ಬೆಂಗಳೂರು: ಬಸವನಗುಡಿ ಕಡಲೆ ಕಾಯಿ ಪರಿಷೆ ಅಂದ್ರೆ ಸಿಲಿಕಾನ್ ಸಿಟಿ ಜನ ನಾ ಮುಂದು ತಾಮುಂದು ಅಂತ ಮುಗಿ ಬೀಳ್ತಾರೆ.. ಕೆಲವರು ಖರ್ಚು ಮಾಡೋಕೆ ಅಂತ ಬಂದ್ರೆ, ಇನ್ನ ಕೆಲವರು ಜಾತ್ರೆಯಲ್ಲಿ ಹೊಟ್ಟೆಪಾಡಿಗಾಗಿ ಬರ್ತಾರೆ. ಎಲ್ಲರ ಮನೆಯಲ್ಲು ಒಂದೇ ಪರಿಸ್ಥಿತಿ ಇರೋಲ್ಲ. ಕೆಲವರು ತಮಗಿಷ್ಟವಾದ ಕಡಲೇ ಕಾಯಿ ಕೊಳ್ಳೋಕೆ ಅಂತಾ ಬಂದ್ರೆ, ಇನ್ನ ಹಲವರು ಆ ಪರಿಷೆಯಲ್ಲಿ ನಿತ್ಯ ಜೀವನ ನೂಕೋಕೆ ಏನೆಲ್ಲಾ ಮಾಡ್ತಿದ್ರು ಅಂತ ನಾವು ತೋರ್ಸ್ತೀವಿ ನೋಡಿ..!
ಬಸವನ ಗುಡಿ ಕಡ್ಲೇ ಕಾಯಿ ಪರಿಷೆ..! ನೋಡುಗರ ಕಣ್ಣಿಗೆ ಫುಲ್ ನಶೆ..!
ಖರ್ಚು ಮಾಡೋಕೆ ಬಹಳಷ್ಟು, ಹೊಟ್ಟೆ ತುಂಬಿಸಕೊಳ್ಳೋರು ಸಾಕಷ್ಟು..!
ಹೌದು ವೀಕ್ಷಕರೇ ಬಹಳ ಇತಿಹಾಸವನ್ನು ಹೊಂದಿರುವ ಕಡ್ಲೇ ಕಾಯಿ ಪರಿಷೆಗೆ ಸಿಲಿಕಾನ್ ಸಿಟಯಲ್ಲಿ ಫುಲ್ ಫೇಮಸ್..!ರಾಜ್ಯದೆಲ್ಲೆಡೆಯಿಂದ ಈ ಪರಿಷೆ ನೋಡೋಕೆ ಅಂತಾನೆ ಬಹಳಷ್ಟು ಜನ ಬರ್ತಾರೆ. ಇನ್ನು ಇಲ್ಲಿ ರಾಜ್ಯದ ಮತ್ತು ಹೊರ ರಾಜ್ಯದಿಂದಲು ಸಹ ಕಡಲೇ ಕಾಯಿ ಮಾರೊದಿಕ್ಕೆ ಅಂತಾನೇ ಬಂದಿರ್ತಾರೆ. ಒಂದು ರೀತಿಯ ಕಡ್ಲೇ ಕಾಯಿ ಅಲ್ಲಾ ಸ್ವಾಮಿ ನಾನಾ ರೀತಿಯ ಹಲವಾರು ಥರಹದ ಕಡ್ಲೇ ಕಾಯಿ ಮಾರಾಟಕ್ಕೆ ಅಂತಾ ಬಂದಿರ್ತಾರೆ. ಇನ್ನು ಕಡ್ಲೇ ಕಾಯಿ ಪ್ರಿಯರಿಗಂತೂ ಇಲ್ಲಿ ಹಬ್ಬಾನೋ ಹಬ್ಬ..
ಕಡ್ಲೇ ಕಾಯಿ ಪರಿಷೆಯಲ್ಲಿ ಕಂಡಿದ್ದೇನು ಗೊತ್ತಾ..?
ಇನ್ನು ನಾವು ಕೂಡ ಈ ಕಡ್ಲೇ ಕಾಯಿ ಪರಿಷೆಯಲ್ಲಿ ಏನೆಲ್ಲಾ ವೈವಿಧ್ಯಮಯ ಸನ್ನಿವೇಶಗಳು ಕಾಣ ಸಿಗ್ತಾವೇ ಅಂತಾ ನೋಡೋಕೆ ಕುತೂಹಲದಿಂದ ಹೋಗಿದ್ವಿ, ಆದ್ರೆ ನಮಗಲ್ಲಿ ಕಂಡು ಬಂದಿದ್ದು ಮಾತ್ರ ಕಡಲೇ ಕಾಯಿ ಮಾರೋರ ಮತ್ತು ಜಾತ್ರೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳೋಕೆ ಆಟಿಕೆ ಮಾರ್ತಿದ್ದವರು ಹೆಣಗಾಡ್ತಿದ್ದ ಪರಿಸ್ಥಿತಿ..!
ಕಡ್ಲೇ ಕಾಯಿ ಪರಿಷೆಯನ್ನ ಬಿಟ್ಟು ಬಿಡದಂತೆ ಕಾಡಿದ ಮಂಗಳಮುಖಿ..!
ಇದನ್ನ ಕಂಡರೂ ಕ್ಯಾರೇ ಎನ್ನದ ಪೋಲಿಸಪ್ಪ..!
