24.8 C
Bengaluru
Sunday, November 10, 2024

ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸಾಮರ್ಥ್ಯವನ್ನು24 ಲಕ್ಷ ಕೋಟಿ ರೂ ಹೆಚ್ಚಳ: ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

2025-2026 ರ ವೇಳೆಗೆ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸಾಮರ್ಥ್ಯವನ್ನು 24 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವುದು ಭಾರತದ ಗುರಿಯಾಗಿದೆ, ಇದು 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗುತ್ತದೆ: “ಯುವ ಭಾರತಕ್ಕಾಗಿ ನವಭಾರತ”ಅಧಿವೇಶನದಲ್ಲಿ ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

2025-26 ರ ವೇಳೆಗೆ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸಾಮರ್ಥ್ಯವನ್ನು 24 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವುದು ಶ್ರೀ ನರೇಂದ್ರ ಮೋದಿ ಸರ್ಕಾರದ ಗುರಿಯಾಗಿದೆ, ಇದು ಹತ್ತು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಯುವ ಭಾರತಕ್ಕಾಗಿ ನವಭಾರತ ಉಪಕ್ರಮದ ಅಂಗವಾಗಿ ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಸರ್ಕಾರಿ ಶ್ರೀ ಕೃಷ್ಣ ರಾಜೇಂದ್ರ ಸಿಲ್ವರ್ ಜ್ಯೂಬಿಲಿ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಟ್ ಮತ್ತು ಇತರ ಕಾಲೇಜುಗಳ ಸುಮಾರು 1500 ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶ್ರೀ ರಾಜೀವ್ ಚಂದ್ರಶೇಖರ್ ಮಾತನಾಡಿದರು.

“ಅಪ್ಪು”(ಕನ್ನಡದ ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಸಾಮಾನ್ಯವಾಗಿ ಕರೆಯುವ ಹೆಸರು) ಅವರನ್ನು ಅವರ ಜನ್ಮದಿನದಂದು ಸ್ಮರಿಸಿದ ಶ್ರೀ ರಾಜೀವ್ ಚಂದ್ರಶೇಖರ್, ಈ ದಿನವನ್ನು “ಸ್ಫೂರ್ತಿ ದಿನ”ಎಂದು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳೊಂದಿಗೆ #IndiaTechade ನಲ್ಲಿರುವ ಅವಕಾಶಗಳನ್ನು ಕುರಿತು ಚರ್ಚಿಸಲು ಇದಕ್ಕಿಂತ ಸೂಕ್ತ ಸಂದರ್ಭ ಬೇರೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

ಶ್ರೀ ನರೇಂದ್ರ ಮೋದಿಜಿಯವರು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 2014 ರ ಪೂರ್ವ ಮತ್ತು 2014 ರ ನಂತರದ ಭಾರತವನ್ನು ಹೋಲಿಕೆ ಮಾಡಿದ ಸಚಿವರು, ದೇಶವು ಇಂದು ಅದರ ಇತಿಹಾಸದ ಅತ್ಯಂತ ರೋಚಕ ಅವಧಿಯಲ್ಲಿದೆ. ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ “ಅದೃಷ್ಟದ ಪೀಳಿಗೆ”ಯಾಗಿದ್ದಾರೆ ಎಂದು ಹೇಳಿದರು.

“ಇಂದು, ಯುವ ಭಾರತೀಯರು ಭಾರತದ ತಂತ್ರಜ್ಞಾನ ದಶಕದಲ್ಲಿ ದೇಶದ ಪ್ರಗತಿಯನ್ನು ಮುನ್ನಡೆಸುತ್ತಿದ್ದಾರೆ. 110 ಯುನಿಕಾರ್ನ್‌ಗಳು ಸೇರಿದಂತೆ 90,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿವೆ, ಇದರಲ್ಲಿ ಯುವ ಭಾರತೀಯರು ದೊಡ್ಡ ಪಾತ್ರವನ್ನು ವಹಿಸುತ್ತಿದ್ದಾರೆ. ಅವರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಂದ ಯಶಸ್ಸನ್ನು ಸಾಧಿಸಿದ್ದಾರೆಯೇ ಹೊರತು ಯಾವುದೇ ಸಂಪರ್ಕಗಳು ಅಥವಾ ಪ್ರಸಿದ್ಧ ಸರ್‌ನೇಮ್‌ ನಿಂದ ಅಲ್ಲ”ಎಂದು ಅವರು ಹೇಳಿದರು.‌

ಶ್ರೀ ನರೇಂದ್ರ ಮೋದಿ ಸರ್ಕಾರದ ನೀತಿಗಳಿಂದಾಗಿ ನಿಷ್ಕ್ರಿಯ ಪ್ರಜಾಪ್ರಭುತ್ವ ಮತ್ತು ಆಡಳಿತದ ಹಳೆಯ ವ್ಯವಸ್ಥೆಯನ್ನು ಕ್ರಿಯಾತ್ಮಕ ಪ್ರಜಾಪ್ರಭುತ್ವ ಮತ್ತು ಗರಿಷ್ಠ ಆಡಳಿತಕ್ಕೆ ಬದಲಾಯಿಸಲಾಗಿದೆ ಎಂದು ಅವರು ಹೇಳಿದರು.

