸಬಹುದು.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದರೆ, 50,000ಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ ಅನ್ನು ನೀವು ಯಾರಿಗಾದರೂ ನೀಡುವುದಾದರೆ, ಸಂದೇಶ, ಮೊಬೈಲ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ಸೇರಿದಮತೆ ವಿವಿಧ ಮಾರ್ಗಗಳಲ್ಲಿ ನೀವು ಚೆಕ್ ನ ವಿವರವನ್ನು ಬ್ಯಾಂಕ್‌ ಗೆ ತಿಳಿಸಬೇಕಅಗುತ್ತದೆ. ಚೆಕ್‌ ನ ಮೊತ್ತ, ನಂಬರ್‌, ದಿನಾಂಕ, ಫಲಾನುಭವಿ/ಪಾವತಿದಾರರ ಹೆಸರು, ಚೆಕ್‌ನ ಎರಡೂ ಕಡೆಯ ಫೋಟೋ ಕೂಡ ಇಮೇಲ್‌ ಮಾಡಿದರೂ ನಡೆಯುತ್ತದೆ. ಆಗ ನಿಮ್ಮ ಚೆಕ್‌ ಕ್ರಾಸ್-ಚೆಕ್ ಮಾಡಲಾಗುತ್ತದೆ. ಈ ಮೂಲಕ ವಂಚನೆಗಳು ನಡೆಯುವುದು ಕಡಿಮೆಯಾಗುತ್ತದೆ.

ಬ್ಯಾಂಕ್‌ಗೆ ಯಾವ ವಿವರಗಳನ್ನು ಒದಗಿಸಬೇಕು?
1. ಖಾತೆ ಸಂಖ್ಯೆ
2. ಸಂಖ್ಯೆಯನ್ನು ಪರಿಶೀಲಿಸಿ
3. ಚೆಕ್ ದಿನಾಂಕ
4. ಮೊತ್ತ
5. ವಹಿವಾಟು ಕೋಡ್
6. ಫಲಾನುಭವಿ ಹೆಸರು
7. MICR ಕೋಡ್
8. ಚೆಕ್‌ ಎರಡೂ ಕಡೆಯ ಫೋಟೋ