23 C
Bengaluru
Tuesday, November 12, 2024

ಮನೆಯ ಹೊರಾಂಗಣ ವಿನ್ಯಾಸಗೊಳಿಸಲು ಕೆಲ ಟಿಪ್ಸ್ ಗಳು ಇಲ್ಲಿವೆ..

ಬೆಂಗಳೂರು, ಮಾ. 20 : ನೀವು ಹೊಸ ಮನೆಯನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಅತ್ಯತ್ತಮವಾದ ಮನೆಯ ಬಾಹ್ಯ ವಿನ್ಯಾಸವನ್ನು ಆಯ್ಕೆ ಮಾಡಿ. ವಿಲ್ಲಾಗಳು ಮತ್ತು ಅಪಾರ್ಟ್‌ ಮೆಂಟ್‌ ಗಳ ಬಾಹ್ಯ ವಿನ್ಯಾಸ ಅಂಧೌಆಗಿದ್ದಷ್ಟು ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಈಗಂತೂ ಬಹಳಷ್ಟು ಹೊಸ ರೀತಿಯ ಬಾಹ್ಯ ವಿನ್ಯಾಸಗಳು ಕಂಡು ಬರುತ್ತಿವೆ. ಕೆಲವರು ಮನೆಯ ಹೊರಗಿನ ವಿನ್ಯಾಸಕ್ಕೆ ಹೆಚ್ಚು ವ್ಯಯಿಸುವುದು ಬೇಡ ಎಂದು ಭಾವಿಸುತ್ತಾರೆ. ಹಾಗಾಗಿ ಬಾಹ್ಯ ವಿನ್ಯಾಸದ ಬಗ್ಗೆ ಕೆಲವರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಮನೆಯ ಹೊರಗಡೆಯ ಲುಕ್‌ ಕೂಡ ಅಂದವಾಗಿರಬೇಕು. ಅದಕ್ಕಾಗಿಯೇ ನಾವಿಂದು ಕೆಲವೊಂದು ಟಿಪ್ಸ್‌ ಗಳನ್ನು ಈ ಕೆಳಗೆ ನೀಡಿದ್ದೇವೆ.

ಮನೆಯ ಹೊರಗಿನ ವಿನ್ಯಾಸ: ಮನೆಯ ಹೊರಗಿನ ವಿನ್ಯಾಸವು ಆಧುನಿಕ ಹಾಗೂ ಸಾಂಪ್ರದಾಯಿಕವಾಗಿ ಕಾಣುವಂತೆ ವಿನ್ಯಾಸಗೊಳಿಸಬಹುದು. ಆಧುನಿಕವಾಗಿ ಈಗಂತೂ ಸಾಕಷ್ಟು ಬಗೆಯ ವಿನ್ಯಾಸಗಳು ಲಭ್ಯವಿದೆ. ಇದರಿಂದ ಮನೆಯ ಹೊರಗಿನಿಂದ ನೋಡುತ್ತಿದ್ದಂತೆಯೇ ಒಂದು ಬಗೆಯ ಪಾಸಿಟಿವ್‌ ವೈಬ್‌ ಅನ್ನು ನೋಡಬಹುದು.

ವಾಸ್ತುಶಿಲ್ಪದ ಗುಣಲಕ್ಷಣಗಳು: ಇನ್ನು ಮನೆಯ ಹೊರ ಭಾಗದ ವಿನ್ಯಾಸದಲ್ಲಿ ಅತ್ಯಂತ ನಿರ್ಣಾಯಕ ಅಂಶವೆಂದರೆ ಮನೆಯ ವಾಸ್ತುಶಿಲ್ಪದ ಗುಣಲಕ್ಷಣಗಳು. ಟ್ರೆಂಡಿಂಗ್‌ ಆಗಿರುವಂತೆ ವಿನ್ಯಾಸಗೊಳಿಸಬಹುದು. ಮನೆ ಕಾಂಪೌಂಡ್‌, ಪಾರ್ಕಿಂಗ್‌ ಸ್ಪೇಸ್‌ ಇಲ್ಲವೇ ಸಿಲ್ಲರ್‌ ಬಾಗಿಲು, ಮನೆಯ ಮುಂಬಾಗಿಲು, ರಸ್ತೆಗೆ ಕಾಣುವ ಮನೆಯ ಹೊರ ಭಾಗದ ಸಿಂಗಾರವನ್ನು ವಿವಿಧ ರೀತಿಯಲ್ಲಿ ಸಿಂಗರಿಸಬಹುದು. ಇದಕ್ಕೆ ಮರ, ಲೋಹ, ಸ್ಟೀಲ್‌ ಗಳಿಂದಲೂ ಹೊರಗಿನ ವಿನ್ಯಾಸ ಮಾಡಬಹುದು.

