ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ,

0
120

ಪ್ರತಿಷ್ಠಿತ ಫೋರ್ಬ್ಸ್ (Forbes) ಪತ್ರಿಕೆಯು 100 ಶ್ರೀಮಂತ ಭಾರತೀಯರ ಪಟ್ಟಿಯನ್ನು (100 richest Indians) ಬಿಡುಗಡೆ ಮಾಡಿದೆ. ಅದರಲ್ಲಿ ಟಾಪ್ 10 ಮಂದಿಯ ಹೆಸರನ್ನು ಇಲ್ಲಿ ನೀಡಲಾಗಿದೆ. ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.ಗೌತಮ್‌ ಅದಾನಿ ಮತ್ತು ಕುಟುಂಬವು ದೇಶದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.ಭಾರತದ ಬಹುತೇಕ ಉದ್ಯಮಿಗಳು ಈ ವರ್ಷ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಸಂಚಿತ ಸಂಪತ್ತು 800 ಬಿಲಿಯನ್‌ ಡಾಲರ್‌ಗೆ ಬೆಳೆಯುತ್ತಿದೆ. ಅಗ್ರ 10 ಶ್ರೀಮಂತರು ಸಂಚಿತ 385 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ.

ಮುಕೇಶ್ ಅಂಬಾನಿ,;
2008ರಿಂದ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಉಳಿದಿದ್ದು, ಅವರ ನಿವ್ವಳ ಮೌಲ್ಯ 92.7 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಂಬಾನಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್​ನಿಂದ 10 ಬಿಲಿಯನ್ ಹೂಡಿಕೆಯನ್ನು ನವೀಕರಿಸಬಹುದಾದ ಇಂಧನಕ್ಕೆ ಹಾಕುವ ಬಗ್ಗೆ ವಿವರಿಸಿದ್ದರು.ಮುಕೇಶ್ ಅಂಬಾನಿ ಅವರು ಸತತವಾಗಿ ಹತ್ತು ವರ್ಷಗಳಿಂದ ‘ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ.ರಿಯಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿ ಒಟ್ಟು ಆದಾಯ ₹ 7.18 ಲಕ್ಷ ಕೋಟಿ ,ಹಾಗೂ ಒಂದು ದಿನದ ಆದಾಯ ₹163 ಕೋಟಿ ಆಗಿದೆ

ಅದಾನಿ ಗ್ರೂಪ್‌ನ ಗೌತಮ್ ಅದಾನಿ;
ಸತತ ಮೂರನೇ ವರ್ಷ ನಂ. 2ನೇ ಸ್ಥಾನದಲ್ಲಿದ್ದಾರೆ. 60 ವರ್ಷದ ಗೌತಮ್ ಅದಾನಿ ಅವರ ನಿವ್ವಳ ಆದಾಯ 150 ಬಿಲಿಯನ್ ಡಾಲರ್ ಆಗಿದೆ. ಅದಾನಿ ಗ್ರೂಪ್ ಗುಜರಾತ್‌ನ ಮುಂದ್ರಾದಲ್ಲಿ ಭಾರತದ ಅತಿದೊಡ್ಡ ಬಂದರನ್ನು ನಿಯಂತ್ರಿಸುತ್ತದೆ. ಗೌತಮ್‌ ಅದಾನಿ (59) ಅದಾನಿ ಕಂಪನಿ ಒಟ್ಟು ಆದಾಯ 5.05 ಲಕ್ಷ ಕೋಟಿ,ಹಾಗೂ ಒಂದು ದಿನದ ಆದಾಯ ₹1002 ಕೋಟಿ, ಆಗಿದೆ

