22.6 C
Bengaluru
Wednesday, March 26, 2025

ಬಸ್ ಬುಕ್ಕಿಂಗ್, ಪ್ರಯಾಣ ದರಗಳಲ್ಲಿ ಗಣನೀಯ ಏರಿಕೆ ತಟ್ಟಿಸಿದ ಕರ್ನಾಟಕ ವಿಧಾನಸಭಾ ಚುನಾವಣೆ?

ಬೆಂಗಳೂರು, ಏಪ್ರಿಲ್‌ 27: ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಳ ಸಹಿತ ರಜೆ ಇದ್ದರೂ ಜನರು ಜನರು ಮತದಾನ ಮಾಡಲು ತಮ್ಮ ತಮ್ಮ ಊರುಗಳಿಗೆ ಹೋಗುವುದು ಅನುಮಾನವಿದೆ. ಕಾರಣ ಮತದಾನದ ಹಿಂದಿನ ದಿನಗಳಲ್ಲಿ ಬಸ್‌ ಪ್ರಯಾಣ ದರ ಗಗನಮುಖಿಯಾಗುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ (ಕೆಎಸ್ ‌ಆರ್‌ಟಿಸಿ)ದ ಪ್ರಕಾರ ಚುನಾವಣೆಗೆ ಒಂದು ದಿನ ಮೊದಲು ಮೇ 9 ಕ್ಕೆ ಬುಕಿಂಗ್ ‌ನಲ್ಲಿ 40% ರಷ್ಟು ಏರಿಕೆಯಾಗಿದೆ ಎಂದು ಡಿಎಚ್ ‌ ವರದಿ ಮಾಡಿದೆ.
ಕೆಎಸ್‌ಆರ್‌ಟಿಸಿಮೇ 9ರ ರಾತ್ರಿಗೆ 1,317 ಮುಂಗಡ ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಆದರೆ ಬೇರೆ ಯಾವುದೇ ವಾರದ ದಿನಕ್ಕೆ ಈ ಸಂಖ್ಯೆ 800 ಮತ್ತು 900 ರ ನಡುವೆ ಮಾತ್ರ ಇರುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ನಂತರ ಮುಂಗಡ ಬುಕ್ಕಿಂಗ್ ಕಡಿಮೆಯಾಗಿತ್ತು. ಆದರೆ ಮತದಾನದ ದಿನಾಂಕದ ಸಮೀಪವಾದಂತೆ ಹೆಚ್ಚಿನ ಜನರು ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ ಎಂದು ಹಿರಿಯ
ಕೆಎಸ್ ‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾನದ ದಿನಕ್ಕಿಂತ ಎರಡು ದಿನ ಮುಂಚಿತವಾಗಿ ಮತ್ತು ನಂತರದ ದಿನಗಳಲ್ಲಿ ಕೆಎಸ್ ‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಬುಕ್ಕಿಂಗ್ ‌ಗಳಲ್ಲಿ ಗಮನಾರ್ಹ ಏರಿಕೆ ಕಾಣುತ್ತಿದೆ.

ಖಾಸಗಿ ಬಸ್ ನಿರ್ವಾಹಕರು ಸಹ ಬುಕ್ಕಿಂಗ್ ‌ನಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರಗಳು ತೀವ್ರವಾಗಿ ಏರಿಕೆ ಕಂಡಿವೆ ಎಂದು ತಿಳಿಸಿದ್ದಾರೆ. ಅದರಲ್ಲೂ ಕೆಲವು ಖಾಸಗಿ ನಿರ್ವಾಹಕರು ದರವನ್ನು ಶೇಕಡ 50ರಷ್ಟುವರೆಗೂ ಹೆಚ್ಚಿಸಿದ್ದಾರೆ. ಬುಕಿಂಗ್ ‌ನಲ್ಲಿ ತೀವ್ರವಾಗಿ ಏರಿಕೆ ಕಂಡುಬಂದಿದೆ.

