21 C
Bengaluru
Tuesday, July 16, 2024

ಬಿಬಿಎಂಪಿಯಲ್ಲಿ ನಿಲ್ಲದ ಲಂಚವಾತಾರ ಕಂದಾಯ ಅಧಿಕಾರಿಯ ಮೇಲೆ ಲೋಕಯುಕ್ತದಾಳಿ:

ಬೆಂಗಳೂರು: ದಿ: 31.01.2022
ಬಿಬಿಎಂಪಿಯ ಸಂಜಯನಗರ ವಾರ್ಡ್ ನ ಕಂದಾಯ ನಿರೀಕ್ಷಕ ವಸಂತ್ ಕುಮಾರ್ ರವರನ್ನು ಸ್ಥಿರಾಸ್ತಿಯೊಂದರ ಇ-ಖಾತೆ ನೀಡುವುದಕ್ಕೆ ದಾಖಲೆಗಳನ್ನು ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲು ಆಸ್ತಿಯ ಮಾಲೀಕರಿಂದ 5000/- ರೂ ಲಂಚದ ಹಣಕ್ಕೆ ಬೇಡಿಕೆಯಿಟ್ಟು ಪಡೆದುಕೊಳ್ಳುತ್ತಿದ್ದಾಗ ಲೋಕಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಿಬಿಎಂಪಿಯ ಸಂಜಯನಗರ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಭೂಪಸಂದ್ರ ಏರಿಯಾದ ನಿವಾಸಿ ಸುಬ್ರಮಣಿ ಎಚ್.ವಿ ಎಂಬುವವರು ತಮ್ಮ ಸ್ಥಿರಾಸ್ತಿ ನಿವೇಶನಕ್ಕೆ ಇ-ಖಾತಾ ನೀಡುವಂತೆ ಕೋರಿ ಸಂಜಯ್ ನಗರ ವಾರ್ಡ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆಸ್ತಿಯ ದಾಖಲೆಗಳನ್ನು ಇ-ಖಾತಾ ತಂತ್ರಾಂಶದಲ್ಲಿ ಆಪ್ ಲೋಡ್ ಮಾಡಲು 5000/- ರೂ ಲಂಚದ ಹಣ ನೀಡುವಂತೆ ಕಂದಾಯ ನಿರೀಕ್ಷಕ ವಸಂತ್ ಕುಮಾರ್ ರವರು ಬೇಡಿಕೆ ಇಟ್ಟಿದ್ದರು ಈ ಸಂಬಂಧ ಅರ್ಜಿದಾರರು ದೂರು ನೀಡಿದ್ದು ದೂರನ್ನು ದಾಖಲಿಸಿಕೊಂಡ ಲೋಕಯುಕ್ತ ಅಧಿಕಾರಿಗಳು ಕಂದಾಯ ನಿರೀಕ್ಷಕ ವಸಂತ್ ಕುಮಾರ್ ರವರನ್ನು ಅರ್ಜಿದಾರರಿಂದ ಹಣ ಪಡೆದುಕೊಳ್ಳುತ್ತಿದ್ದಾಗ ದಾಳಿ ನಡೆಸಿ ಲಂಚದ ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

Related News

spot_img

Revenue Alerts

spot_img

News

spot_img