ಚಾಮರಾಜನಗರ;ಚಾಮರಾಜನಗರದ ನಗರಸಭೆಯಲ್ಲಿ ಇ-ಸ್ವತ್ತು(E-asset) ಮಾಡಿಕೊಡಲು ಒಂದು ಲಕ್ಷ ರೂಗಳಿಗೆ ಬೇಡಿಕೆಯನ್ನು ಇಟ್ಟಿದ್ದ ನಗರಸಭೆ ಕಂದಾಯ ಅಧಿಕಾರಿ ನಾರಾಯಣ್ 20 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದಿದ್ದಾರೆ. ಮಾದೇಶ್ ಎಂಬ ವ್ಯಕ್ತಿಯ ಎರಡು ನಿವೇಶನಗಳನ್ನು ಏಕ ನಿವೇಶನ ಮಾಡಿಕೊಡಲು ಕಂದಾಯ ಅಧಿಕಾರಿ ನಾರಾಯಣ್ ಲಂಚ ಕೇಳಿರುವದಾಗಿ ಲೋಕಾಯುಕ್ತ ಕಚೇರಿಗೆ ದೂರು ಬಂದ ಹಿನ್ನೆಲೆ ಮೇರೆಗೆ ಮಂಗಳವಾರ ಮಧ್ಯಾಹ್ನ ನಗರಸಭೆ ಕಚೇರಿಗೆ ಬಂದು ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ದೂರುದಾರ ಮಾದೇಶ್ ಎಂಬುವರಿಂದ ಕಂದಾಯ ಅಧಿಕಾರಿ ನಾರಾಯಣ್ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