25.4 C
Bengaluru
Saturday, July 27, 2024

ಡ್ರೋನ್ ಪ್ರತಾಪ್ ಬಿಗ್ ಬಾಸ್ ಗೆ ಬಂದ್ಮೇಲೆ ಫ್ಯಾನ್ ಬೇಸ್ ಜಾಸ್ತೀ ಆಯ್ತಾ..?

ಕಳೆದ ವರ್ಷದಲ್ಲಿ ಡ್ರೋನ್ ಪ್ರತಾಪ್ ತಮ್ಮ ಜೀವನದಲ್ಲಿ ಹಲವಾರು ಏಳುಬೀಳುಗಳನ್ನ ಕಂಡಿದ್ದಾರೆ. ಆದರೆ ಇತ್ತೀಚಿಗೆ ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ “ಬಿಗ್ ಬಾಸ್” ಶೋ ಗೆ ಬಂದಮೇಲೆ ಡ್ರೋನ್ ಪ್ರತಾಪ್ ತಮ್ಮ ಮೇಲೆ ಜನ ಹೊಂದಿದ್ದ ಋಣಾತ್ಮಕ ನಿಲುವುಗಳನ್ನ ಬದಲಾಯಿಸುವಲ್ಲಿ ಸಾಕಷ್ಟು ಯಶ್ವಸಿಯಾಗಿದ್ದಾರೆ. ಅಲ್ಲದೇ ಡ್ರೋನ್ ಪ್ರತಾಪ್ ಕಿಚ್ಚನ ಚಪ್ಪಾಳೆ ಗಿಟ್ಟಸಿಕೊಳ್ಳುವ ಮೂಲಕ ಎಲ್ಲರ ಮನ ಗೆದ್ದಿದ್ದರು.

ಕಾಗೆ ಹಾರಿಸುತ್ತಾನೆ ಎಂದವರ ಬಾಯಲ್ಲೇ ಭೇಷ್ ಗಿರಿ ಪಡೆದ ಪ್ರತಾಪ್…!

ತಾನೂ ಅಷ್ಟು ಡ್ರೋನ್ ಕಂಡು ಹಿಡಿದಿದ್ದೇನೆ, ಯುವ ವಿಜ್ಞಾನಿ ಎಂದೆಲ್ಲಾ ಪುಂಗಿದ್ದ ಪ್ರತಾಪ್, ಅದೆಲ್ಲಾ ಸುಳ್ಳು ಎಂದು ಗೊತ್ತಾದ ಮೇಲೆ ಸಾಕಷ್ಟು ನಗೆಪಾಟಲಿಗೀಡಾಗಿದ್ದರು. ಹಾಗಾಗಿ ಸಾಮಾಜಿಕ ಮಾಧ್ಯಮದಿಂದ ಒಂಚೂರು ಬ್ರೇಕ್ ಪಡೆದು, ಇತ್ತೀಚಿಗೆ ತನ್ನದೆ ಸ್ವಂತ ಉದ್ಯಮ ಸ್ಥಾಪಿಸಿ ಒಂದಷ್ಟು ಹೆಸರು ಮಾಡತೊಡಗಿದ್ದ. ಜನಪ್ರಿಯ ಶೋ ಬಿಗ್ ಬಾಸ್ ನಲ್ಲಿ ಆಡಲು ನಿರ್ಣಯಿಸಿದ ಡ್ರೋನ್ ಪ್ರತಾಪ್ ಇದೀಗ ತನ್ನದೆ ಆದ ಛಾಪು ಮೂಡಿಸುವುದರ ಮುಖಾಂತರ ತನ್ನನ್ನು ಸಾಕಷ್ಟು ಟ್ರೋಲ್ ಮಾಡಿದ್ದ ಊರು, ಸಂಬಂಧಿಕರು, ಟ್ರೋಲ್ ಪೇಜಸ್ ಇಂದಲೇ ಶಹಬ್ಬಾಷ್ ಗಿರಿ ಪಡೆದಿದ್ದಾರೆ.

ಡ್ರೋನ್ ಪ್ರತಾಪ್ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ಗಳು ಕ್ರಿಯೇಟ್..!

ಇನ್ನು ಬಿಗ್ ಬಾಸ್ ನಲ್ಲಿ ತನ್ನ ಅಮಾಯಕತೆ, ಮುಗ್ಧತೆ, ನೇರ ಮಾತಿನಿಂದಲೇ ಎಲ್ಲರ ಮುಂದೆ ಇರುವುದನ್ನು ಇರುವಂತೆಯೇ ಮಾತನಾಡುವ ಗುಣವನ್ನು ಕಂಡು ರಾಜ್ಯದ ಜನತೆ ಡ್ರೋನ್ ಪ್ರತಾಪ್ ರನ್ನ ಹಾಡಿಹೊಗಳುತ್ತಿದ್ದಾರೆ. ಹೀಗಾಗಿ ಈತನ ಹೆಸರಿನಲ್ಲಿ ಹಲವಾರು ಫ್ಯಾನ್ ಪೇಜ್ ಕ್ರಿಯೇಟ್ ಆಗಿರುವುದಲ್ಲದೇ ಸಾಕಷ್ಟು ಸದ್ದು ಮಾಡುತ್ತಿವೆ. ತನ್ನ ಅಸಲಿ ಮುಗ್ಧತೆಯ ಬಣ್ಣವನ್ನ ಪ್ರತಾಪ್ ಸಾಬೀತು ಪಡೆಸಿರುವುದು ಸಾಕಷ್ಟು ಘಟನೆಗಳಿಂದ ತಿಳಿದು ಬಂದಿದೆ.

ಕಾಗೆ ಎಂದು ಮೊದಲಿಸಿದವರಿಗೆ ಡ್ರೋನ್ ಪ್ರತಾಪ್ ಬಿಗ್ ಬಾಸ್ ಗೆದ್ದು ಉತ್ತರ ಕೊಡ್ತಾರಾ..?

ತನ್ನನು ಸಾಕಷ್ಟು ಜನ ತನ್ನ ಕೆಟ್ಟ ಘಳಿಗೆ ಬಂದ ಸಮಯದಲ್ಲಿ ತನ್ನನು ಜರಿದ ರೀತಿ, ಆಡಿದ ಮಾತು ಇವೆಲ್ಲವನ್ನೂ ಪ್ರತಾಪ್ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಹೊರಹಾಕಿದ್ದಾರೆ. ಆಕೆಟ್ಟ ಘಟನೆಗಳನ್ನು ನೆನೆದು ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಈ ರೀತಿ ಅವರಿಗೆ ನೋವುಂಟು ಮಾಡಿದವರಿಗೆಲ್ಲಾ ತಕ್ಕ ಉತ್ತರ ಕೊಟ್ಟಿರುವ ಪ್ರತಾಪ್, ಈ ಬಾರಿ ಬಿಗ್ ಬಾಸ್ ಗೆಲ್ಲುವ ಮೂಲಕ ಉತ್ತರ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಚೈತನ್ಯ, ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img