ಬೆಂಗಳೂರು, ಮಾ. 02 : ಭಾರತೀಯ ವಾಸ್ತು ಶಾಸ್ತ್ರಕ್ಕೂ ಚೀನಾ ದೇಶದ ಫೆಂಗ್ ಶೂಯಿಗೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಚೀನಾ ದೇಶದ ಸಂಪ್ರದಾಯಗಳು ಕೂಡ ನಿನ್ನೆ ಮೊನ್ನೆಯದಲ್ಲ. ಐದು ಸಾವಿರ ವರ್ಷಕ್ಕೂ ಅಧಿಕ ಸಮಯದಿಂದ ಚೀನಾ ಇತಿಹಾಸವಿದೆ ಎಂದು ಹೇಳಲಾಗಿದೆ. ಹಳೆ ಸಂಸ್ಕೃತಿ-ಸಂಪ್ರದಾಯವಾದರೂ, ಕೂಡ ಯಾವುದೇ ವಾಸ್ತುವಾದರೂ ಆ ಸ್ಥಳದ ವಾತಾವರಣಕ್ಕೆ ಸೂಕ್ತವಾಗಿರುತ್ತದೆ. ಇದನ್ನು ಲೊಕೆಶನ್ ಬೇಸ್ಡ್ ವಾಸ್ತು ಎಂದು ಹೇಳಲಾಗುತ್ತದೆ. ಚೀನಾ ದೇಶದವರು ಅಲ್ಲಿಯ ಸ್ಥಳದ ಮೂಲವಾಗಿ ವಾಸ್ತುವನ್ನು ಅಳವಡಿಸಿಕೊಂಡಿರುತ್ತಾರೆ. ಹಾಗೆಯೇ ಭಾರತದಲ್ಲಿ ಪಂಚಭೂತಗಳನ್ನು ಆಧರಿಸಿ ಇಲ್ಲಿ ಸ್ಥಳಕ್ಕೆ ಸೂಕ್ತವಾಗುವಂತಹ ವಾಸ್ತುವನ್ನು ಅಳವಡಿಸಿರಲಾಗುತ್ತದೆ.
ಈಗ ಫೆಂಗ್ ಶೂಯಿ ಎಂದರೆ ಚೀನಾ ದೇಶದ ವಾಸ್ತುವಾಗಿದೆ. ಫೆಂಗ್ ಅಂದರೆ ಗಾಳಿ, ಶೂಯಿ ಎಂದರೆ ನೀರು. ಇವೆರಡನ್ನೂ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಚೈನೀಸ್ ವಾಸ್ತುವಿನಲ್ಲಿ ಅಳವಡಿಸಲಾಗಿದೆ. ಚೀನಾದಲ್ಲಿ ಹೆಚ್ಚಾಗಿ ಬೆಟ್ಟ ಗುಡ್ಡಗಳು ಇವೆ. ಅಲ್ಲೆಲ್ಲಾ ಮನೆಗಳನ್ನು ಕಟ್ಟುವಾಗ ಮಳೆ ಬಂದಾಗ ಮೇಲಿಂದ ಹರಿಯುವ ನೀರು ಮನೆಗೆ ಬರಬಾರದು. ಹಾಗೆಯೇ ಬೀಸುವ ಗಾಳಿಯ ದಿಕ್ಕನ್ನು ತಿಳಿದು ಅದರ ಪ್ರಕಾರದಂತೆ ವಾಸ್ತುವನ್ನು ಮಾಡಿರಲಾಗುತ್ತದೆ. ಇದರಿಂದ ಅಲ್ಲಿ ವಾಸವಿರುವುದಕ್ಕೆ ತೊಂದರೆಯಾಗದಂತೆ ನೋಡಿಕೊಂಡು ವಾಸ್ತುವನ್ನು ಆಧರಿಸಿರಲಾಗಿರುತ್ತದೆ. ಹೀಗಾಗಿ ಫಿಂಗ್ ಶೂಯಿ ವಾಸ್ತುವನ್ನು ಅಲ್ಲಿ ಪಾಲಿಸಲಾಗುತ್ತಿದೆ.
ಇನ್ನು ಚೀನಾದಲ್ಲಿ ಬಹುತೇಕರು ಬ್ಯಾಂಬೂ ಬಳಸಿ ಅಂದರೆ ಬಿದಿರನ್ನು ಬಳಸಿ ಮನೆಗಳನ್ನು ಕಟ್ಟಲಾಗಿರುತ್ತದೆ. ಈ ಬಿದಿರನ ಮನೆಯನ್ನು ಕಟ್ಟಲು ಅವರು ಹೆಚ್ಚಾಗಿ ಮೊಳೆಗಳನ್ನು ಬಳಸಿರುತ್ತಾರೆ. ಹೀಗೆ ಮನೆ ಕಟ್ಟುವುದರಿಂದ ಅವರಿಗೆ ಮರ ಹಾಗೂ ಕಬ್ಬಿಣ ಎರಡೂ ಬಹಳ ಮುಖ್ಯವಾಗಿರುತ್ತದೆ. ಗಾಳಿ, ನೀರು, ಕಬ್ಬಿಣ ಮತ್ತು ಬಿದಿರಿನ ಜೊತೆಗೆ ಬೆಳಕನ್ನು ಬಳಸಿ ವಾಸ್ತುವನ್ನು ಸಿದ್ಧಪಡಿಸಿರುತ್ತಾರೆ. ಇನ್ನು ಸೃಷ್ಟಿ ಚಕ್ರ, ಲಯ ಚಕ್ರ, ಸಮನ್ವಯ ಚಕ್ರದ ಬಗ್ಗೆಯೂ ಹೇಳಿದ್ದಾರೆ. ಈ ಮೂರರಲ್ಲಿ ಯಾವ ತತ್ವ ಹೆಚ್ಚಿರುತ್ತದೋ ಅದನ್ನು ಕಡಿಮೆ ಮಾಡಿಕೊಳ್ಳುವುದು ಹಾಗೂ ಕಡಿಮೆ ಇರುವುದನ್ನು ಹೆಚ್ಚಿಸಿಕೊಳ್ಳುತ್ತಾರೆ.
ಇನ್ನು ಚೀನಾದವರು ಯಾವ ವಸ್ತುವನ್ನು ಯಾವ ಸ್ಥಳದಲ್ಲಿ ಇಟ್ಟರೆ ಹೆಚ್ಚು ಎನರ್ಜಿ ಸಿಗುತ್ತದೆ ಎಂಬುದರ ಬಗ್ಗೆ ಅತಿಯಾಗಿ ಆಲೋಚಿಸುತ್ತಾರೆ. ಹಾಗಾಗಿ ನಾವು ಹೆಚ್ಚಾಗಿ ಅವರ ವಾಸ್ತು ಶಾಸ್ತ್ರವನ್ನು ನಮ್ಮಲ್ಲಿ ಬಳಸುವುದು ಅಷ್ಟು ಸೂಕ್ತವಲ್ಲ. ಕೆಲವು ವಿಚಾರಗಳನ್ನು ಮಾತ್ರವೇ ನಾವು ಅಳವಡಿಸಿಕೊಳ್ಳಬಹುದು. ಆದರೆ, ಹೆಚ್ಚು ಸ್ಥಳದ ಮಹಿಮೆ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಈಗ ಕನ್ನಡಿ ಬಗೆಗಿನ ವಾಸ್ತು ಎರಡೂ ದೇಶದ್ದು ಒಂದೇ ಆಗಿದೆ. ಅದನ್ನು ನಾವು ಬಳಸಬಹುದು.