ಎಚ್​ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್;
ತಮ್ಮ ನಿವ್ವಳ ಮೌಲ್ಯದಲ್ಲಿ 10.6 ಬಿಲಿಯನ್ ಡಾಲರ್ ಹೆಚ್ಚಳವನ್ನು ಕಂಡಿದ್ದಾರೆ.ಎಚ್‌ಸಿಎಲ್‌ ಕಂಪನಿ ಒಟ್ಟು ಆದಾಯ ₹ 2.36 ಲಕ್ಷ ಕೋಟಿಹಾಗೂ ಒಂದು ದಿನದ ಆದಾಯ ₹260 ಕೋಟಿ ಆಗಿದೆ

ರಾಧಾಕಿಶನ್ ದಮಾನಿ ;
ಅವೆನ್ಯೂ ಸೂಪರ್‌ಮಾರ್ಟ್ಸ್‌ನ ಮಾಲೀಕ,ಇವರ ನಿವ್ವಳ ಆದಾಯ 27.6 ಬಿಲಿಯನ್ ಡಾಲರ್ ಆಗಿದೆ. ಫ್ಯಾಷನ್ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಹೆಸರುವಾಸಿಯಾದ ಡಿಮಾರ್ಟ್ ಸರಣಿಯ ಸೂಪರ್ ಮಾರ್ಕೆಟ್ ಹೊಂದಿರುವ ರಾಧಾಕಿಶನ್ ದಮಾನಿ, 2002 ರಲ್ಲಿ ಒಂದು ಅಂಗಡಿಯೊಂದಿಗೆ ಚಿಲ್ಲರೆ ವ್ಯಾಪಾರವನ್ನು ಪ್ರವೇಶಿಸಿದರು. ಈಗ ಭಾರತದಲ್ಲಿ 271 ಡಿಮಾರ್ಟ್ ಸ್ಟೋರ್‌ಗಳಿವೆ

ಸೈರಸ್ ಪೂನಾವಾಲಾ;
ಖಾಸಗಿ ಕಂಪನಿಯು ಅಸ್ಟ್ರಾಜೆನೆಕಾದ ಪರವಾನಗಿ ಅಡಿಯಲ್ಲಿ ಕೋವಿಶೀಲ್ಡ್ ಅನ್ನು ತಯಾರಿಸುತ್ತದೆ ಮತ್ತು ಇತರ ಕೊವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ.ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಕಂಪನಿ ಒಟ್ಟು ಆದಾಯ ₹ 1.63 ಲಕ್ಷ ಕೋಟಿ ,ಹಾಗೂ ಒಂದು ದಿನದ ಆದಾಯ ₹190 ಕೋಟಿ

ಸಾವಿತ್ರಿ ಜಿಂದಾಲ್;
72 ವರ್ಷದ ಇವರ ನಿವ್ವಳ ಆದಾಯ 16.4 ಬಿಲಿಯನ್ ಡಾಲರ್. ಸಾವಿತ್ರಿ ಜಿಂದಾಲ್ ಅವರು OP ಜಿಂದಾಲ್ ಗ್ರೂಪ್‌ನ ಎಮೆರಿಟಸ್ ಅಧ್ಯಕ್ಷರಾಗಿದ್ದಾರೆ. ಅವರು ಟಾಪ್ 10 ರಲ್ಲಿ ಏಕೈಕ ಮಹಿಳಾ ಬಿಲಿಯನೇರ್ ಮತ್ತು ಸಕ್ರಿಯ ರಾಜಕಾರಣಿಯಾಗಿದ್ದಾರೆ.

