20.8 C
Bengaluru
Saturday, July 27, 2024

ಸೆಪ್ಟೆಂಬರ್‌ನಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ

#LKG #UKG #start # government #schools #September

ಬೆಂಗಳೂರು;ಸರ್ಕಾರವು ಪೋಷಕರಿಗೆ ಶುಭಸುದ್ದಿ ನೀಡಿದ್ದು,ಈ ವರ್ಷದ ಸೆಪ್ಟೆಂಬರ್‌ನಿಂದ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿಗಳು ಆರಂಭವಾಗಲಿವೆ.ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.4 ಹಾಗೂ 5 ವರ್ಷದ ಮಕ್ಕಳಿಗಾಗಿ ಸರ್ಕಾರಿ ಶಾಲೆಗಳಲ್ಲಿ ಈ ವರ್ಷದ ಸೆಪ್ಟೆಂಬರ್‌(September) ನಿಂದ ತರಗತಿ ಆರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.ಎಲ್‌ಕೆಜಿ ಹಾಗೂ ಯುಕೆಜಿಗಳನ್ನು(LKG,UKG) ಆರಂಭಿಸುವಂತೆ ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ಬೇಡಿಕೆ ಇತ್ತು.ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿಗಳು ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿಲ್ಲ ಎಂಬ ವರದಿಗಳು ಹೊರಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ರಾಜ್ಯದ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿದೆ.ಪ್ರಸ್ತುತ, 276 ಕರ್ನಾಟಕ ಸಾರ್ವಜನಿಕ ಶಾಲೆಗಳು ಸೇರಿದಂತೆ ಸುಮಾರು 900 ಶಾಲೆಗಳು ಎಲ್‌ಕೆಜಿ ಹಾಗೂ ಯುಕೆಜಿಗಳನ್ನು ಹೊಂದಿವೆ.ಆರಂಭಿಕ ಹಂತದಲ್ಲಿ ರಾಜ್ಯ ಸರ್ಕಾರ ಬೆಂಗಳೂರು ದಕ್ಷಿಣದಲ್ಲಿ 10 ಮತ್ತು ಬೆಂಗಳೂರು ಉತ್ತರದಲ್ಲಿ 4 ಸೇರಿದಂತೆ 262 ಶಾಲೆಗಳಲ್ಲಿ ಎಲ್‌ಕೆಜಿ , ಯುಕೆಜಿ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಎಸ್‌ಡಿಎಂಸಿಗಳು 10 ತಿಂಗಳ ಅವಧಿಗೆ ಶಿಕ್ಷಕರನ್ನು ಮತ್ತು ಆಯಾಗಳನ್ನು ತಿಂಗಳಿಗೆ ಕ್ರಮವಾಗಿ ರೂ 7,000 ಮತ್ತು ರೂ 5,000 ಪಾವತಿಸಿ ನೇಮಕ ಮಾಡುತ್ತವೆ.ಪ್ರತಿ ತರಗತಿಯು ಕನಿಷ್ಠ 20 ಮತ್ತು ಗರಿಷ್ಠ 30 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರಬೇಕು. ಪೂರ್ವ ಪ್ರಾಥಮಿಕ ಶಾಲೆಗಳು ಅಂದ್ರೆ ಎಲ್‌ಕೆಜಿ ನಡೆಸಲು ಒಂದು ಸುಸಜ್ಜಿತ ಕೊಠಡಿ ಮೀಸಲಿರಿಸಲಾಗುತ್ತದೆ. ಅಗತ್ಯ ಸಾಧನ ಸಾಮಾಗ್ರಿಗಳನ್ನು ನಿಯಮಾನುಸಾರ ಖರೀದಿಸಲು ಸೂಚನೆ ನೀಡಲಾಗಿದೆ. ಚಿತ್ರಕಲಾ ಶಿಕ್ಷಕರನ್ನ ಬಳಸಿಕೊಂಡು ಆಕರ್ಷಕವಾಗಿ ಚಿತ್ರ ಬಿಡಿಸಿ ಪಾಠ ಮಾಡಲಾಗುತ್ತದೆ. SDMCಗೆ ಅತಿಥಿ ಶಿಕ್ಷಕಿ ಅಥವಾ ಶಿಕ್ಷಕರೊಬ್ಬರನ್ನು ನೇಮಿಸಿಕೊಳ್ಳುವ ಹೊಣೆ ನೀಡಲಾಗುತ್ತೆ.ಬೆಳಗ್ಗೆ 10ರಿಂದ ಮಧ್ಯಾಹ್ನ 3:30ರವರೆಗೆ ತರಗತಿ ನಿಗದಿ ಮಾಡಲಾಗಿದೆ. ಆಗಸ್ಟ್ ಅಂತ್ಯದೊಳಗೆ ಸರ್ಕಾರದಿಂದಲೇ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುತ್ತೆ. ಜೊತೆಗೆ ಅಂಗನವಾಡಿಗಳಲ್ಲಿ ನೀಡುವ ಹಾಲು, ಊಟ, ಉಪಾಹಾರ ಕೂಡ ಇಲ್ಲಿ ನೀಡಲಾಗುತ್ತೆ

Related News

spot_img

Revenue Alerts

spot_img

News

spot_img