ಯುವ ಹೂಡಿಕೆದಾರರು ರಿಯಲ್ ಎಸ್ಟೇಟ್‌ನಲ್ಲಿ ಹಣ ಮಾಡುವುದು ಹೇಗೆ?

0
266

ಸಂಪತ್ತು ಅಭಿವೃದ್ಧಿ ದೃಷ್ಟಿಯಿಂದ ಚಿಕ್ಕ ವಯಸ್ಸಿನಲ್ಲೇ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ. ಆದರೆ, ಆರಂಭದಲ್ಲೇ ದೊಡ್ಡ ಮೊತ್ತದ ಹೂಡಿಕೆ ಬೇಡುವ ಕಾರಣಕ್ಕೆ ಸಣ್ಣ ವಯಸ್ಸಿನಲ್ಲಿ ಈ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು ಕಷ್ಟ. ಹಾಗೆಂದು ಅಸಾಧ್ಯವೇನೂ ಅಲ್ಲ. ಯಶಸ್ವಿ ರಿಯಲ್ ಎಸ್ಟೇಟ್ ಹೂಡಿಕೆದಾರರು ವಯಸ್ಸಾದವರು ಎಂದು ಯುವಜನರು ತಪ್ಪು ಕಲ್ಪನೆಯಲ್ಲಿ ಇದ್ದರೆ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಅವರನ್ನು ನಿರಂತರವಾಗಿ ನಿರುತ್ತೇಜನಗೊಳಿಸುತ್ತದೆ. ಪರಿಣಾಮವಾಗಿ ಅವರು ರಿಯಲ್ ಎಸ್ಟೇಟ್ ಹೂಡಿಕೆ ಯೋಜನೆಯನ್ನು ವಯಸ್ಸಾಗುವ ವರೆಗೂ ಮುಂದೂಡುತ್ತಲೇ ಇರುತ್ತಾರೆ. ಸಮಯವು, ಯುವಜನರು ಹೊಂದಿರುವ ಸಶಕ್ತ ಮತ್ತು ಶ್ರೀಮಂತ ಆಸ್ತಿ. ಸೂಕ್ತವಾದ ಹೂಡಿಕೆಯೊಂದಿಗೆ ಬೇಗನೆ ಲಾಭಗಳಿಕೆ ಆರಂಭಿಸಬಹುದು.

ಭೌತಿಕ ಆಸ್ತಿ ಮಾಲೀಕತ್ವ ಹೊಂದುವುದು ಅಥವಾ ಯಾವುದೇ ಆಸ್ತಿಯ ಮಾಲೀಕತ್ವ ಹೊಂದದೆಯೂ ಹೂಡಿಕೆ ಮಾಡುವುದು ರಿಯಲ್ ಎಸ್ಟೇಟ್‌ನಲ್ಲಿ ಸಾಧ್ಯ. ಯುವ ಜನರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬಹುದಾದ ಮತ್ತು ದೀರ್ಘಾವಧಿಯ ಸಂಪತ್ತು ಸೃಷ್ಟಿಸುವ ಅತ್ಯುತ್ತಮ ವಿಧಾನಗಳು ಇಲ್ಲಿವೆ.

ನೆಟ್‌ವರ್ಕಿಂಗ್
ಮಾರ್ಗದರ್ಶನ ಪಡೆಯುವುದು ಮತ್ತು ನಿಮ್ಮ ಸ್ಥಳೀಯ ರಿಯಲ್ ಎಸ್ಟೇಟ್ ನೆಟ್ವರ್ಕಿಂಗ್ ಗುಂಪುಗಳನ್ನು ಸೇರಿಕೊಳ್ಳುವುದು ಆರಂಭದಲ್ಲಿ ಅತ್ಯಗತ್ಯ. ದೊಡ್ಡ ನೆಟ್‌ವರ್ಕ್‌ ಸೇರಿಕೊಳ್ಳುವುದರಿಂದ ಅನೇಕ ಲಾಭಗಳಿವೆ. ಅನನುಭವದ ಕಾರಣ ನಿಮ್ಮ ಸುತ್ತಲಿನ ಅನೇಕರನ್ನು ಅವಲಂಬಿಸಬೇಕಾಗುತ್ತದೆ ಮತ್ತು ಅನುಭವಿಗಳ ನೆರವು ಪಡೆಯಬೇಕಾಗುತ್ತದೆ. ಅದು ದುಬಾರಿ ತಪ್ಪು ಮಾಡುವುದರಿಂದ ನಿಮ್ಮನ್ನು ತಡೆಯುತ್ತದೆ ಮತ್ತು ಬೇಗನೆ ಕಲಿಯಲು ಸಹಕಾರಿ ಆಗುತ್ತದೆ.

