Sign in
  • Home
  • RF-English
  • News
  • Housing Projects
  • Vastu
  • Home Decor
  • Revenuepedia
  • Finance
  • Revenue Alerts
  • ₹ – Services
Sign in
Welcome!Log into your account
Forgot your password?
Password recovery
Recover your password
Search
Facebook
Instagram
Telegram
Twitter
WhatsApp
Youtube
Facebook
Instagram
Telegram
Twitter
WhatsApp
Youtube
Facebook
Telegram
Twitter
WhatsApp
Youtube
Home Finance ಈ ಬ್ಯಾಂಕ್ ಖಾತೆ ಬಗ್ಗೆ ನಿಮಗೆ ಮಾಹಿತಿ ಇದೆಯಾ..?
  • Finance

ಈ ಬ್ಯಾಂಕ್ ಖಾತೆ ಬಗ್ಗೆ ನಿಮಗೆ ಮಾಹಿತಿ ಇದೆಯಾ..?

By
RF Desk
-
July 21, 2023
0
129
Facebook
Telegram
WhatsApp

    ಬೆಂಗಳೂರು, ಜು. 21 : ಸಂಬಳವನ್ನು ಕಂಪನಿಗಳು ಅಕೌಂಟ್ ಗಳಿಗೆ ನೇರವಾಗಿ ಟ್ರಾನ್ಸ್ ಫರ್ ಮಾಡಿ ಬಿಡುತ್ತವೆ. ಅದರಲ್ಲೂ ಕಂಪನಿಗಳು ಬ್ಯಾಂಕ್ ವಹಿವಾಟುಗಳು ಸುಲಭವಾಗಲಿ ಎಂದು ತಮ್ಮ ಉದ್ಯೋಗಿಗಳಿಗೆ ಸ್ಯಾಲರೀಡ್ ಅಕೌಂಟ್ ಎಂದು ತೆಗೆಯಲಾಗುತ್ತದೆ. ಅದೇ ಅಕೌಂಟ್ ಗೆ ಪ್ರತಿ ತಿಂಗಳೂ ಸಂಬಳದ ಹಣವನ್ನು ವರ್ಗಾಯಿಸಲಾಗುತ್ತದೆ. ಇದನ್ನೇ ಸ್ಯಾಲರಿ ಖಾತೆ ಎಂದು ಹೇಳುವುದು. ಈ ಸ್ಯಾಲರಿ ಖಾತೆಯಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಹಾಗಾದರೆ ಈ ಸ್ಯಾಲರಿ ಖಾತೆಯಿಂದ ಯಾವೆಲ್ಲಾ ಉಪಯೋಗಗಳಿವೆ ಎಂಬ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ..

    ಕಂಪನಿಯಿಂದ ತೆರೆಯುವ ಸ್ಯಾಲರಿ ಖಾತೆ ಸಾಮಾನ್ಯ ಉಳಿತಾಯ ಖಾತೆಗಿಂತಲೂ ಕೊಂಚ ವಿಭಿನ್ನವಾದದ್ದು. ಇದು ಸಾಮಾನ್ಯ ಉಳಿತಾಯ ಖಾತೆಯಂತೂ ಬಳಸಬಹುದು. ಸ್ಯಾಲರಿ ಖಾತೆಯನ್ನು ಝೀರೋ ಅಕೌಂಟ್ ಆಗಿ ತೆರೆಯಬಹುದು. ಇದನ್ನು ತೆರೆಯಲು ಮಿನಿಮಮ್ ಬ್ಯಾಲೆನ್ಸ್ ನ ಅವಶ್ಯಕತೆ ಇರುವುದಿಲ್ಲ. ಮೂರು ತಿಂಗಳ ಕಾಲ ಈ ಅಕೌಂಟ್ ನಲ್ಲಿ ಯಾವುದೇ ಹಣವಿಲ್ಲದಿದ್ದರೂ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಅದೇ ವಯಕ್ತಿಕ ಖಾತೆಯಲ್ಲಿ ಹಣ ಖಾಲಿಯಾದರೆ ಶುಲ್ಕ ಕಟ್ಟಬೇಕಾಗುತ್ತದೆ. ಹಾಗಾಗಿ ಸ್ಯಾಲರಿ ಖಾತೆಯನ್ನು ಹಾಗೆ ಉಳಿಸಿಕೊಳ್ಳುವುದು ನಿಮಗೆ ಒಳ್ಳೆಯದು.

    ಇನ್ನು ಸ್ಯಾಲರಿ ಖಾತೆಯ ಎಟಿಎಂ ಬಳಕೆಯೂ ಕೂಡ ಗ್ರಹಾಕ ಸ್ನೇಹಿಯಾಗಿದೆ. ಸ್ಯಾಲರಿ ಖಾತೆಯ ಎಟಿಎಂ ವಹಿವಾಟಿಗೆ ಯಾವುದೇ ಶುಲ್ಕವಿರುವುದಿಲ್ಲ. ಎಟಿಎಂ ಉಚಿತ ಹಾಗೂ ಅನಿಯಮಿತ ವಹಿವಾಟನ್ನು ಮಾಡಬಹುದಾಗಿದೆ. ವಯಕ್ತಿಕ ಉಳಿತಾಯ ಖಾತೆಗಳ ಎಟಿಎಂ ವಹಿವಾಟಿಗೆ ಮಿತಿ ಹೇರಲಾಗಿರುತ್ತದೆ. ಮಿತಿಗಿಂತಲೂ ಹೆಚ್ಚು ವಹಿವಾಟು ನಡೆಸಿದರೆ, ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ಮಿತಿಯನ್ನು ಕೆಲವೊಮ್ಮೆ ಸ್ಯಾಲರಿ ಖಾತೆಗೂ ಇರುತ್ತದೆ. ಈ ಬಗ್ಗೆ ಮಾಹಿತಿಯನ್ನು ತಿಳಿದು ವಹಿವಾಟು ನಡೆಸುವುದು ಸೂಕ್ತ.