ದಿಲೀಪ್ ಸಾಂಘ್ವಿ;
ಅವರು ಸನ್ ಫಾರ್ಮಾಸ್ಯುಟಿಕಲ್ಸ್‌ನ ಸಂಸ್ಥಾಪಕರಾಗಿದ್ದಾರೆ. ಇದು 40ಕ್ಕೂ ಹೆಚ್ಚು ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ ಮತ್ತು 100 ಕ್ಕೂ ಹೆಚ್ಚು ದೇಶಗಳಿಗೆ ಸೇವೆ ಸಲ್ಲಿಸುತ್ತದೆ. 125,184.21 ಕೋಟಿ ನಿವ್ವಳ ಮೌಲ್ಯದೊಂದಿಗೆ, ಸಾಂಘ್ವಿ ಅವರು ಸನ್ ಫಾರ್ಮಾ ಅಡ್ವಾನ್ಸ್ಡ್ ರಿಸರ್ಚ್ ಮತ್ತು ಬಯೋಲೈಟ್ ಲೈಫ್ ಸೈನ್ಸಸ್‌ನಲ್ಲಿ ಪಾಲು ಹೊಂದಿದ್ದಾರೆ.

ಹಿಂದೂಜಾ ಬ್ರದರ್ಸ್;
ನಾಲ್ವರು ಒಡಹುಟ್ಟಿದವರಾದ ಶ್ರೀಚಂದ್, ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್ ಅವರು ಬಹುರಾಷ್ಟ್ರೀಯ ಸಮೂಹವನ್ನು ನಿಯಂತ್ರಿಸುತ್ತಾರೆ.ಒಟ್ಟು ಸಂಪತ್ತು 122,761.29 ಕೋಟಿ ರೂ. 108 ವರ್ಷ ಇತಿಹಾಸ ಹೊಂದಿರುವ ಇವರ ಗ್ರೂಪ್, ವಾಹನ, ತೈಲ, ವಿಶೇಷ ರಾಸಾಯನಿಕಗಳು, ಬ್ಯಾಂಕಿಂಗ್ ಮತ್ತು ಹಣಕಾಸು, IT ಮತ್ತು ITeS, ಆರೋಗ್ಯ, ಮಾಧ್ಯಮ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ 11 ಕ್ಷೇತ್ರಗಳಲ್ಲಿ ಪ್ರಸ್ತುತವಾಗಿದೆ.

ಕುಮಾರ್ ಬಿರ್ಲಾ:
15 ಬಿಲಿಯನ್ ಡಾಲರ್‌ನೊಂದಿಗೆ ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರಮಂಗಲಂ ಬಿರ್ಲಾ 9ನೇ ಸ್ಥಾನ ಪಡೆದಿದ್ದಾರೆ. ಕುಮಾರ್ ಬಿರ್ಲಾ ಅವರು ಜವಳಿ-ಸಿಮೆಂಟ್ ಸಂಘಟಿತ ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಆದಿತ್ಯಾ ಬಿರ್ಲಾ ಕಂಪನಿ ಒಟ್ಟು ಆದಾಯ 1.22 ಲಕ್ಷ ಕೋಟಿ,₹242 ಕೋಟಿ

ಬಜಾಜ್ ಕುಟುಂಬ;
ಬಜಾಜ್ ಕುಟುಂಬವು ಬಜಾಜ್ ಗ್ರೂಪ್ ಅಡಿಯಲ್ಲಿ 40 ಕಂಪನಿಗಳ ಜಾಲವನ್ನು ಹೊಂದಿದೆ. 96 ವರ್ಷ ವಯಸ್ಸಿನ ಕುಟುಂಬ ನೇತೃತ್ವದ ವ್ಯಾಪಾರವನ್ನು ಮುಂಬೈನಲ್ಲಿ ಜಮ್ನಾಲಾಲ್ ಬಜಾಜ್ ಅವರು 1926 ರಲ್ಲಿ ಪ್ರಾರಂಭಿಸಿದರು. ರೂ 117,915.45 ಕೋಟಿ ನಿವ್ವಳ ಮೌಲ್ಯದೊಂದಿಗೆ, ಕುಟುಂಬದ ಪ್ರಮುಖ ಕಂಪನಿ ಬಜಾಜ್ ಆಟೋ ವಿಶ್ವದ ನಾಲ್ಕನೇ ಅತಿದೊಡ್ಡ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾಗಿ ಸ್ಥಾನ ಪಡೆದಿದೆ