27.3 C
Bengaluru
Monday, July 1, 2024

ಸಬ್ ರಿಜಿಸ್ಟ್ರಾರ್ ಕಛೇರಿಯ ಕಾವೇರಿ 2.0 ನಲ್ಲಿ ಬಡಾವಣೆಯನ ಜಂಟಿ ಅಭಿವೃದ್ಧಿ ಕರಾರು ಪತ್ರ ಸಲ್ಲಿಸುವುದು ಹೇಗೆ?

ಬೆಂಗಳೂರು ಜೂನ್ : ಕಂದಾಯ ಇಲಾಖೆಯು ದಸ್ತಾವೇಜುಗಳ ನೋಂದಣಿ ಸರಳವಾಗಿಡುವುದಕ್ಕಾಗಿ ಕಾವೇರಿ 2.0 ತಂತ್ರಾಶವನ್ನು ಜಾರಿಗೆ ತಂದಿದ್ದು ಅದರ ಕುರಿತಾಗಿ ಒಂದೊಂದೇ ವಿಷಯಗಳು ಜನರಿಗೆ ತಿಳಿಸುವ ಒಂದು ವಿಭಿನ್ನ ಕ್ರಮ ನಿಮಗಾಗಿ

1.ಕಾವೇರಿ 2.0 link ನ ಮೇಲೆ ಕ್ಲಿಕ್ ಮಾಡಿ ಕಾವೇರಿ 2.0 ಮುಖ ಪುಟ ತೆರೆಯುತ್ತದೆ.

2. Start new Application ಮೇಲೆ ಕ್ಲಿಕ್ ಮಾಡಿ.

3.Document Registration ಮೇಲೆ ಕ್ಲಿಕ್ ಮಾಡಿ ಕೆಳಗೆ ಬರುವ Continue Button ಮೇಲೆ ಕ್ಲಿಕ್ ಮಾಡಿ.

4. Select the Nature of Document as “Joint Development Document” and Select Article as “ಕೊಟ್ಟಿರುವ ಆರ್ಟಿಕಲ್ ಅನ್ನು” ಸೆಲೆಕ್ಟ್ ಮಾಡಿ
ನಂತರ
Sub Article Select ಮಾಡುವ ಬಗ್ಗೆ, Article (5-f) Joint Development Agreement ಅನ್ನು ಸೆಲೆಕ್ಟ್ ಮಾಡಿ.

5. ನೀವು ಬಡಾವಣೆಯನ ಜಂಟಿ ಅಭಿವೃದ್ಧಿ ಕರಾರು ಪತ್ರ( “Joint Development Document”)ಮಾಡುತ್ತಿರುವುದು ಯಾವ ಮಾದರಿ ಎಂಬುದನ್ನು ಸೆಲೆಕ್ಟ್ ಮಾಡಿ
(i)Agriculture (ii)Non-Agriculture
ಬಡಾವಣೆಯನ ಜಂಟಿ ಅಭಿವೃದ್ಧಿ ಕರಾರು ಪತ್ರ( “Joint Development Document”)ಮಾಡುತ್ತಿರುವುದರಿಂದ (i)Agriculture ಆಯ್ಕೆ ಮಾಡಿಕೊಳ್ಳಿ.

6. ನಿಮ್ಮ ಸ್ವತ್ತು ಯಾವ ವ್ಯಾಪ್ತಿಗೆ ಬರಲಿದೆ ಎಂಬುದನ್ನು ಸೆಲೆಕ್ಟ್ ಮಾಡಿ

(i) ಇ-ಸ್ವತ್ತು : ನಿಮ್ಮ ಸ್ವತ್ತು ಗ್ರಾಮ ಪಂಚಾಯಿತಿ(RDPR Dept) ವ್ಯಾಪ್ತಿಗೆ ಬಂದರೆ ಇದನ್ನು ಸೆಲೆಕ್ಟ್ ಮಾಡಿ.
(ii) Others: ಗ್ರಾಮ ಪಂಚಾಯಿತಿ ಬಿಟ್ಟು ಬೇರೆ ವ್ಯಾಪ್ತಿಗೆ ಬಂದರೆ ಇದನ್ನು ಸೆಲೆಕ್ಟ್ ಮಾಡಿ.

