ಬೆಂಗಳೂರು, ಫೆ. 11 : ನಿಮ್ಮ ಮನೆಯ ಅಡುಗೆ ಕೋಣೆಯನ್ನು ನಿರ್ಮಾಣ ಮಾಡಬೇಕಾದರೆ, ಯಾವೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ತಿಳಿಯೋಣ ಬನ್ನಿ.. ನೀವು ಅಡುಗೆ ಮನೆಗೆ ಟೈಲ್ಸ್ ಅನ್ನು ಹಾಕುವಾಗ, ನೆಲಕ್ಕೆ ಮಾತ್ರ ಹಾಕದೇ ಅಥವಾ ಇಂಟರ್ ಲೆವೆಲ್ ನಲ್ಲಿ ಮಾತ್ರ ಹಾಕದೇ ಇಡೀ ಗೋಡೆಗಳಿಗೂ ಅಳವಡಿಸಬೇಕು. ಇದರಿಂದ ನಿಮಗೆ ಒಳ್ಳೆಯದಾಗುತ್ತೆ. ಮುಂದಿನ ದಿನಗಳಲ್ಲಿ ಅಡುಗೆ ಮಾಡುವಾಗ ಇಂಟರ್ ಲೆವೆಲ್ ಅಷ್ಟೇ ಅಲ್ಲದೇ ಕೆಲವೊಮ್ಮೆ ರೂಫ್ ವರೆಗೂ ಗಲೀಜ್ ಆಗುವ ಸಾಧ್ಯತೆ ಇರುತ್ತದೆ. ಆಗ ನೀವು ಸುಲಭವಾಗಿ ಕ್ಲೀನ್ ಮಾಡಿಕೊಳ್ಳಬಹುದು. ಅಡುಗೆ ಮಾಡುವಾಗ ಗಲೀಜ್ ಆಗುವುದನ್ನು ನಂತರ ಕ್ಲೀನ್ ಮಾಡುವುದು ತುಂಬಾ ಕಷ್ಟ.
ನೀವು ಅಡುಗೆ ಮನೆಯಲ್ಲಿ ಸಜ್ಜೆಗಳನ್ನು ಮಾಡುವಾಗ ಯಾವುದೇ ಕಾರಣಕ್ಕೂ ಸ್ಟೌವ್ ಇರುವ ಸ್ಲ್ಯಾಬ್ ಅಕ್ಕ ಪಕ್ಕದಲ್ಲೆ ಸಜ್ಜೆಯನ್ನು ಕಟ್ಟಬೇಡಿ. ಕಿಚನ್ ಕೌಂಟರ್ ಮೇಲೆ ಸಜ್ಜೆಯನ್ನು ಹಾಕಿದರೆ ಕ್ಲೀನ್ ಮಾಡುವುದಕ್ಕೆ ಸಮಸ್ಯೆ ಆಗುತ್ತದೆ. ನಿಮ್ಮ ಅಡುಗೆ ಮನೆಯಲ್ಲಿ ಕಿಟಕಿಗಳಿದ್ದರೆ, ಅದು ಆದಷ್ಟೂ ಒಂದು ಒಂದೂವರೆ ಫೀಟ್ ಎತ್ತರದಲ್ಲಿರಲಿ. ಯಾಕೆಂದರೆ ಅಡುಗೆ ಮಾಡುವಾಗ ಗ್ಯಾಸ್ ಗಾಳಿಗೆ ಆಫ್ ಆಗಬಹುದು. ಇನ್ನು ನೀವು ಚಿಮಣಿಯನ್ನು ಅಳವಡಿಸುವುದಿಲ್ಲ ಎಂದಾದರೇ, ಅಡುಗೆ ಮನೆಗೆ ಕಿಟಕಿಯನ್ನು ಇಡುವ ಮುಂಚೆಯೇ ಅವರಿಗೆ ಎಕ್ಸಾಸ್ಟ್ ಫ್ಯಾನ್ ಬೇಕು ಎಂದು ಹೇಳಬೇಕು. ಆಗ ಮತ್ತೆ ಗೋಡೆಯನ್ನು ಕೊರೆಯುವ ಅಗತ್ಯವಿರುವುದಿಲ್ಲ.
