ಹೊಸದಿಲ್ಲಿ: ಗ್ರಾಹಕರು ಸಾಮಾನ್ಯವಾಗಿ ತಮ್ಮ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಗ್ಯಾಸ್ ಏಜೆನ್ಸಿ ಸಂಖ್ಯೆ ಅಥವಾ ಅವರ ವಿತರಕರಿಗೆ ಕರೆ ಮಾಡುವಂತಹ ವಿವಿಧ ವಿಧಾನಗಳಲ್ಲಿ ಬುಕ್ ಮಾಡುತ್ತಾರೆ ಅಥವಾ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡುತ್ತಾರೆ. ಈಗ ಅವರು ಕಂಪನಿಯ ವಾಟ್ಸಾಪ್ ಸಂಖ್ಯೆಗೆ ಕಳುಹಿಸುವ ಮೂಲಕ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಒಳ್ಳೆಯ ಸುದ್ದಿ ಏನೆಂದರೆ, ಸರ್ಕಾರಿ ತೈಲ ಕಂಪನಿಗಳು ಗೃಹಬಳಕೆಯ ಗ್ಯಾಸ್ ರೀಫಿಲ್ಲಿಂಗ್ ಗೆ ಗ್ರಾಹಕರಿಗೆ ವಾಟ್ಸ್ ಆಪ್ ಮತ್ತು ಎಸ್ ಎಂಎಸ್ ಸೌಲಭ್ಯವನ್ನು ನೀಡಿವೆ. HP ಗ್ರಾಹಕರು 9222201122 ನಂಬರ್ ಸೇವ್ ಮಾಡಿ. ನೋಂದಾಯಿತ ಮೊಬೈಲ್ ನಂಬರ್‌ನಿಂದ ಸಿಲಿಂಡರ್ ಸಂಖ್ಯೆಯನ್ನು ಕಳುಹಿಸಿ ಬುಕ್ ಮಾಡಬಹುದಾಗಿದೆ.
ವಾಟ್ಸಾಪ್ ಮೂಲಕ ಭಾರತ್ ಗ್ಯಾಸ್ ಬುಕ್ಕಿಂಗ್ ವಿಧಾನ
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 1800224344 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಂದೇಶ ಕಳುಹಿಸುವ ಮೂಲಕ ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.ಅಥವಾ https://my.ebharatgas.com/bharatgas/Home/Index ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
ವಾಟ್ಸಾಪ್ ಮೂಲಕ HP ಗ್ಯಾಸ್ ಬುಕ್ಕಿಂಗ್ ವಿಧಾನ
*ನಿಮ್ಮ ವಾಟ್ಸಾಪ್ ಖಾತೆಯಿಂದ ನೀವು 9222201122 ಸಂಖ್ಯೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ HP ಸಿಲಿಂಡರ್ ಸಂಖ್ಯೆಯನ್ನು ಬರೆದು ಕಳುಹಿಸಬೇಕು.ಸಂದೇಶ ಪೂರ್ಣಗೊಂಡ ನಂತರ ಸಿಲಿಂಡರ್ ಬುಕ್ಕಿಂಗ್ ವಿತರಣಾ ದಿನಾಂಕದೊಂದಿಗೆ ಇತರ ಮಾಹಿತಿಯನ್ನು ಕೂಡ ಪಡೆಯುತ್ತೀರಿ.ಈ ಸಂಖ್ಯೆಯನ್ನು WhatsApp ಅಲ್ಲಿ ಸರ್ಚ್ ಮಾಡಿ, HELP ಎಂದು ಟೈಪ್ ಮಾಡಿ ಸೆಂಡ್ ಮಾಡಿ
ವಾಟ್ಸಾಪ್ ಮೂಲಕ ಇಂಡೇನ್ ಗ್ಯಾಸ್ ಬುಕ್ಕಿಂಗ್ ವಿಧಾನ
ಇಂಡೇನ್ ಗ್ಯಾಸ್ ಗ್ರಾಹಕರು 7588888824 ಸಂಖ್ಯೆಗೆ ನೋಂದಾಯಿತ ಮೊಬೈಲ್ ನಂಬರ್‌ನಿಂದ BOOK ಅಥವಾ REFILL ಅನ್ನುವ ಪದವನ್ನು ಕಳುಹಿಸಿ, ಬುಕ್ ಮಾಡಬಹುದಾಗಿದ್ದು, ಭಾರತ್ ಗ್ಯಾಸ್ ಗ್ರಾಹಕರು ವಾಟ್ಸಾಪ್ ಸಂಖ್ಯೆ 1800224344 ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು.