25.5 C
Bengaluru
Friday, September 20, 2024

METRO: ಮಹಿಳೆಯರ ಸುರಕ್ಷತೆಗೆ ಪ್ಯಾನಿಕ್ ಬಟನ್,ಹೆಲ್ಪ್ ಲೈನ್ ವ್ಯವಸ್ಥೆ ಆರಂಭ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇನ್ನು ಹೆಚ್ಚುವರಿ ಸೌಲಭ್ಯ ಒದಗಿಸಲು ಮುಂದಾಗಿದ್ದು, ಪ್ಯಾನಿಕ್ ಬಟನ್ ಅಳವಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್(BMRCL) ತಿಳಿಸಿದೆ.ಮೆಟ್ರೋದಲ್ಲಿ ಯುವತಿಯರು ಹಾಗೂ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ, ಲೈಂಗಿಕ ಕಿರುಕುಳ ಉಂಟಾದರೆ ಮೆಟ್ರೋ ಬೋಗಿಯಲ್ಲಿ ಅಳವಡಿಸಲಾಗಿರುವ ತುರ್ತು ಎಚ್ಚರಿಕೆ ‘ಬಟನ್’ ಒತ್ತಿ ಸಹಾಯವನ್ನು ಪಡೆಯಬಹುದು. ಅಲ್ಲದೆ ತುರ್ತು ಸಹಾಯವಾಣಿ(Helpline) ಸಂಖ್ಯೆಗಳು ಬೋಗಿಗಳಲ್ಲಿ ಲಭ್ಯ ಇದ್ದು ಅದಕ್ಕೆ ಕರೆ ಮಾಡಬಹುದು. ಮಹಿಳೆಯರಿಗೆ ಸುರಕ್ಷಿತಾ ಪ್ರಯಾಣ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಬಿಎಂಆರ್‌ಸಿಎಲ್(BMRCL) ಪ್ರಕಟಣೆಯಲ್ಲಿ ತಿಳಿಸಿದೆ.ಇನ್ನು ಅದೇ ಬೋಗಿ ಒಳಗಿರುವ ಸಿಸಿ ಕ್ಯಾಮೆರಾಗಳು ನಿಮ್ಮನ್ನು. ಪ್ಯಾನಿಕ್ ಗಮನಿಸುತ್ತಲೇ ತೊಂದರೆಯ ದೃಶ್ಯಗಳನ್ನು ಸೆರೆ ಹಿಡಿಯುತ್ತವೆ. ಮುಂದಿನ ನಿಲ್ದಾಣದಲ್ಲಿ ಸಿಬ್ಬಂದಿ ಸಹಾಯಕ್ಕೆ ಬರುತ್ತಾರೆ ಎಂದು ತೊಂದರೆ, ನಿಗಮ ತಿಳಿಸಿದೆ. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯದ ಶ್ರೀ ಬೋಗಿ ಪ್ರಕರಣ ದಾಖಲಾಗುತ್ತಿದ್ದಂತೆ ಮೆಟ್ರೋದಲ್ಲಿ ಆಗಾಗ ಸಹಾಯ ವಾಣಿಯ ನಂಬರ್ ಪ್ರದರ್ಶನಗೊಳ್ಳುತ್ತಿದ್ದು, ಈ ಸಂಖ್ಯೆ ಸೇವ್ ಮಾಡಿಟ್ಟುಕೊಳ್ಳಬಹುದಾಗಿದೆ. ಇದೆಲ್ಲ ವ್ಯವಸ್ಥೆ ಅಳವಡಿಸಲಾಗಿದೆ,ಮೆಟ್ರೋ ರೈಲಿನ ಎಲ್ಲ ಬೋಗಿಗಳಲ್ಲೂ ಇರುವ ಡಿಸ್‌ಪ್ಲೆ ವ್ಯವಸ್ಥೆಯಲ್ಲಿ ಸಹಾಯವಾಣಿ ಸಂಖ್ಯೆಗಳು ಪ್ರದರ್ಶನವಾಗುತ್ತವೆ.ನಂಬರ್‌ಗಳಿಗೆ – ಕರೆ ಮಾಡಿದರೆ ರಕ್ಷಣಾ ಸಿಬ್ಬಂದಿ ಸಹಾಯಕ್ಕೆ ಆಗಮಿಸುತ್ತಾರೆ. ಪ್ರಯಾಣಿಕರು ದೂ. 080- 25191208, 22162258/2208 ಅಥವಾ ಟೂಲ್ ಫ್ರಿ ಸಹಾಯವಾಣಿ ಸಂಖ್ಯೆ 1800-425-12345 ಗೆ ಸಂಪರ್ಕಿಸಿ ಎಂದು ನಮ್ಮ ಮೆಟ್ರೋ ಪ್ರಕಟಣೆ ಹೇಳಿದೆ-

Related News

spot_img

Revenue Alerts

spot_img

News

spot_img