22.1 C
Bengaluru
Thursday, November 14, 2024

ವಿಧಾನಸೌಧ, ವಿಕಾಸಸೌಧ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ: ಗೃಹ ಸಚಿವ

ಬೆಂಗಳೂರು, ಫೆ. 13 : ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಪ್ರವೇಶ ನೀಡುವವರ ಪ್ರತಿಯೊಬ್ಬರ ಮೇಲೂ ಕಣ್ಗಾವಲು ಇರುತ್ತದೆ. ವಿಧಾನ ಸೌಧ ಹಾಗೂ ವಿಕಾಸ ಸೌಧದ ಸುರಕ್ಷತೆ ಹಿನ್ನೆ ಬರುವ ಪ್ರತಿಯೊಬ್ಬರನ್ನೂ ಚೆಕ್‌ ಮಾಡಿಯೇ ಒಳಗೆ ಬಿಡಲಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದ್ದಾರೆ.

ಸದನದಲ್ಲಿ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಕಲಾಪದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಸದಸ್ಯ ಶ್ರೀ ಗೋವಿಂದರಾಜು ಅವರು ಹಾಜರಾಗಿದ್ದರು. ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಶ್ರೀ ಗೋವಿಂದರಾಜು ವಿಧಾನ ಸೌಧ ಹಾಗೂ ವಿಕಾಸ ಸೌಧದ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದರು. ಕಲಾಪಕ್ಕೆ ಆಗಮಿಸಿದ್ದ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ಸದಸ್ಯ ಶ್ರೀ ಗೋವಿಂದರಾಜು ರವರ ಪ್ರಶ್ನೆಗೆ ಉತ್ತರ ನೀಡಿದರು.

ವಿಧಾನ ಸೌಧ ಹಾಗೂ ವಿಕಾಸ ಸೌಧ ಕಟ್ಟಡಗಳಲ್ಲಿ ಪ್ರವೇಶ ದ್ವಾರಗಳ ಬಳಿ ತಪಾಸಣಾ ಯಂತ್ರೋಪಕರಣಗಳನ್ನು ಅಳವಡಿಸಲಾಗಿವೆ. ಅವು ಈಗ ಹಳೆಯದಾಗಿದ್ದು, ಅವುಗಳನ್ನು ಬದಲಾಯಿಸಲಾಗುತ್ತಿದೆ. ಎರಡೂ ಕಟ್ಟಡಗಳಿಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಎಲ್ಲಾ ರಕ್ಷಣಾ ಪ್ರೋಟೋಕಾಲ್‌ ನಿಯಮದಂತೆಯೇ ತಪಾಸಣೆಯನ್ನು ಮಾಡಲಾಗುತ್ತಿದೆ. ದಿನದ 24ಗಂಟೆಗಳ ಕಾಲವೂ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಎಲ್ಲರನ್ನು ಪರೀಕ್ಷಿಸಿ ಒಳಗೆ ಬಿಡುತ್ತಾರೆ ಎಂದು ಹೇಳಿದರು.

ಯಂತ್ರೋಪಕರಣಗಳೆಲ್ಲವೂ ಹಳೆಯ ಕಾಲದ್ದಾಗಿರುವುದರಿಂದ ನೂತನ ತಪಾಸಣ ಯಂತ್ರೋಪಕರಣಗಳನ್ನು ಅಳವಡಿಸಲು ಟೆಂಡರ್‌ ಕರೆಯಲಾಗಿದೆ ಎಂದು ಸದಸ್ಯರಿಗೆ ಮಾಹಿತಿಯನ್ನು ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರು ಕಲಾಪದಲ್ಲಿ ನೀಡಿದರು. ವಿಕಾಸಸೌಧ ಹಾಗೂ ವಿಧಾನಸೌಧ ಬಹುಮಹಡಿ ಕಟ್ಟಡಗಳಿಗೆ ನಿತ್ಯ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಸಾವಿರಾರು ಮಂದಿ ಪ್ರವೇಶಿಸುತ್ತಿರುತ್ತಾರೆ. ಪೊಲೀಸರು ಇವರನ್ನೆಲ್ಲಾ ತಪಾಸಣಗೆ ಒಳಪಡಿಸುತ್ತಾರೆ.

Related News

spot_img

Revenue Alerts

spot_img

News

spot_img