ಇನ್ನು ಇವರದ್ದೆ ಕಷ್ಟ ಒಂದೆಡೆ ಆದ್ರೆ, ಕಡ್ಲೇ ಕಾಯಿ ಪರಿಷೆಯಲ್ಲಿ ಕೆಲ ಮಂಗಳಮುಖಿಯರು ಇವರನ್ನ ಕಿತ್ತು ತಿನ್ನೋಕೆ ಅಂತಾನೆ ಬರ್ತಾರೆ. ಐವತ್ತು ನೂರು ರೂಪಾಯಿ ಕೊಡದ ಹೊರತು ಇವರು ಅಲ್ಲಿಂದ ಕಾಲ್ಕೀಳುವ ಪ್ರಶ್ನೆಯೇ ಇಲ್ಲ. 10 ರೂಪಾಯಿ ಕೊಟ್ಟರೆ ಮುಖಕ್ಕೆ ಎಸೀತಾರೆ ಈ ಮಂಗಳಮುಖಿಯರು.. ದೌರ್ಜನ್ಯವಾಗಿ ದುಡ್ಡು ಕಿತ್ತುಕೊಳ್ತಿದ್ರು ಇದನ್ನ ಪ್ರಶ್ನಿಸಬೇಕಾಗಿರುವ ಪೋಲಿಸರು ತಮಗೇನು ಗೊತ್ತಿಲ್ಲಂದತೆ ಒಡಾಡ್ತಿದ್ದು ನಿಜಕ್ಕೂ ವಿಷಾದನೀಯ.!

ಈ ರೀತಿಯ ನಮ್ಮ ರೆವಿನ್ಯೂ ಫ್ಯಾಕ್ಟ್ ನ್ಯೂಸ್ ತಂಡಕ್ಕೆ ಗೊತ್ತಾದ್ರಿಂದಲೇ ನಾವು ಸಹ ಇದನ್ನ ಖುದ್ದು ಕಣ್ಣಿಂದ ನೋಡೋಕಂತಾನೆ ಇಲ್ಲಿಗೆ ಕಾಲಿಟ್ಟಿದ್ವಿ..ಜಾತ್ರೆ ಅಂದ್ಕೂಡಲೇ ಹಲವಾರು ಜನ ನಾನಾ ರೀತಿಯ ವಸ್ತುಗಳನ್ನ ಮಾರ್ತಾರೆ, ಹಾಗೇ ಇಲ್ಲಿ ಕೆಲವರು ಈ ಕಡ್ಲೇ ಕಾಯಿ ಪರಿಷೆಯಲ್ಲಿ ತಮ್ಮ ಮಕ್ಕಳ ಹೊಟ್ಟೆ ತುಂಬಿಸಿಕೊಳ್ಳೋಕೆ ಏನೆಲ್ಲಾ ಸರ್ಕಸ್ ಮಾಡ್ತಾರೆ ಗೊತ್ತಾ..?
ಕಡಲೇ ಕಾಯಿ ಪರಿಷೆ ಗುಂಗಲ್ಲಿ ಕಂಡಿದ್ದು ನೂರಾರು..!
ಕಡ್ಲೇ ಕಾಯಿ ಜೊತೆಗೆ ಕಾಣದ ವಿಚಾರಗಳು ಸಾವಿರಾರು..!
ಕಡ್ಲೇಕಾಯಿ ಪರಿಷೆಯಲ್ಲಿ ಕಾಣದ ಕರಾಳ ಸತ್ಯ..!
ಈ ರೀತಿ ಕಡ್ಲೇ ಕಾಯಿ ಪರಿಷೆಯಲ್ಲಿ ಕಡ್ಲೇ ಕಾಯಿ ಮಾರಾಟ ಮತ್ತು ಕೊಳ್ಳೊದು ಸಾಮಾನ್ಯ ಆದ್ರೆ ಇದರ ಹಿಂದಿರುವ ಕರಾಳ ಸತ್ಯ ಹೊಟ್ಟೆ ಪಾಡು.. ಹೌದು ವೀಕ್ಷಕರೇ ಜನ ತಮ್ಮ ಹೊಟ್ಟೆ ಪಾಡಿಗಾಗಿ ಹ್ಯಾಗೆಲ್ಲಾ ಕಷ್ಟ ಪಡ್ತಾರೆ ಅನ್ನೊದಕ್ಕೆ ಇದೊಮದು ಪುಟ್ಟ ಉದಾಹರಣೆ. ಇಂತಹದ್ದನ್ನ ನಾವು ಹುಡುಕ್ತಾ ಹೋದ್ರೆ ನಮ್ಮ ಕಣ್ಣಿಗೆ ಸಾಕಷ್ಟು ಉದಾಹರಣೆಗಳು ಸಿಗ್ತಾ ಹೋಗ್ತಾವೆ. ಇವರ ಮಕ್ಕಳಿಗೆಲ್ಲಾ ಶಿಕ್ಷಣ, ಮೂಲಭೂತ ಸೌಕರ್ಯಗಳಂತೂ ದೂರದ ಮಾತು, ಇಂತಹ ಮತ್ತಷ್ಟು ಕರಾಳ ಸತ್ಯಗಳನ್ನ ನಿಮ್ಮ ಮುಂದೆ ಹೊತ್ತು ತರ್ತಾನೆ ಇರ್ತೀವಿ..
ಅಭಿಜಿತ್, ರೆವಿನ್ಯೂ ಫ್ಯಾಕ್ಟ್ ನ್ಯೂಸ್


