Feb-01;ಕೇಂದ್ರ ಹಣಕಾಸು ಸಚಿವಾಲಯವು 3ನೇ ಕಾಗದ ರಹೀತ ಬಜೆಟ್ ಎಂದು ಬಜೆಟ್ 2023-24 ಅನ್ನು ಘೋಷಿಸಿದ್ದು, ಇದ್ದನ್ನು “ಯೂನಿಯನ್ ಬಜೆಟ್ ಮೊಬೈಲ್ ಅಪ್ಲೀಕೇಷನ್” ಅನ್ನು ಬಳಸಿ ಡೌನ್ ಲೋಡ್ ಮಾಡಬಹುದು.
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾ ರಾಮನ್ ರವರು ಇಂದು ಸಂಸತ್ತಿನಲ್ಲಿ 2023-24 ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದು ಸಂಪೂರ್ಣ ಬಜೆಟ್ ಮಂಡನೆಯಾದ ಮೇಲೆ ಅದನ್ನು ಓದಲು ಮತ್ತು ಡೌನ್ ಲೋಡ್ ಮಾಡಲು ಅಧಿಕೃತ ಪ್ರತಿಗಳನ್ನು “ಯೂನಿಯನ್ ಬಜೆಟ್ ಮೊಬೈಲ್ ಅಪ್ಲೀಕೇಷನ್” ನಲ್ಲಿ ಕಾಣಬಹುದೆಂದು ಕೇಂದ್ರ ಹಣಕಾಸು ಸಚಿವಾಲಯವು ಟ್ವೀಟರ್ ಮೂಲಕ ತಿಳಿಸಿದೆ. ಈ ಹಿಂದೆಯು ಸಹ 2021 ರ ಕೇಂದ್ರ ಬಜೆಟ್ ಅನ್ನು ಜನರು ಆಪ್ಲೀಕೇಶನ್ ನಲ್ಲಿ ಓದಲು ಪೇಪರ್ ಲೇಸ್ ಫಾರ್ಮೇಟ್ ನಲ್ಲಿ ಮೊದಲ ಬಾರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಆರ್ಥಿಕ ವ್ಯವಹಾರಗಳ ಇಲಾಖೆಯ ನಿರ್ದೇಶನದ ಅಡಿಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್.ಐ.ಸಿ) 2021 ರಲ್ಲಿ ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು.
ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡುವ ವಿಧಾನ:
1. ಗೂಗಲ್ ಪ್ಲೇ ಸ್ಟೋರ್/ ಆ್ಯಪಲ್ ಸ್ಟೋರ್ ಅನ್ನು ಒಪನ್ ಮಾಡಬೇಕು.
2. ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಗಾಗಿ ಸರ್ಚ್ ಕೊಡಬೇಕು.
3. ಅದರಲ್ಲಿ ಕಾಣುವ ಮೊದಲ ಅಪ್ಲಿಕೇಶನ್ ಮೇಲೆ ಕ್ಲೀಕ್ ಮಾಡಿ ಅದನ್ನು ಡೌನ್ ಲೋಡ್ ಮಾಡಬೇಕು.
ಡೌನ್ ಮಾಡಿದ ನಂತರ ಅದರಲ್ಲಿ ಲಾಗ್ ಇನ್ ಆಗಿ ಕೇಂದ್ರ ಬಜೆಟ್ 2023-24 ಅನ್ನು ನೀವು ಕಾಣಬಹುದು ಮತ್ತು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.