    ಇದರೊಂದಿಗೆ ಸ್ಯಾಲರಿ ಖಾತೆಯನ್ನು ಹೊಂದಿದ್ದರೆ, ಅದು ನಿಮಗೆ ಚೆಕ್ ಬುಕ್ ನೀಡುತ್ತದೆ. ಈ ಚೆಕ್ ಪುಸ್ತಿಕದ ಮೂಲಕ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ನೀವು ಸ್ಯಾಲರಿ ಖಾತೆಯನ್ನು ಹೊಂದಿದ್ದರೆ, ಆದಷ್ಟು ಬೇಗ ಚೆಕ್ ಬುಕ್ ಅನ್ನು ಪಡೆದುಕೊಳ್ಳಿ. ಇದರಿಂದ ನೀವು ಸಾಕಷ್ಟು ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಮರೆಯದೇ ಚೆಕ್ ಬುಕ್ ಅನ್ನು ಪಡೆಯಿರಿ. ಇನ್ನು ಸ್ಯಾಲರಿ ಅಕೌಂಟ್ ಇರುವವರಿಗೆ ಉಚಿತ ಸ್ಟೇಟ್ ಮೆಂಟ್ ಇ—ಮೇಲ್ ಮೂಲಕ ಉಚಿತವಾಗಿ ಬರುತ್ತದೆ.

    ಇವುಗಳ ಜೊತೆಗೆ ಸ್ಯಾಲರಿ ಖಾತೆಯನ್ನು ಹೊಂದಿರುವವರಿಗೆ ಬ್ಯಾಂಕಿಂಗ್ ಸೇವೆ, ಕ್ರೆಡಿಟ್ ಕಾರ್ಡ್ ಸೇವೆಗಳು ಲಭ್ಯವಿರುತ್ತದೆ. ಇವುಗಳನ್ನು ಮಿಸ್ ಮಾಡದೇ ಪಡೆದುಕೊಳ್ಳಿ. ಇದರೊಂದಿಗೆ, ಬ್ಯಾಂಕ್ ಲಾಕರ್ ಸೇವೆಯನ್ನೂ ಒದಗಿಸುತ್ತವೆ. ಸ್ಯಾಲರಿ ಅಕೌಮಟ್ ಇರುವವರಿಗೆ ಕೆಲ ಬ್ಯಾಂಕ್ ಗಳು ಲಾಕರ್ ಶುಲ್ಕವನ್ನು ಮನ್ನಾ ಮಾಡುತ್ತದೆ. ಇನ್ನು ಎಸ್ ಬಿಐ ಬ್ಯಾಂಕ್ ನಲ್ಲಿ ನಿಮ್ಮ ಸ್ಯಾಲರಿ ಅಕೌಂಟ್ ಇದ್ದರೆ, ಇದು ಬ್ಯಾಂಕ್ ಲಾಕರ್ ಸೇವೆ ಮೇಲೆ ಶೇ.25ರಷ್ಟು ಶುಲ್ಕವನ್ನು ಕಡಿಗೊಳಿಸುತ್ತದೆ. ಆದರೆ ಒಂದನ್ನು ನೆನಪಿಡಿ. ನಿಮ್ಮ ಖಾತೆಗೆ ಸ್ಯಾಲರಿ ಬರುವುದು ನಿಂತ ತಿಂಗಳೀನಿಂದಲೇ ಎಲ್ಲಾ ಸೇವೆಗಳನ್ನು ಬ್ಯಾಂಕ್ ಗಳು ಹಿಂಪಡೆಯುತ್ತವೆ.

    • TAGS
    • bank
    • new
    • Revenuefacts
    • salary account
    • savings
    • tips
    • ಉಪಯೋಗಗಳು
    • ಬ್ಯಾಂಕ್
    • ರೆವಿನ್ಯೂಫ್ಯಾಕ್ಟ್ಸ್
    • ಸಲಹೆಗಳು
    • ಸುದ್ದಿ
    • ಸ್ಯಾಲರಿ ಖಾತೆ
    • ಹಣಕಾಸು
    Share
    Facebook
    Telegram
    WhatsApp
      Previous articleಮತ್ತೊಂದು ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಲಿಂಕ್..!!
      Next articleಶುಲ್ಕವಲ್ಲ ಮಾರ್ಗಸೂಚಿ ದರ ಹೆಚ್ಚಳ
      RF Desk
      RF Desk
      http://www.revenuefacts.com
      Facebook Koo Twitter Website

      RELATED ARTICLESMORE FROM AUTHOR

      ದಿನಕ್ಕೆ ರೂ.151 ಪಾವತಿ ಮಾಡಿದ್ರೆ 31 ಲಕ್ಷ ರೂ. ಪಡೆಯಬಹುದು.

      33 ಗುಂಟೆ ಜಮೀನು ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ತಹಶೀಲ್ದಾರ್

      RBI : ಮಾರ್ಚ್ 31 ರಂದು ಎಲ್ಲಾ ಬ್ಯಾಂಕ್‌ಗಳ ಶಾಖೆಗಳನ್ನು ತೆರೆದಿರಲು ಆರ್‌ಬಿಐ ಮಹತ್ವದ ಆದೇಶ

      © 2022 - Revenue Facts. All Rights Reserved.