28.9 C
Bengaluru
Thursday, April 24, 2025

ನಗರಸಭೆಯ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ

ಮೈಸೂರು ಜೂನ್ 22 : ಸಾಮಾನ್ಯವಾಗಿ ಲಂಚ ಪಡೆಯದೆ ಸರ್ಕಾರಿ ಕಛೇರಿಗಳಲ್ಲಿ ಕೆಲಸ ನಡೆಯದು ಎಂಬ ವದಂತಿ ಇದೆ! ಅದಕ್ಕೆ ಪುಷ್ಟಿ ಕೊಡುವಂತೆ ಸಾಕಷ್ಟು ಲೋಕಾಯುಕ್ತ ದಾಳಿಗಳನ್ನುನಾವು ಪ್ರತಿದಿನ ನೋಡುತ್ತಿರುತ್ತೇವೆ ಅದರಂತೆಯೇ,ಮೈಸೂರಿನ ಹೂಟಗಳ್ಳಿ ನಗರಸಭೆಯ ಕಂದಾಯ ನಿರೀಕ್ಷಕ ಮಂಜುನಾಥ್‌ ರವರು, ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಕುಮಾರ್ ಎಂಬುವರು ನಗರಸಭೆ ವ್ಯಾಪ್ತಿಯ ಆಸ್ತಿಯೊಂದಕ್ಕೆ ಇ–ಸ್ವತ್ತು ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದರು. ‌ಅದನ್ನು ನೀಡಲು ಆರೋಪಿ ಮಂಜುನಾಥ್ ₹ 3 ಲಕ್ಷ ಕೇಳಿದ್ದರು.

ಇದರಿಂದ ಬೇಸತ್ತ ಚಾಮರಾಜನಗರ ಜಿಲ್ಲೆಯ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅಧಿಕಾರಿಗಳ ಸೂಚನೆಯಂತೆ ನಗರಸಭೆ ಕಾರ್ಯಾಲಯದಲ್ಲಿ ಲಂಚದ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಎಸ್‌.ಪಿ. ಸುರೇಶ್ ಬಾಬು ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ₹1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ನಗದು ಸಮೇತ ಆರೋಪಿಯನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ.

Related News

spot_img

Revenue Alerts

spot_img

News

spot_img