ನಾವೀಗ ಗ್ರಾಮ ಪಂಚಾಯಿತಿ(RDPR Dept) ವ್ಯಾಪ್ತಿಗೆ ಬರುವ ಸ್ವತ್ತನ್ನು ನಮೂದಿಸೋಣ

7. ಈ ಕೆಳಕಂಡ ದಾಖಲೆಗಳನ್ನು ನಮೂದು ಮಾಡು
ಜಿಲ್ಲೆ: ತಾಲೂಕು: ಹೋಬಳಿ: ಗ್ರಾಮ: Zone: ರೋಡ್: PID ಸಂಖ್ಯೆ:

8. Search ಬಟನ್ ಅನ್ನು ಕ್ಲಿಕ್ ಮಾಡಿ PID ge ಸಂಬಂಧಿಸಿದ ವಿಷಯಗಳು ದೊರೆಯಲಿವೆ.

9.Site/ಸ್ವತ್ತಿಗೆ ಸಂಬಂಧಪಟ್ಟ ಮಾಹಿತಿಯನ್ನು ಎಂಟರ್ ಮಾಡಿ select and Continue ಮೇಲೆ ಕ್ಲಿಕ್ ಮಾಡಿ, ಸ್ವತ್ತಿಗೆ ಸಂಬಂಧಪಟ್ಟ ಸಂಕ್ಷಿಪ್ತ ಮಾಹಿತಿ ನಿಮಗೆ ಸಿಗುತ್ತದೆ. ನಂತರ Select Property and Continue Button ಮೇಲೆ ಕ್ಲಿಕ್ ಮಾಡಿ.

10. ನೀವು ನಮೂದಿಸಿರುವ ದತ್ತಾಂಶವು ಭೂಮಿ ತಂತ್ರಾಂಶದಿಂದ ಕಾವೇರಿ ದತ್ತಾಂಶಕ್ಕೆ Import ಆಗಿದೆ.

11. ನಿಮ್ಮ ಜಮೀನಿನ Extend ಎಷ್ಟು ಎಂಬುದನ್ನು Submit ಮಾಡಿ ಪೂರ್ವ,ಪಶ್ಚಿಮ,ಉತ್ತರ,ದಕ್ಷಿಣದಲ್ಲಿ ಏನಿದೆ ಎಂಬುದನ್ನು ನಮೂದು ಮಾಡಬೇಕು. ಮತ್ತು Description ಅಲ್ಲಿ ಸ್ವತ್ತಿಗೆ ಸಂಬಂಧಪಟ್ಟ ವಿವರವನ್ನು ನಮೂದಿಸಬೇಕು. ಈ ವಿವರಗಳನ್ನು ಪೂರ್ಣ ಪ್ರಮಾಣದಲ್ಲಿ ನಮೂದು ಮಾಡಬೇಕಾಗುತ್ತದೆ ಕಾರಣ ಋಣಭಾರ ಪತ್ರ(EC)ದಲ್ಲಿ ಇವೆಲ್ಲಾ ನಮೂದಾಗುತ್ತವೆ. Save and Continue Button ಮೇಲೆ ಕ್ಲಿಕ್ ಮಾಡಿ.

12. ಪಾರ್ಟಿ/ಪಕ್ಷಾಗಾರರಬಗೆಗಿನ ಮಾಹಿತಿ information ಭರ್ತಿ ಮಾಡುವುದರ ಬಗ್ಗೆ.
(i) Executant -1 :-ಭೂಮಿ ಮೂಲಕ ಸ್ವತ್ತಿನ ಮಾಲೀಕರ ಹೆಸರು ಸ್ವಯಂ ದಾಖಲಾಗಿರುತ್ತದೆ. ಜೊತೆಗೆ ಅವರ ಹೆಸರು ವಿಳಾಸ ಐಡಿ ಪ್ರೂಫ್ ಅನ್ನು ನಮೂದು ಮಾಡಿ. ಕ್ಲಿಕ್ on Save Executant -1 and Move on

(ii) Executant -2:- ನಾವು ಬ್ಯಾಂಕಿನ ವಿವರಗಳನ್ನು ಇಲ್ಲಿ ನಮೂದು ಮಾಡಬೇಕಾಗುತ್ತದೆ.
ಬ್ಯಾಂಕಿನವರಿಗೆ ಹಾಜರಾತಿ exception ಇರುವುದರಿಂದ ಇಲ್ಲಿ ನಾವು (Excempted from Personal appearance from section 88) ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ನಂತರ ಬ್ಯಾಂಕಿನವರು ಕೊಟ್ಟಿರುವ ಲೆಟರ್ ಅನ್ನು ಸ್ಕ್ಯಾನ್ ಮಾಡಿ 5MB ಗೆ ಮೀರದಂತೆ ಸ್ಕಾನ್ ಮಾಡಿ ಉಪಲೋಡ್ ಮಾಡಬೇಕಾಗುತ್ತದೆ. ನಂತರ ಆ ಲೆಟರ್ ನಂಬರ್ ನಮೂದಿಸಿ.
ನಂತರ ಬ್ಯಾಂಕಿನ ಪರವಾಗಿ ಇರುವ Authorised dignitories ರವರ ವಿವರಗಳನ್ನು ನಮೂದು ಮಾಡಿ. Executant -2 ಅನ್ನು ನಾನು ಇಲ್ಲಿ Claimant(ಹಕ್ಕುದಾರ) ಆಗಿ ಮಾಡಿದ್ದೇನೆ.
ನಂತರ Save Executant-2 ಮೇಲೆ ಕ್ಲಿಕ್ ಮಾಡಿ.

