ದಿನಕ್ಕೆ ರೂ.200 ಹೂಡಿಕೆ ಮಾಡಿ 28 ಲಕ್ಷ ಸಂಪಾದಿಸಿ;LIC Super Hit Plan

0
125

ಬೆಂಗಳೂರು;ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಯಾವುದು ಸುರಕ್ಷಿತ ಹೂಡಿಕೆ ಎಂದು ನೋಡುತ್ತೇವೆ. ಹಾಗೆಯೇ ಈ ಹೂಡಿಕೆಯಿಂದ ನಮಗೆ ಏನೆಲ್ಲ ಪ್ರಯೋಜನವಿದೆ, ಎಷ್ಟು ರಿಟರ್ನ್ ಲಭ್ಯವಾಗುತ್ತದೆ ಎಂದು ಕೂಡಾ ನೋಡುತ್ತೇವೆ. ಹಾಗೆ ನೋಡಿದಾಗ ನಮಗೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಪಾಲಿಸಿಗಳು ಅತೀ ಉತ್ತಮವಾಗಿದೆ. ಜೀವ ಸುರಕ್ಷತೆಯು ಇದೆ, ಉಳಿತಾಯವೂ ಇದೆ, ಉತ್ತಮ ರಿಟರ್ನ್ ಕೂಡಾ ಇದೆ.ಹಲವಾರು ದಶಕಗಳು ಕಳೆದರೂ ಕೂಡಾ ಎಲ್‌ಐಸಿ ಷೇರು ಮೌಲ್ಯಕ್ಕಿಂತ ಅಧಿಕ ಷೇರು ಮೌಲ್ಯವನ್ನು ಯಾವುದೇ ಖಾಸಗಿ ವಿಮಾ ಸಂಸ್ಥೆಗಳು ಹೊಂದಿಲ್ಲ. ಎಲ್‌ಐಸಿ ಷೇರುಗಳು ನಿರಂತರವಾಗಿ ಏರಿಳಿತ ಕಾಣುತ್ತಿದ್ದರೂ ಕೂಡಾ ಎಲ್‌ಐಸಿಯ ಪಾಲಿಸಿಗಳು ಉತ್ತಮವಾಗಿದೆ. ಯಾವುದೇ ರಿಸ್ಕ್ ಇಲ್ಲದ ಪಾಲಿಸಿಗಳು ಆಗಿದೆ.

ಎಲ್ಐಸಿ ಸೂಪರ್ಹಿಟ್ ಯೋಜನೆ

ಭಾರತೀಯ ಜೀವ ವಿಮಾ ನಿಗಮವು ನಿಮಗೆ ಉಳಿತಾಯ ಮತ್ತು ಭದ್ರತೆಯನ್ನು ಖಾತರಿಪಡಿಸುತ್ತದೆ ಎಂಬುದು ಗಮನಿಸಬೇಕಾದ ಅಂಶ. LIC ಜೀವನ್ ಪ್ರಗತಿ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಂದರೆ IRDA ಯ ನಿಯಮಗಳನ್ನು ಅನುಸರಿಸುವ ವಿಶೇಷ ಪಾಲಸಿಯಾಗಿದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಈ ಪಾಲಸಿ ಅಪಾಯದ ರಕ್ಷಣೆಯೊಂದಿಗೆ ಬರುತ್ತದೆ. ಈ ಯೋಜನೆಯನ್ನು 3 ಫೆಬ್ರವರಿ 2016 ರಂದು ಪ್ರಾರಂಭಿಸಲಾಗಿದೆ.

ಈ ಯೋಜನೆಯಲ್ಲಿ ನಾವು ಹೂಡಿಕೆಯಲ್ಲಿ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗಲಿದೆ. ನಾವು ಪ್ರತಿ ದಿನ 200 ರೂಪಾಯಿ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 28 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗಲಿದೆ.
ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಜೀವನ್ ಪ್ರಗತಿ ಯೋಜನೆಯಲ್ಲಿ ನೀವು ನಿಯಮಿತ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಪಾಲಿಸಿಯಲ್ಲಿ ನೀವು ಲೈಫ್ ಕವರ್ (ಮರಣ ಪ್ರಯೋಜನ) ಸಹ ಪಡೆಯುತ್ತೀರಿ ಇದು ಪ್ರತಿ 5 ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. ಮೊತ್ತವು ನಿಮ್ಮ ಪಾಲಿಸಿ ಎಷ್ಟು ಸಮಯದವರೆಗೆ ಸಕ್ರೀಯ ಇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಪಾಲಸಿಯ ವೈಶಿಷ್ಟ್ಯಗಳೇನು?
1.>> ಜೀವನ್ ಪ್ರಗತಿ ಯೋಜನೆಯ ಸಂಪೂರ್ಣ ಮೆಚ್ಯೂರಿಟಿ ನಂತರ, ನೀವು ರೂ 28 ಲಕ್ಷ ಮೊತ್ತವನ್ನು ಲಾಭದ ರೂಪದಲ್ಲಿ ಪಡೆದುಕೊಳ್ಳಬಹುದು.
2.>> ಇದರಲ್ಲಿ 100% ಮೂಲ ವಿಮಾ ಮೊತ್ತವನ್ನು ಪಾಲಿಸಿದಾರನ ಮರಣದ ಮೇಲೆ ಪಾಲಿಸಿಯನ್ನು ತೆಗೆದುಕೊಂಡ ದಿನಾಂಕದಿಂದ 5 ವರ್ಷಗಳವರೆಗೆ ಸಮ್ ಅಸ್ಯೋರ್ಡ್ ಅನ್ನು ಪಾವತಿಸಲಾಗುತ್ತದೆ.
3.>> ಈ ಯೋಜನೆಯಲ್ಲಿ ಅಪಘಾತ ಪ್ರಯೋಜನ ಮತ್ತು ಅಂಗವೈಕಲ್ಯ ರೈಡರ್ ನ ಲಾಭವನ್ನು ಸಹ ಪಡೆಯಬಹುದು. ಇದಕ್ಕಾಗಿ ನೀವು ಸ್ವಲ್ಪ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.
4.ಜೀವನ ಸುರಕ್ಷಾ ಯೋಜನೆ ಕೂಡಾ ಹೌದು

ಎಷ್ಟು ಮತ್ತು ಹೇಗೆ ಈ ಮೊತ್ತವನ್ನು ಪಡೆಯಬಹುದು?

ಇದರಲ್ಲಿ ನೀವು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಹೂಡಿಕೆದಾರರು ಇದರಲ್ಲಿ ದಿನಕ್ಕೆ 200 ರಂತೆ ಪ್ರತಿ ತಿಂಗಳು 6 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಪಾಲಿಸಿಯನ್ನು 12 ವರ್ಷ ವಯಸ್ಸಿನಿಂದಲೇ ಪ್ರಾರಂಭಿಸಬಹುದು. ಇದರಲ್ಲಿ ಗರಿಷ್ಠ ಹೂಡಿಕೆ ವಯಸ್ಸು 45 ವರ್ಷಗಳು