ಭಾಷಣದ ನಂತರ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದರಲ್ಲಿ ಅವರು ಕೌಶಲ್ಯ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆ, ಉದ್ಯಮಶೀಲತೆಯ ಅವಕಾಶಗಳು ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಇತ್ತೀಚಿನ ಭೇಟಿಯವರೆಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

“ಡಬಲ್ ಇಂಜಿನ್ ಸರ್ಕಾರ” ಎಂಬ ಪರಿಕಲ್ಪನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಮತ್ತು ರಾಜ್ಯಗಳಲ್ಲಿನ ಸರ್ಕಾರಗಳು ಹಂಚಿಕೆಯ ಗುರಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ, ಆರ್ಥಿಕ ಅಭಿವೃದ್ಧಿಯಲ್ಲಿ ವೇಗ ಹೆಚ್ಛಾಗುತ್ತದೆ ಎಂದು ವಿವರಿಸಿದರು. “ರೈಲಿನಲ್ಲಿರುವಂತೆ, ಹೆಚ್ಚಿನ ವೇಗವನ್ನು ಸಾಧಿಸಲು ನೀವು ಹೆಚ್ಚಿನ ಅಶ್ವಶಕ್ತಿಯನ್ನು ಬಳಸುವಂತೆ, ರಾಜ್ಯಗಳು ಮತ್ತು ಕೇಂದ್ರಗಳ ಹಂಚಿಕೆಯ ಗುರಿಗಳು ಸಾಮಾನ್ಯವಾಗಿದ್ದರೆ, ಆರ್ಥಿಕ ಅವಕಾಶಗಳು ಮತ್ತು ಅಭಿವೃದ್ಧಿಯು ಹೆಚ್ಚು ದೃಢವಾಗಿರುತ್ತದೆ ಎಂದು ಅವರು ಹೇಳಿದರು.

ಎಸ್‌ವಿಬಿ ಬಿಕ್ಕಟ್ಟು ಮತ್ತು ಸ್ಟಾರ್ಟ್‌ಅಪ್‌ಗಳ ಕಷ್ಟಗಳನ್ನು ತಗ್ಗಿಸಲು ಭಾರತ ಸರ್ಕಾರದ ಪಾತ್ರದ ಕುರಿತ ಪ್ರಶ್ನೆಗೆ ಶ್ರೀ ರಾಜೀವ್ ಚಂದ್ರಶೇಖರ್ ಉತ್ತರಿಸಿ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಯಾವುದೇ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಹೋಲಿಸಿದರೆ ಹೆಚ್ಚು ಸ್ಥಿತಿಸ್ಥಾಪಕ ಮತ್ತು ಬಲಶಾಲಿಯಾಗಿದೆ. ಆದ್ದರಿಂದ ಸ್ಟಾರ್ಟಪ್‌ಗಳು ಭಾರತೀಯ ಬ್ಯಾಂಕ್‌ಗಳನ್ನು ತಮ್ಮ ಆದ್ಯತೆಯ ಬ್ಯಾಂಕಿಂಗ್ ಪಾಲುದಾರರನ್ನಾಗಿ ಆರಿಸಿಕೊಳ್ಳಬೇಕು ಎಂದರು.

ಕರ್ನಾಟಕದ ಕನಿಷ್ಠ 15 ಲಕ್ಷ ಯುವ ಭಾರತೀಯರಿಗೆ ಉದ್ಯಮ ಸಂಬಂಧಿತ ಫ್ಯೂಚರ್ ರೆಡಿ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು. ಸೇಲ್ಸ್ ‌ಫೋರ್ಸ್, ಟ್ರೂಕಾಲರ್ ಮತ್ತು ರೆನೆಸಾಸ್ ‌ನಂತಹ ಕಂಪನಿಗಳು ಭಾರತದಲ್ಲಿ ಕಚೇರಿಗಳನ್ನು ತೆರೆಯುವ ಉದಾಹರಣೆಗಳನ್ನು ಸಚಿವರು ಉಲ್ಲೇಖಿಸಿದರು, ಅವಕಾಶಗಳು ಹೇರಳವಾಗಿ ಹೇಗೆ ಲಭ್ಯವಿವೆ ಮತ್ತು ಕೌಶಲ್ಯವು ಈ ಅವಕಾಶಗಳನ್ನು ಪಡೆಯಲು ಸಜ್ಜುಗೊಳಿಸಲು ಭಾರತೀಯರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ವಿವರಿಸಿದರು.

‘ಯುವ ಭಾರತಕ್ಕಾಗಿ ನವ ಭಾರತ’ ಎಂಬುದು ಶ್ರೀ ರಾಜೀವ್ ಚಂದ್ರಶೇಖರ್ ಅವರು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿರುವ ಸಂವಾದಗಳ ಸರಣಿಯಾಗಿದ್ದು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಡಿಜಿಟಲ್ ಮತ್ತು ಉದ್ಯಮಶೀಲತೆಯ ಕ್ಷೇತ್ರದಲ್ಲಿನ ಬೆಳವಣಿಗೆಗಳ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತದೆ.

Related News

spot_img

Revenue Alerts

spot_img

News

spot_img