Move to Presenter ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಯಾರು ಬರೆದು ಕೊಡುತ್ತಿದ್ದಾರೆ ಅವರ ಬಗ್ಗೆ ವಿವರ ದೊರೆಯಲಿದೆ. ಅವರನ್ನೆ ಸೆಲೆಕ್ಟ್ ಮಾಡಿ Make presenter ಮೇಲೆ ಕ್ಲಿಕ್ ಮಾಡಿ.

(iii) Identifier- 1&2: ನಂತರ ನಾವು ಇಬ್ಬರು ಗುರುತಿಸುವವರನ್ನ ಆಯ್ಕೆ ಮಾಡಬೇಕಾಗುತ್ತದೆ. ಅವರ ವಿವರಗಳನ್ನು ಇಲ್ಲಿ ನಮೂದಿಸಿ, Save and Continue ಮೇಲೆ ಕ್ಲಿಕ್ ಮಾಡಿ.

13.ಮಾರ್ಕೆಟ್ ವಾಲ್ಯುವೇಷನ್ ಇದೆಯೋ ಇಲ್ಲವೋ ಎಂಬುದನ್ನ ಈ ಪೇಜ್ ನಿಮಗೆ ತಿಳಿಸಲಿದೆ, ಮಾರ್ಕೆಟ್ ವಾಲ್ಯುವೇಷನ್ ಪೇಜ್ ನಿಮಗೆ ಒಂದು ಪಟ್ಟಿಯನ್ನು ನೀಡುತ್ತದೆ, ಅದರಲ್ಲಿ ನಿಮ್ಮ ಜಮೀನು ಯಾವ ರೀತಿ ಇದೆ ಎಂಬ ಆಯ್ಕೆಯನ್ನಾಧಾರಿಸಿ ಮಾರ್ಕೆಟ್ ವಾಲ್ಯುವೇಷನ್ ನ ಹಣವನ್ನು ಸೆಲೆಕ್ಟ್ ಮಾಡಿ ನೆಕ್ಸ್ಟ್ ”Valuate” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಮಾರ್ಕೆಟ್ ವಾಲ್ಯುವೇಷನ್ ಅನ್ನು ನೋಡಬಹುದು ನಂತರ Save and Continue ಮೇಲೆ ಕ್ಲಿಕ್ ಮಾಡಿ.

(i)ಇಲ್ಲಿಯವರೆಗೂ ನಾವು ಮಾಡಿದ್ದು Agricultural ಭೂಮಿಯ ಬಗೆಗಿನ ವಾಲ್ಯುವೇಷನ್ ಆಗಿದ್ದು, ಈಗ ಆ Agricultural ಭೂಮಿಯಲ್ಲಿ ಎಷ್ಟು ವಿಸ್ತೀರ್ಣವನ್ನು ಲೇಔಟ್ ಆಗಿ ಬದಲಿಸಲಿದ್ದೀರಿ ಎಂಬುದನ್ನು ಇಲ್ಲಿ ಚದರ ಅಡಿ(Sq.Metre)ಗಳಲ್ಲಿ ನಮೂದಿಸಿ.
ಉದಾಹರಣೆಗೆ 1 ಎಕರೆ = 4046.86 ಚದರ ಮೀಟರ್(Sq.Metre) ಗಳು. ಅದರಲ್ಲಿ ಎಷ್ಟು ಪ್ರತಿಶತ ವಿಸ್ತೀರ್ಣವನ್ನು ಲೇಔಟ್ ಆಗಿ ಬದಲಿಸಲಿದ್ದೀರಿ ಎಂಬುದನ್ನು ನಮೂದಿಸಿ. ಈ ವಿಸ್ತೀರ್ಣಕ್ಕೆ ಮಾರ್ಕೆಟ್ ವಾಲ್ಯುವೇಷನ್ ಅನ್ನು ನೋಡಬಹುದು ನಂತರ Save and Continue ಮೇಲೆ ಕ್ಲಿಕ್ ಮಾಡಿ.