ಮುಖ್ಯದ್ವಾರ ವಿನ್ಯಾಸ: ಮುಂಭಾಗದ ಬಾಗಿಲಿನ ವಿನ್ಯಾಸವನ್ನು ಮರದಿಂದ ಮಾಡಬಹುದು. ಮನೆಯ ಮುಂದೆ ಬಾಗಿಲಿನ ಅಂದವನ್ನು ಹೆಚ್ಚಿಸಲು ಇಂಟಿರಿಯರ್‌ ಡಿಸೈನರ್‌ ಗಳಿಂದಲೂ ಸಹಾಯ ಪಡೆಯಬಹುದು.
ಬಾಗಿಲಿನ ವಿನ್ಯಾಸಪ್ರಭಾವಶಾಲಿ ಬಾಗಿಲು ವಿನ್ಯಾಸಗಳು ನಿಮ್ಮ ಮನೆಗೆ ಹೆಚ್ಚುವರಿ ಮಟ್ಟದ ಬಾಹ್ಯ ಸೌಂದರ್ಯವನ್ನು ಸೇರಿಸಬಹುದು. ನಿಮ್ಮ ಹೊರಭಾಗದ ಬಾಗಿಲು ಇಡೀ ಹೊರಭಾಗದ ಕೇಂದ್ರಬಿಂದುವಾಗಿದ್ದರೆ ನಿಮ್ಮ ಮನೆಯನ್ನು ತಲೆ ತಿರುಗಿಸುವ ಆಸ್ತಿಯಾಗಿ ಪರಿವರ್ತಿಸಬಹುದು. ಅಲ್ಲದೆ, ಬಾಹ್ಯ ಬಾಗಿಲಿಗೆ ಪೂರಕವಾಗಿ, ಪ್ರಕಾಶಮಾನವಾದ ಬಣ್ಣವನ್ನು ಬಳಸಬಹುದು. ಸುಂದರವಾಗಿ ರಚಿಸಲಾದ ವಿಳಾಸ ಫಲಕ, ಅಲಂಕರಿಸಿದ ನಾಮಫಲಕ ಇತ್ಯಾದಿಗಳನ್ನು ಸೇರಿಸುವ ಮೂಲಕ ಅನನ್ಯವಾದದ್ದನ್ನು ಪ್ರಯತ್ನಿಸಿ.

ಮುಂಭಾಗ: ಮುಖಮಂಟಪವು ನಿಮ್ಮ ಮನೆಯ ಅತ್ಯಂತ ಹೊರಗಿನ ಸ್ಥಳವಾಗಿದೆ, ಇದು ಸಂಪೂರ್ಣ ಬಾಹ್ಯ ಥೀಮ್‌ಗೆ ಹೊಂದಿಕೆಯಾಗಬೇಕು. ಇತರ ಬಾಹ್ಯ ವಿನ್ಯಾಸದ ಆಧಾರದ ಮೇಲೆ ನಿಮ್ಮ ಮನೆಯ ಹೊರಗಿನ ಹೆಚ್ಚುವರಿ ಆಸನ ಪ್ರದೇಶ ಮತ್ತು ಕೋಣೆಯನ್ನು ನೀವು ಹೊಂದಿಸಬಹುದು. ನೆರೆಹೊರೆಯವರೊಂದಿಗೆ ಸಂಜೆಯ ಮಾತುಕತೆಯನ್ನು ಆನಂದಿಸಲು ಇದು ಉತ್ತಮ ಸ್ಥಳವಾಗಿದೆ.

ಕಿಟಕಿಯ ವಿನ್ಯಾಸ: ಕಿಟಕಿಯು ಮನೆಯ ಹೊರಗಡೆ ನಿಂತು ನೋಡುವವರಿಗೆ ಆಕರ್ಷಕವಾಗಿ ಕಾಣಬೇಕು. ಕಿಟಕಿಗಳ ಅಂತರ, ಗಾತ್ರ, ವಿನ್ಯಾಸ, ಆಕಾರ, ಬಣ್ಣಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಲಂಕಾರಿಕ ಶಟರ್‌ಗಳು, ಮೂಲ ಸನ್‌ಶೇಡ್ ಬಾರ್ ವಿನ್ಯಾಸಗಳು ಇತ್ಯಾದಿಗಳನ್ನು ಪ್ರಯತ್ನಿಸಿ.

Related News

spot_img

Revenue Alerts

spot_img

News

spot_img