ಮನೆ ಖರೀದಿ
ಮನೆ ಖರೀದಿ ಮಾಡುವುದು ಒಂದು ಒಳ್ಳೆಯ ವಿಧಾನ. ಆದರೆ ಡೌನ್‌ ಪೇಮೆಂಟ್‌ಗೆ ಸಾಕಾಗುವಷ್ಟು ಹಣ ಉಳಿತಾಯ ಮಾಡುವುದೇ ದೊಡ್ಡ ಸವಾಲು. ಒಮ್ಮೆ ಮನೆ ನಿಮ್ಮದಾದರೆ ನಂತರ ಅದನ್ನು ಬಾಡಿಗೆ ಕೊಡುವ ಮೂಲಕ ಮತ್ತೆ ಎಲ್ಲವನ್ನೂ ಸರಿದಾರಿಗೆ ತರಬಹುದು. ಬಾಡಿಗೆ ಆದಾಯದಿಂದ ಸಾಲದ ಕಂತು ತುಂಬಬಹುದು.

ಸಾತ್ವಿಕ ರಿಯಲ್‌ ಎಸ್ಟೇಟ್‌ ಹೂಡಿಕೆ
ಮನೆ ಖರೀದಿ ಹೊರತಾಗಿಯೂ ರಿಯಲ್‌ ಎಸ್ಟೇಟ್‌ನಲ್ಲಿ ಸಾಕಷ್ಟು ಸಾತ್ವಿಕ ಹೂಡಿಕೆ ಅವಕಾಶಗಳಿವೆ. ಆರ್‌ಇಐಟಿ, ರಿಯಲ್‌ ಎಸ್ಟೇಟ್ ನಿಧಿ, ಅಡಮಾನ ಖಾತರಿಗಳು ತ್ವರಿತ ಮತ್ತು ಸುಲಭವಾಗಿ ಆದಾಯ ತರಬಹುದು. ಇಲ್ಲಿಯೂ ದೀರ್ಘಾವಧಿಗೆ ಹೂಡಿಕೆ ಮಾಡಿದಂತೆ ಲಾಭವೂ ಹೆಚ್ಚಾಗುತ್ತದೆ.

ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ (ಆರ್‌ಇಐಟಿ)
ಆರ್‌ಇಐಟಿ, ರಿಯಲ್ ಎಸ್ಟೇಟ್ ಸ್ವತ್ತುಗಳ ಮಾಲೀಕತ್ವ ಹೊಂದಿದವರಿಂದಲೇ ನಿರ್ವಹಿಸುವ, ಕಾರ್ಯಾಚರಿಸುವ ಮತ್ತು ಲಾಭ ಪಡೆಯುವ ವಿಶೇಷ ವ್ಯವಹಾರ. ಹೆಚ್ಚಿನ ಆರ್‌ಇಐಟಿಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಕಡಿಮೆ ಹೂಡಿಕೆಯೊಂದಿಗೆ, ಆನ್‌ಲೈನ್ ವ್ಯವಹಾರಕ್ಕೆ ಅವಕಾಶ ನೀಡುತ್ತವೆ. ಸಾಂಪ್ರದಾಯಿಕ ರಿಯಲ್‌ ಎಸ್ಟೇಟ್ ವಹಿವಾಟಿಗೆ ಬದ್ಧರಾಗದೆ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿಯೇ ವೈವಿಧ್ಯಮಯ ಹೂಡಿಕೆ ಮಾಡಬಯಸುವ ಯುವ ಹೂಡಿಕೆದಾರರಿಗೆ ಇದು ಅತ್ಯುತ್ತಮ ಆಯ್ಕೆ.

ಪೋರ್ಟ್ಫೋಲಿಯೊವನ್ನು ವೈವಿಧ್ಯಗೊಳಿಸಿ
ಯುವ ಹೂಡಿಕೆದಾರರು ವಾಣಿಜ್ಯ, ವಸತಿ ಮತ್ತು ಚಿಲ್ಲರೆ ರಿಯಲ್‌ ಎಸ್ಟೇಟ್‌ಗಳಲ್ಲಿ ಹಣ ತೊಡಗಿಸುವ ಮೂಲಕ ತಮ್ಮ ಹೂಡಿಕೆಯನ್ನು ವೈವಿಧ್ಯಮಯಗೊಳಿಸಬೇಕು. ಅದರಿಂದಾಗಿ ಅಪಾಯಗಳನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚುತ್ತದೆ ಮತ್ತು ಮಾರುಕಟ್ಟೆ ಏರಿಳಿತಗಳಿಂದ ರಕ್ಷಣೆ ನೀಡುತ್ತವೆ. ವಾಣಿಜ್ಯ ರಿಯಲ್ ಎಸ್ಟೇಟ್ ಸ್ವತ್ತುಗಳು ಆದಾಯದ ವಿಚಾರದಲ್ಲಿ ವಸತಿ ಸ್ವತ್ತುಗಳನ್ನು ಮೀರಿಸುತ್ತದೆ.