22.6 C
Bengaluru
Saturday, July 27, 2024

ವಾಣಿಜ್ಯ ಬಳಕೆಯ ಎಲ್‌ಪಿಜಿ ಬೆಲೆ ಹೆಚ್ಚಳ

ಬೆಂಗಳೂರು ಜುಲೈ 04;ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ ​ಪಿಜಿ ಸಿಲಿಂಡರ್ ಬೆಲೆಯಲ್ಲಿ 7 ರೂ. ಹೆಚ್ಚಳವಾಗಿದೆ. ಆದರೆ, ಗೃಹಬಳಕೆಯ ಎಲ್‌ ಪಿಜಿ ಸಿಲಿಂಡರ್‌ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಈಗ ದೆಹಲಿಯಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ ನ ಚಿಲ್ಲರೆ ಬೆಲೆ ಅಂದರೆ 19 ಕೆಜಿ ಎಲ್‌ ಪಿಜಿ ಸಿಲಿಂಡರ್ ಪ್ರತಿ ಸಿಲಿಂಡರ್‌ ಗೆ 1,773 ರೂ.ನಿಂದ 1,780 ರೂ.ಗೆ ಏರಿಕೆಯಾಗಿದೆ.ವಾಣಿಜ್ಯ ಸಿಲಿಂಡರ್‌ ಗಳ ಏರಿಕೆ ಜುಲೈ 1 ರಿಂದ ಜಾರಿಗೆ ಬರಲಿದೆ. ಈ ಹಿಂದೆ, ಜೂನ್‌ ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು, ಆದರೆ 14.2 ಕೆಜಿ ಎಲ್‌ ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಪ್ರಸ್ತುತ, ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1733.50 ರೂ.ಗಳಾಗಿದ್ದು, ಜೂನ್‌ ನಲ್ಲಿ ಕೆಜಿಗೆ 1725 ರೂ. ಇತ್ತು.ಮುಂಬೈನಲ್ಲಿ ಎಲ್ ​ಪಿಜಿ ಸಿಲಿಂಡರ್ ಬೆಲೆ 1102.50 ರೂ. ಕೋಲ್ಕತ್ತಾದಲ್ಲಿ ಎಲ್‌ ಪಿಜಿ ಸಿಲಿಂಡರ್‌ ನ ಬೆಲೆ 1129 ರೂ., ಚೆನ್ನೈನಲ್ಲಿ 1118.50 ರೂ.ಗೆ ಇರಿಸಲಾಗಿದೆ. ಆದರೆ ದೆಹಲಿಯಲ್ಲಿ ಎಲ್‌ ಪಿಜಿ ಬೆಲೆ 1103 ರೂ. ಇದೆ.

Related News

spot_img

Revenue Alerts

spot_img

News

spot_img