26.2 C
Bengaluru
Saturday, May 24, 2025

ರಿಯಲ್ ಎಸ್ಟೇಟ್ ಕಂಪನಿ ಶೋಭಾ ಡೆವಲಪರ್ಸ್‌ ಮೇಲೆ IT ರೇಡ್‌

ಬೆಂಗಳೂರು ಮಾ. 20 :; ಸೋಮವಾರ ಬೆಳಗ್ಗೆ ಶೋಭಾ ಡೆವಲಪರ್ಸ್‌ನ ಪ್ರಧಾನ ಕಚೇರಿ ಮತ್ತು ಇತರ ಸಂಬಂಧಿತ ಕಚೇರಿಗಳ ಮೇಲೆ ಆದಾಯ ತೆರಿಗೆ ಬೆಂಗಳೂರು ಮತ್ತು ಚೆನ್ನೈ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 50 ವಾಹನಗಳಲ್ಲಿ ಹತ್ತು ಅಧಿಕಾರಿಗಳಿದ್ದ ಐದು ತಂಡಗಳು ವೈಟ್‌ಫೀಲ್ಡ್ ರಸ್ತೆಯಲ್ಲಿರುವ ಹೂಡಿ ಮತ್ತು ಬನ್ನೇರುಘಟ್ಟ ರಸ್ತೆಯ ಅರೆಕೆರೆ ಕಚೇರಿಗಳ ಮೇಲೆ ದಾಳಿ ನಡೆಸಿವೆ,ವರದಿಗಳ ಪ್ರಕಾರ ಐಟಿ ಅಧಿಕಾರಿಗಳು ಬೆಳಗ್ಗೆಯಿಂದಲೇ ಶೋಭಾ ಡೆವಲಪರ್ಸ್‌ಗೆ ಸಂಬಂಧಪಟ್ಟ ಕಚೇರಿಗಳಲ್ಲಿ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಉನ್ನತ ಅಧಿಕಾರಿಗಳು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳ ಆವರಣವೂ ಐಟಿ ದಾಳಿಯ ಭಾಗವಾಗಿತ್ತು.ಸೋಮವಾರದಂದು ಕಂಪನಿಯ ಷೇರುಗಳು ಬೆಳಗಿನ ಅವಧಿಗಳಲ್ಲಿ ರೂ 526.85 ಕ್ಕೆ ಇಳಿದವು ಮತ್ತು ನಂತರ 1:42 IST ಕ್ಕೆ 2. 48 ರಷ್ಟು ಕಡಿಮೆಯಾಗಿ ರೂ 531.95 ಕ್ಕೆ ಬಂದವು.ರಿಯಲ್ ಎಸ್ಟೇಟ್ ಕಂಪನಿ ಶೋಭಾ ನಕಾರಾತ್ಮಕ ಕಾರಣಗಳಿಗಾಗಿ ಸುದ್ದಿ ಮಾಡಿದ್ದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೇಟ್ ಕಂಪನಿಯು 201 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಚೇರಿಯಿಂದ ಪ್ರಕರಣ ದಾಖಲಿಸಿತ್ತು.ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಐಟಿ ಅಧಿಕಾರಿಗಳು ಶೋಭಾ ಡೆವಲಪರ್ಸ್ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.ಮಾಹಿತಿ ಪ್ರಕಾರ ಕರ್ನಾಟಕ ಮಾತ್ರವಲ್ಲ, ಕೇರಳ ಹಾಗೂ ಚೆನ್ನೈನಲ್ಲಿರುವ ಕಚೇರಿಗಳ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Related News

spot_img

Revenue Alerts

spot_img

News

spot_img