ಅನೇಕ ಬಸ್‌ಗಳು ಶೀಘ್ರದಲ್ಲೇ ಭರ್ತಿಯಾಗುತ್ತಿವೆ. ಉದಾಹರಣೆಗೆ ಬೆಂಗಳೂರಿನಿಂದ ಮಂಗಳೂರಿಗೆ ನಾನ್-ಎಸಿ ಸ್ಲೀಪರ್ ಕ್ಲಾಸ್‌ಗೆ ವಾರದ ದಿನಗಳಲ್ಲಿ 750 ರೂಪಾಯಿಷ್ಟು ಇದ್ದದ್ದು, ಈಗ ಜನರ ಪ್ರಯಾಣ ಬೇಡಿಕೆಯಿಂದಾಗಿ ಸುಮಾರು 1,150 ರೂ.ಗೆ ಹೆಚ್ಚಾಗಿದೆ. ಕುಂದಾಪುರ, ಮಂಗಳೂರು, ಶಿವಮೊಗ್ಗ ಮತ್ತು ಶೃಂಗೇರಿಗೆ ಬುಕ್ಕಿಂಗ್‌ಗಳು ಹೆಚ್ಚಾಗಿವೆ ಎಂದು ಮತ್ತೊಬ್ಬ ಟ್ರಾವೆಲ್ ಆಪರೇಟರ್ ಹೇಳಿದ್ದಾರೆ. ಮೇ 8 ರಂದು ಪ್ರಯಾಣದ ಬೇಡಿಕೆಯೂ ಹೆಚ್ಚುತ್ತಿದೆ ಎಂದು ಖಾಸಗಿ ಬಸ್ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮ ಕ್ಷೇತ್ರಗಳಿಗೆ ಕರೆದೊಯ್ಯಲು ಕೆಎಸ್ ‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಬುಕಿಂಗ್ ವ್ಯವಸ್ಥೆಗಳನ್ನು ಮಾಡುತ್ತಿವೆ. ಮತದಾರರು ಮತಗಟ್ಟೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಬುಕ್ ಮಾಡುತ್ತೇವೆ. ಇದು ಸಾಮಾನ್ಯವಾಗಿ ಜಿಲ್ಲೆಗಳಲ್ಲಿ ಮತ್ತು ಕೆಲವೊಮ್ಮೆ ನಗರ ಪ್ರದೇಶಗಳಲ್ಲಿ ಮತದಾರರು ಮತಗಟ್ಟೆಗಳಿಂದ ಸ್ವಲ್ಪ ದೂರದಲ್ಲಿ ವಾಸಿಸುವ ಪ್ರದೇಶಗಳಲ್ಲಿ ನಡೆಯುತ್ತದೆ ಎಂದು ಬುಕಿಂಗ್ ಮಾಡುವ ಮೂಲವೊಂದು ತಿಳಿಸಿದೆ.

ಕೆಲವು ಟೆಕ್ಕಿಗಳು ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿಗಳು ತಮ್ಮ ಪ್ರಯಾಣ ದೂರ ಹೆಚ್ಚು ಇದ್ದು ಹೆಚ್ಚುವರಿಯಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಒದಗಿಸುವಂತೆ ತಮ್ಮ ಕಂಪೆನಿಗೆ ಬೇಡಿಕೆ ಇಟ್ಟಿದ್ದಾರೆ. ಮತದಾನದ ನಂತರ ನಾವು ಕಚೇರಿಯಲ್ಲಿ ಇರಲು ನೇರವಾಗಿ ಎರಡು ರಾತ್ರಿ ಪ್ರಯಾಣಿಸಬೇಕಾಗಿದೆ. ಆದ್ದರಿಂದ ನಮ್ಮಲ್ಲಿ ಅನೇಕರು ಒಂದು ಅಥವಾ ಎರಡು ದಿನ ಮನೆಯಿಂದ ಕೆಲಸ ಮಾಡಲು ವಿನಂತಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಮೂಲದ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಹೇಳಿದ್ದಾರೆ.

Related News

spot_img

Revenue Alerts

spot_img

News

spot_img