ಇನ್ನು ಕಿಚನ್ ನಲ್ಲಿ ಟೈಲ್ಸ್ ಹಾಕುವಾಗ ಫ್ಲೋರಿಂಗ್ ಟೈಲ್ಸ್ ಮ್ಯಾಟ್ ಫಿನಿಷಿಂಗ್ ನಲ್ಲಿ ಇರಬೇಖು. ಯಾಕೆಂದರೆ, ಮ್ಯಾಟ್ ಫಿನಿಷಿಂಗ್ ಟೈಲ್ಸ್ ಅನ್ನು ಅಳವಡಿಸುವುದರಿಂದ ನಿಮಗೆ ಅಡುಗೆ ಮನೆಯಲ್ಲಿ ಎಣ್ಣೆ, ನೀರು ಏನೇ ಬಿದ್ದರೂ ಕಾಣುತ್ತದೆ. ಆಗ ಕ್ಲೀನ್ ಮಾಡಿಕೊಳ್ಳುವುದು ಸುಲಭ. ಇನ್ನು ಸ್ಮೂತ್ ಫಿನಿಷಿಂಗ್ ಇದ್ದರೆ ಕಾಣುವುದಿಲ್ಲ. ಆಗ ಜಾರಿ ಬೀಳುವ ಸಂಭವ ಹೆಚ್ಚಿರುತ್ತದೆ. ಅಷ್ಟೇ ಅಲ್ಲದೇ, ಕಲೆಗಳು ಕೂಡ ಮ್ಯಾಟ್ ಫಿನಿಷಿಂಗ್ ನಲ್ಲಿ ಕಾಣುವುದಿಲ್ಲ. ಇನ್ನು ಫೇಡಿಂಗ್ ಕೂಡ ಆಗುವುದಿಲ್ಲ.
ಅಡುಗೆ ಮನೆಯನ್ನು ಎಲ್ ಶೇಪ್, ಸ್ಟ್ರೈಟ್ ಹಾಗೂ ಯೂ ಶೇಪ್ ನಲ್ಲಿ ಕಟ್ಟಬಹುದು. ಇದರಲ್ಲಿ ಬೆಟ್ಟರ್ ಆಗಿರುವಂತಹದ್ದು ಎಂದರೆ, ಎಲ್ ಶೇಪ್ ಅಡುಗೆ ಮನೆಗಳು ಯಾವಾಗಲೂ ಆಕರ್ಷಣೀಯವಾಗಿ ಕಾಣುತ್ತದೆ. ಕಿಚನ್ ಕೌಂಟರ್ ಗಳು ಸಾಮಾನ್ಯವಾಗಿ 24 ಇಂಚು ಇರುತ್ತವೆ. ಇದು ಸಾಮಾನ್ಯ ಎತ್ತರವಾಗಿದೆ. ಇನ್ನು ನಿಮ್ಮ ಮನೆಯಲ್ಲಿ ಲೇಡೀಸ್ ಯಾವ ಎತ್ತರ ಇದ್ದೀರೋ ಅದಕ್ಕೆ ತಕ್ಕಂತೆ ಮಾಡಿಕೊಳ್ಳಿ. ಇನ್ನು ನೀವು ಅಡುಗೆ ಮನೆಯನ್ನು ಕಟ್ಟುವ ಮೊದಲೇ ಮನೆಯಲ್ಲಿ ಮಿಕ್ಸಿ, ಸ್ಟೌವ್, ಓವೆನ್, ವಾಟರ್ ಫಿಲ್ಟರ್ ಯಾವ ದಿಕ್ಕಿನಲ್ಲಿ ಎಲ್ಲಿಡಬೇಕು ಎಂದು ನಿರ್ಧರಿಸಿಕೊಳ್ಳಿ. ಯಾಕೆ ಎಂದರೆ, ನಿಮ್ಮ ಪ್ಲಾನ್ ಗೆ ತಕ್ಕ ಹಾಗೆ ಎಲಕ್ಟ್ರಿಕ್ ಹಾಗೂ ಪ್ಲಂಬಿಂಗ್ ಕನೆಕ್ಷನ್ ಅನ್ನು ಮಾಡಿಕೊಳ್ಳಬಹುದು. ಇಲ್ಲದಿದ್ದರೆ, ನಿಮಗೆ ಇಷ್ಟವಿಲ್ಲದ ಜಾಗದಲ್ಲಿ ಇವನ್ನೆಲ್ಲಾ ಇಡಬೇಕಾಗುತ್ತದೆ.
ನೀವೇನಾದರೂ ಇಂಟಿರಿಯರ್ ಡೆಕೊರೇಟರ್ ಅನ್ನು ಆಯ್ಕೆ ಮಾಡಿಕೊಂಡರೆ, ನೀವು ಕಿಚನ್ ಅನ್ನು ವರ್ಟಿಕಲ್ ಹಾಗಿ ಮಾತ್ರವೇ ಗೋಡೆಗಳನ್ನು ಕಟ್ಟಿ. ಯಾಕೆಂದರೆ, ಇಂಟಿರಿಯರ್ ಡಿಸೈನಿಂಗ್ ಮಾಡುವವರೆ ಇದೆಲ್ಲವನ್ನೂ ಮಾಡಿಕೊಳ್ಳುತ್ತಾರೆ. ಇಲ್ಲದಿದ್ದರೆ, ಕಟ್ಟಿರುವುದನ್ನ ಮತ್ತೆ ಒಡೆಯಬೇಕಾಗುತ್ತದೆ. ಹಾಗಾಗಿ ಇಂಟಿರಿಯರ್ ಡಿಸೈನರ್ ಗಳಿಗೆ ಸಂಪೂರ್ಣವಾಗಿ ಬಿಟ್ಟು ಬಿಡಿ.