(ii) ನೀವು ಬಡಾವಣೆಯ ಜಂಟಿ ಅಭಿವೃದ್ಧಿ ಕರಾರು ಪತ್ರ( “Joint Development Document”) ದಲ್ಲಿ ಮಾಲೀಕರ ಪ್ರತಿಶತ(%) ಷೇರೆಷ್ಟು(30% ನಾವು ತೆಗೆದುಕೊಂಡಿದ್ದೇವೆ)? ಮಾಲೀಕರು ಕಟ್ಟಿರುವ ಹಣ ಎಷ್ಟು ಮತ್ತು ಬಡಾವಣೆಯನ್ನು ಮಾಡುತ್ತಿರುವ Builder ಮಾಲೀಕರಿಗೆ ಏನಾದರು ಹಣ ಕೊಟ್ಟಿದ್ದರೆ, ಕೊಟ್ಟಿರುವ ಹಣ ಎಷ್ಟು ಎಂಬುದನ್ನು ನಮೂದಿಸಬೇಕು.

(iii) ನಂತರ ನಿಮಗೆ Actual Calculated ಮೊತ್ತ ನಿಮಗೆ ದೊರಕಲಿದೆ. ಆ ಮೊತ್ತವು ಭೂಮಿ ಮಾಲೀಕರ 30% Market Value of(ಕೃಷಿಗೆ ಬಳಸದ ಜಮೀನು) Non Agricultural Land, 70% Agriculture (ಕೃಷಿ ಭೂಮಿ) ಯ Market Value ಗಿಂತ ಜಾಸ್ತಿ ಇರುವುದರಿಂದ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಮತ್ತು ಮಾಲೀಕರಿಗೆ Builder ಕೊಟ್ಟ ಹಣವನ್ನು ಗಣನೆಗೆ ತೆಗೆದುಕೊಂಡು, Market Value ವನ್ನು ತೋರಿಸಲಾಗುತ್ತದೆ.

14. ಬಡಾವಣೆಯನ ಜಂಟಿ ಅಭಿವೃದ್ಧಿ ಕರಾರು ಪತ್ರ( “Joint Development Document”) ಎಷ್ಟು ಪೇಜ್ ಗಳಲ್ಲಿ ಇದೆ ಎಂಬುದನ್ನು ಸೆಲೆಕ್ಟ್ ಮಾಡಿ, ಕಾಲ್ಕುಲೇಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಎಷ್ಟು ಮೊತ್ತವನ್ನು ಕಟ್ಟಬೇಕು ಎಂಬುದನ್ನು ಅದು ತೋರಿಸುತ್ತದೆ. ಸೇವ್ ಅಂಡ್ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ.

15.ನಂತರ ನಿಮ್ಮ ಸಂಪೂರ್ಣ ವಿವರ ನಿಮ್ಮ ಮುಂದೆ ಬರಲಿದೆ, ಅದನ್ನು ಸರಿಯಾಗಿ ಇದೆಯಾ ಎಂದು ಚೆಕ್ ಮಾಡಿ ನಂತರ ನೀವು ಸಲ್ಲಿಸಬೇಕಾದ ಜಂಟಿ ಅಭಿವೃದ್ಧಿ ಕರಾರು ಪತ್ರ( “Joint Development Document”) ಮತ್ತು ಅನೆಕ್ಷರ್ (ಖಾತಾಪತ್ರ,ಆಧಾರ್ ಕಾರ್ಡ್) ಅನ್ನು 5MB ಗೆ ಮೀರದಂತೆ Scan ಮಾಡಿ ಉಪಲೋಡ್ ಮಾಡಿ.

16. Execution Date ಅನ್ನು ಸೆಲೆಕ್ಟ್ ಮಾಡಿ

17. ಸಬ್ ರಿಜಿಸ್ಟ್ರಾರ್ ಕಛೇರಿಯನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿಗೆ ನೋಂದಣಿ ಪೂರ್ವ ಬಡಾವಣೆಯನ ಜಂಟಿ ಅಭಿವೃದ್ಧಿ ಕರಾರು ಪತ್ರ( “Joint Development Document”) ಯ ಕೆಲಸ ಮುಗಿದಂತೆ.

Related News

spot_img

Revenue Alerts

spot_img

News

spot_img